ಕಲಬುರಗಿ: ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಕಲ್ಯಾಣ ಕರ್ನಾಟಕ ಉತ್ಸವ ದಿನಚಾರಣೆ ನಿಮಿತ್ತ ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ್ ವಿ. ನಿಷ್ಠಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೆಲ್ಲರೂ ಕಡ್ಡಾಯವಾಗಿ ಮಾಸ್ಕ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ವಹಿಸಲಾಯಿತು.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ವಿವಿ ಸಮಕುಲಪತಿ ಡಾ. ವಿ.ಡಿ.ಮೈತ್ರಿ, ಕುಲಸಚಿವ ಡಾ. ಅನೀಲಕುಮಾರ ಬಿಡವೆ, ಡೀನ್. ಡಾ. ಲಕ್ಮ್ಷಿ ಮಾಕಾ ಮತ್ತು ಡಾ. ಬಸವರಾಜ ಮಠಪತಿ, ಡಾ. ಎಸ್. ಜಿ. ಡೊಳ್ಳೆಗೌಡರ್, ಡಾ. ಸುರೇಶ ನಂದಗಾಂವ, ಡಾ. ಶಿವರಾಜ ಶಾಸ್ತ್ರಿ ಹೇರೂರ, ಟಿ.ವಿ. ಶಿವಾನಂದನ್, ಡಾ. ಗೀತಾ ಹರವಾಳ, ಡಾ. ವಾಣಿಶ್ರಿ ವಿಶ್ವವಿದ್ಯಾಲಯದ ವಿವಿಧ ವಿಭಾಗದ ಮುಖ್ಯಸ್ಥರು ಇದ್ದರು.