ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಟಿ. ರವಿ ರವರು ಕಾನ್ವಾಸ್ ಮೇಲೆ ರೇಖಾ ಚಿತ್ರವನ್ನು ಚಿತ್ರಿಸಿ ಕಲಾಶಿಬಿರವನ್ನು ಉದ್ಘಾಟಿಸಿದರು
ಕರ್ನಾಟಕ ಲಲಿತಾಕಲಾ ಅಕಾಡೆಮಿಯು ಕೋವಿಡ್-೧೯ ಸಾಂಕ್ರಾಮಿಕ ಕಾರಣದಿಂದ ಸಾಮಾಜಿಕ ಅಂತರ ಕಾಪಾಡುವ ಹಿನ್ನೆಲೆಯಲ್ಲಿ ಆನ್‌ಲೈನ್ ಕಲಾಶಿಬಿರವನ್ನು ದಿನಾಂಕ ೧೮-೦೯-೨೦೨೦ ರಿಂದ ೨೫-೦೯-೨೦೨೦ರ ವರೆಗೆ, ರಾಜ್ಯದ ೬೦ ಜನ ಕಲಾವಿದರನ್ನು ಏಕ ಕಾಲದಲ್ಲಿ ತಮ್ಮ ಸ್ಟುಡಿಯೋ ಹಾಗೂ ಮನೆಯಲ್ಲಿ ಕಲಾಕೃತಿಯನ್ನು ರಚಿಸಿ ಶಿಬಿರದಲ್ಲಿ ರಚನೆ ಮಾಡಿರುವ ಕಲಾಕೃತಿಗಳನ್ನು ಆನ್‌ಲೈನ್ ಮೂಲಕ ವೀಕ್ಷಿಸಬಹುದಾಗಿದೆ. ಇದು ಅಕಾಡೆಮಿಯ ಇತಿಹಾಸದಲ್ಲಿ ಒಂದು ವಿಷೇಶವಾದ ಕಾರ್ಯಕ್ರಮವಾಗಿದೆ.
ಕರ್ನಾಟಕ ಲಲಿತಾಕಲಾ ಅಕಾಡೆಮಿಯ ಅಧ್ಯಕ್ಷರಾದ ಮಹೇಂದ್ರ ಡಿ. ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.