ತಳವಾರ ಪರಿವಾರ ಸಮುದಾಯಕ್ಕೆ ಕೇದಾರಲಿಂಗಯ್ಯ ಹಿರೇಮಠ ಬೆಂಗಲ: ಹಕ್ಕು ನೀಡಿ ಘನತೆ ಕಾಪಾಡಿಕೊಳ್ಳಲು ಆಗ್ರಹ

0
156

ಕಲಬುರಗಿ: ತಳವಾರ ಪರಿವಾರ ಸಮುದಾಯದವರಿಗೆ ಸಾಮಾಜಿಕ ನ್ಯಾಯ ಸಿಗುವವರೆಗೂ ಜಿಲ್ಲಾ ಹಾಗೂ ರಾಜ್ಯ ಜಾತ್ಯಾತೀತ ಜನತಾದಳ ನಿಮ್ಮ ಬೆನ್ನಿಗೆ ನಿಲ್ಲುತ್ತದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಕೇದಾರಲಿಂಗಯ್ಯ ಹಿರೇಮಠ ಹೇಳಿದರು.

ತಳವಾರ ಪರಿವಾರ ಎಸ್.ಟಿ ಹೋರಾಟ ಸಮಿತಿ ಹಮ್ಮಿಕೊಂಡಿರುವ 19ನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಾಗೂ ಮೂರನೇ ದಿನದ ಸರತಿ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು ನೀವು ಕೇಳುತ್ತಿರುವದು ನಿಮ್ಮ ಹಕ್ಕು, ಅದು ನ್ಯಾಯಯುವಾಗಿದೆ. ಈ ದೇಶದ ಅತ್ಯುನ್ನತ ಸಂವಿಧಾನ ನಿಮಗೆ ಈ ಸೌಲಭ್ಯ ನೀಡಿದೆ. ರಾಷ್ಟ್ರಪತಿಯವರ  ಆದೇಶದಂತೆ ಕೇಂದ್ರ ಸರಕಾರ ಕೂಡ ಒಪ್ಪಿಕೊಂಡಿದೆ ಎಂದರು.

Contact Your\'s Advertisement; 9902492681

ಅಂದಮೇಲೆ ಅದು  ಈ ದೇಶದ ಸಂವಿಧಾನ ಬದ್ಧವಾದ ಕಾನೂನು. ಆದರೆ ತಳವಾರ, ಪರಿವಾರ  ಸಮುದಾಯಗಳ ವಿಷಯದಲ್ಲಿ ರಾಜ್ಯ ಸರಕಾರ  ಸಂವಿಧಾನ ಉಲ್ಲಂಘನೆ ಮಾಡಿದೆ. ಇದರಿಂದ ಒಂದು ಸಮುದಾಯಕ್ಕೆ ಸಾವಿಧಾನಿಕ ಅನ್ಯಾಯವಾಗುತ್ತಿದೆ. ರಾಜ್ಯ ಸರಕಾರ ಇಷ್ಟೊಂದು ಮೊಂಡುತನಕ್ಕೆ ಬಿದ್ದಿರುವುದು ಯಾವ ಪುರುಷಾರ್ಥಕ್ಕೆ. ಯಾರದೋ ಹಿತ ರಕ್ಷಣೆಯಲ್ಲಿ ರಾಜ್ಯ ಸರಕಾರ ಮಲತಾಯಿ ಧೋರಣೆ ತೋರುತ್ತಿದೆ ಆರೋಪಿಸಿದರು.

ಈಗಲಾದರೂ ಸರಕಾರ ಎಚ್ಚೆತ್ತುಕೊಂಡು ತಳವಾರ, ಪರಿವಾರ ಸಮುದಾಯದವರಿಗೆ ಸಿಗಬೇಕಾದ ನ್ಯಾಯ, ಅದು ಅವರ ಹಕ್ಕು. ನೀವು ಅದನ್ನು ನೀಡಿ ನಿಮ್ಮ ಘನತೆಯನ್ನು ಕಾಪಾಡಿಕೊಳ್ಳಿ.  ಒಂದು ವೇಳೆ ಇವರನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ನೀವು ಕುರ್ಚಿಯಿಂದ ಕೆಳಗಿಳಿಯಬೇಕಾಗುತ್ತದೆ.  ಏಕೆಂದರೆ ಅವರ ಹೋರಾಟಕ್ಕೆ ಬೆಂಬಲಿಸಲು ನಾವು ಸದಾ ಸಿದ್ದರಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಾರ್ವತಿ ಪುರಾಣಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ, ನಾಮದೇವ ಎಸ್ ಕಾಂಬ್ಳೆ, ರುಕ್ಮಿಣಿ ಬಾಯಿ, ಶೇಕ್ ಮೈನುದ್ದೀನ್, ಚಂದ್ರಕಾಂತ್ ಮೇಯರ್, ಸಿದ್ದು ಮಾವನೂರ್ ನಾಗೇಂದ್ರ ರೆಡ್ಡಿ, ಡಾ: ಸರ್ದಾರ್ ರಾಯಪ್ಪ , ರಾಜೇಂದ್ರ ರಾಜವಾಳ, ಸುನಿತಾ ತಳವಾರ್, ಚಂದ್ರಶೇಖರ್ ಜಮಾದಾರ್ ವಕೀಲರು, ಶರಣು ಕೋಳಿ ,ಚಂದ್ರಶೇಖರ್ ಗಂವ್ಹಾರ್, ಅನಿಲ್ ಕಾಮಣ್ಣ ವಚ್ಚ, ಇನ್ನು ಮುಂತಾದವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here