1.30ಕೋಟಿ ಮೌಲ್ಯದ ಚಿನ್ನಾಭರಣ ಸೇರದಂತೆ ಸ್ವತ್ತು ಫಿರ್ಯಾದುದಾರರಿಗೆ ಹಿಂದಿರುಗಿಸಿದ ಪೊಲೀಸ್ ಆಯುಕ್ತರು

0
112

ಕಲಬುರಗಿ: ಮನೆ ಕಳ್ಳತನ, ಸರಗಳ್ಳತನ, ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಜಪ್ತಿಯಾದ ಕೋಟ್ಯಂತರ ರೂಪಾಯಿ ಚಿನ್ನಾಭರಣ ಸೇರಿದಂತೆ ಇತರೆ ವಸ್ತುಗಳನ್ನು ವಾರಸುದಾರರಿಗೆ ಇಂದು ನಗರ ಪೊಲೀಸ್ ಆಯುಕ್ತ ಎನ್ ಸತೀಶಕುಮಾರ ಅವರು ಹಿಂದಿರುಗಿಸಿದರು.

ಡಿಎಆರ್ ಮೈದಾನದಲ್ಲಿ ಇಂದು ನಡೆದ ಸರಳ ಕಾರ್ಯಕ್ರಮದಲ್ಲಿ ವಿವಿಧ ಠಾಣೆಗಳಲ್ಲಿ ೨೦೧೮ರಲ್ಲಿ ಪತ್ತೆಯಾದಸುಮಾರು ೩.೫೮ ಕೋಟಿ ರೂ. ಮೌಲ್ಯದ ಕಳ್ಳತನ ಪ್ರಕರಣಗಳು ದಾಖಲಾಗದ್ದು ಅವುಗಳಲ್ಲಿ ಸುಮಾರು ೧.೩೫ ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಾರಸುದಾರರಿಗೆ ನೀಡಲಾಯಿತು. ಒಟ್ಟು ೩೩೯ ಪ್ರಕರಗಳು ದಾಖಲಾಗಿವೆ. ಅವುಗಳಲ್ಲಿ ೧೩೦ ಪ್ರಕರಣಗಳನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Contact Your\'s Advertisement; 9902492681

೨೦೧೯ರಲ್ಲಿ ೪೦ ಪ್ರಕರಣಗಳು ದಾಖಲಾಗಿದ್ದು ೧೩೫ ಪ್ರಕರಣಗಳನ್ನು ಪತ್ತೆ ಮಾಡಲಾಗದೆ. ೪ ಕೋಟಿ, ೦೬ಲಕ್ಷ, ೩೫,೦೩೮ ರೂ. ಮೌಲ್ಯದ ಕಳ್ಳತನ ಪ್ರಕರಣದಲ್ಲಿ ೯೧ ಲಕ್ಷ ೮೫೨೩ ಮೌಲ್ಯದ ವಸ್ತುಗಳನ್ನು ಪತ್ತೆ ಮಾಡಲಾಗಿದ್ದು ಫೀರ್ಯಾದುದಾರಿಗೆ ಹಸ್ತಾಂತರಿಸಲಾಗಿದೆ.

೨೦೨೦ ನೇ ಸಾಲಿನಲ್ಲಿ ೧೭೯ ಪ್ರಕರಣಗಳು ದಾಖಲಾಗಿದ್ದು, ಅವುಳಲ್ಲಿ ೫೯ ಪ್ರಕರಣಗಳು ಪತ್ತೆ ಮಾಡಲಾಗಿದೆ. ೩ ಕೋಟಿ ೯ಲಕ್ಷ ೭೦,೩೪೪ ರೂ. ಮೌಲ್ಯದ ವಸ್ತುಗಳು ಕಳತನ ನಡೆದ ಕುರಿತು ಪ್ರಕರಣ ದಾಖಲಾಗಿತ್ತು. ಅವುಗಳಲ್ಲಿ ೮೮ ಲಕ್ಷ, ೮೩,೭೨೦ ರೂಪಾಯಿ ಮೌಲ್ಯದ ಸ್ವತ್ತು ಜಪ್ತಿಮಾಡಲಾಗಿದ್ದು, ೪೧,೮೧,೫೬೦  ರೂಪಾಯಿ ಮೌಲ್ಯದ ಸ್ವತ್ತು ಫಿರಿಯಾದುದಾರಿಗೆ ಹಿಂದುರಿಗಿಸಲಾಗಿದ್ದು, ೪೭.೦೨ ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ಹಿಂದುರಿಗಿಸಬೇಕಾಗಿದೆ.

ಈ ಸಂದರ್ಭದಲ್ಲಿ ಎ.ಬಿ. ಮತ್ತು ಸಿ ವಿಭಾಗದ ನಗರ ಸಹಾಯಕ ಆಯುಕ್ತರು, ವಿವಿಧ ಠಾಣೆಯ ಪಿಐ ಹಾಗೂ ಸಿಬ್ಬಂದಿಗಳು ಉಪಸ್ಥಿತಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here