ಕಲಬುರಗಿ: ಸರ್ಕಾರಿ ಪದವಿ ಪೂರ್ವ ಕಾಲೇಜು ಜಿಲಾನಾಬಾದ್‌ನಲ್ಲಿ ಪ್ರಭಾರಿ ಪ್ರಾಚಾರ್ಯರಾದ ಮಹಾದೇವ ನಲಕಂಠೆ ರವರ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಾ. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ನಾಯಕತ್ವದಲ್ಲಿ ಅಖಂಡ ಭಾರತದ ರಾಜ್ಯಗಳ ವೀಲಿನದ ಜವಾಬ್ದಾರಿ ವಹಿಸಿಕೊಂಡು ನವ ಭಾರತ ನಿರ್ಮಾಣ ಕಾರ್ಯ ಯಶಸ್ವಿಗೊಳಿಸಿದರು.ಅಂದಿನ ಕಾಲದಲ್ಲಿ ಪ್ರಮುಖವಾದ ಮೂರು ಸಂಸ್ಥಾನಗಳಾದ ಜುನಾವಗಡ, ಜಮ್ಮು ಕಾಶ್ಮೀರ ಮತ್ತು ಹೈದರಾಬಾದ್ ಸಂಸ್ಥಾನಗಳು ಇವುಗಳನ್ನು ಒಗ್ಗುಡಿಸಿದ ಕೀರ್ತಿ ಪಟೇಲ್ ಅವರಿಗೆ ಸಲ್ಲುತ್ತದೆ.
ನಂತರ ೧೯೪೮ ಸೆಪ್ಟೆಂಬರ್ ೧೭ ರಂದ್ದು .”ಆಪರೇಷನ್ ಪೋಲೋ” ಮುಖಾಂತರ ಹೈದರಾಬಾದ್ ಸಂಸ್ಥಾನ ಭಾರತದ ಒಕ್ಕೂಟಕ್ಕೆ ಸೆರ್ಪಡೆಗೊಂಡ ದಿನವನ್ನು ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.ಅಖಂಡ ಭಾರತದ ಕನಸ್ಸು ಪಟೇಲ್ ರವರ ಆಶಯವಾಗಿತ್ತು.
ಇತ್ತಿಚೆಗೆ ಕರ್ನಾಟಕ ಸರ್ಕಾರವು ಈ ದಿನವನ್ನು ಕಲ್ಯಾಣ ಕರ್ನಾಟಕ ಉತ್ಸವ ದಿನವನ್ನಾಗಿ ಆಚರಣೆ ಮಾಡುತ್ತಿರುವುದು ಆತಂತ್ಯ ಸಂತೋಷದ ವಿಷಯ ಎಂದು ಹೇಳಿದರು.
ಉಪನ್ಯಾಸಕರಾದ ಶಾಂತಗೌಡ ಪಾಟೀಲ, ರಮೇಶ ಮಾಡಿಯ್ಯಾಳಕರ, ಸೋಮಶೇಖರ ಚವ್ಹಾಣ, ಡಾ: ವಿಶ್ವನಾಥ ಹೊಸಮನಿ, ಧರ್ಮರಾಜ ಜವಳಿ, ರೇಷ್ಮಾ ಖಾತೂನ , ರಾಜಶೇಖರ ಮಿಣಜಿಗಿ, ನೀಲಮ್ಮಾ ಪಾಟೀಲ, ಜಮುನಾಬಾಯಿ ಟಿಳೆ,ಎಸಡಿಸಿ ದೇವೇಂದ್ರ ನೇಲೊಗಿ, ಸಹಾಯಕಿ ಜೈನಬಿ ಹಾಜರಿದ್ದರು.