ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಸಂಕಲ್ಪಮಾಡೋಣ: ಡಾ ತೇಜಸ್ವಿನಿ ಅನಂತಕುಮಾರ್‌

0
52

ಬೆಂಗಳೂರು : ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಕಷ್ಟದ ಸಂಧರ್ಭದಲ್ಲೂ ಜನರ ಜೊತೆ ಇದ್ದು ದೇಶವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಅವರ ಹುಟ್ಟು ಹಬ್ಬದ ಸಂಧರ್ಭದಲ್ಲಿ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಸಂಕಲ್ಪ ಕೈಗೊಳ್ಳೋಣ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಡಾ ತೇಜಸ್ವಿನಿ ಅನಂತಕುಮಾರ್‌ ಕರೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಪ್ರಯುಕ್ತ ಸೇವಾ ಸಪ್ತಾಹದ ಅಂಗವಾಗಿ ಜಯನಗರದಲ್ಲಿ ಆಯೋಜಿಸಲಾಗಿದ್ದ ಕೃತಕ ಕೈ ಹಾಗೂ ಕಾಲು ಜೋಡಣಾ ಉಪಕರಣಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ದೇಶ ಕಂಡಿರುವ ಅಪ್ರತಿಮ ನಾಯಕ ಹಾಗೂ ಸೇವಾ ಧುರೀಣರು ನಮ್ಮ ಪ್ರಧಾನಿಗಳಾದ ನರೇಂದ್ರ ಮೋದಿ ಅವರು. ದಿವಂಗತ ಅನಂತಕುಮಾರ್‌ ಅವರ ಜೊತೆ ಅವರಿಗಿದ್ದ ಒಡನಾಟ ಬಹಳ ಆತ್ಮೀಯವಾದದ್ದು. ನಮ್ಮ ಸೇವಾ ಕಾರ್ಯಚಟುವಟಿಕೆಗಳಿಗೆ ನರೇಂದ್ರ ಮೋದಿ ಅವರ ಬೆಂಬಲ ಇದೆ ಎಂದು ನೆನಪಿಸಿಕೊಂಡರು.

Contact Your\'s Advertisement; 9902492681

ಕರೋನಾ ಸಂಕಷ್ಟದ ಕಾಲದಲ್ಲಿ, ಅಕ್ಕ ಪಕ್ಕದ ರಾಷ್ಟ್ರಗಳ ಸಮಸ್ಯೆಗಳ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕೋಟ್ಯಾಂತರ ಜನರ ಹಸಿವನ್ನು ನೀಗಿಸುವ ಕೆಲಸವನ್ನು ಮಾಡಿದ್ದಾರೆ. ಅವರ ಹುಟ್ಟುಹಬ್ಬದ ಈ ಸಂಧರ್ಭದಲ್ಲಿ ನಾವು ನಮ್ಮ ಅಕ್ಕ ಪಕ್ಕದ ಕೆಲವು ಜನರಿಗಾದರೂ ಸಹಾಯ ಮಾಡುವ ಸಂಕಲ್ಪವನ್ನು ಮಾಡುವ ಧೃಢ ನಿರ್ಧಾರ ಕೈಗೊಳ್ಳಬೇಕು ಎಂದು ಕರೆ ನೀಡಿದರು.

ಈ ದಿನ ಸುಮಾರು 70 ಜನರಿಗೆ ಕೃತಕ ಕೈ ಮತ್ತು ಕಾಲುಗಳನ್ನು ನೀಡಲಾಗುತ್ತಿದೆ ಹಾಗೂ 70 ಗಿಡಗಳನ್ನು ನಡೆಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷರಾದ ಎನ್‌ ಆರ್‌ ರಮೇಶ್‌, ಮಾಜಿ ಮಹಾಪೌರರಾದ ಎಸ್‌ ಕೆ ನಟರಾಜ್‌, ಕರ್ನಾಟಕ ಮಾರ್ವಾಡಿ ಯುತ್‌ ಫೆಡರೇಶನ್‌ ಅಧ್ಯಕ್ಷ ಶ್ರೀ ಡಾ. ಉತ್ತಮ್‌ ಕೆಂಚ, ಕಾರ್ಯದರ್ಶಿ ಪ್ರಶಾಂತ್‌ ಸಿಂಘಿ, ಜಯನಗರ ಬಿ.ಜೆ.ಪಿ ಮಂಡಲ್‌ ಅಧ್ಯಕ್ಷ ಚಂದ್ರಶೇಖರ್‌ ರಾಜು, ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀಮತಿ ನಾಗರತ್ನ ರಾಮಮೂರ್ತಿ, ಶ್ರೀ, ಸಿ.ಕೆ ರಾಮಮೂರ್ತಿ, ಗೋವಿಂದ ನಾಯ್ಡು, ಪ್ರಹ್ಲಾದ್‌ ಬಾಬು, ಮಾಜಿ ಮಂಡಲ್‌ ಅಧ್ಯಕ್ಷರಾದ ಮಂಜುನಾಥ ರೆಡ್ಡಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ನಂತರ ರಾಗಿಹಳ್ಳಿಯಲ್ಲಿ 70 ಗಿಡಗಳನ್ನು ನಡೆಲಾಯಿತು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here