64 ಖರೀದಿ ಕೇಂದ್ರಗಳಲ್ಲಿ ಬೆಂಬಲ ಬೆಲೆ ಯೋಜನೆಯಡಿ ಹೆಸರು, ಉದ್ದು ಖರೀದಿ:ವವಿ.ವಿ.ಜ್ಯೋತ್ಸ್ನಾ

0
37

ಕಲಬುರಗಿ: ಕೇಂದ್ರ ಸರ್ಕಾರದ 2020-21ನೇ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಹೆಸರು ಕಾಳು ಮತ್ತು ಉದ್ದು ಕಾಳು ಖರೀದಿಗೆ ಸರ್ಕಾರ ಆದೇಶಿಸಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯಾದ್ಯಂತ ಒಟ್ಟು 64 ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ಹೆಸರು ಕಾಳನ್ನು ಪ್ರತಿ ಕ್ವಿಂಟಲ್ ದರ 7196 ರೂ. ಮತ್ತು ಉದ್ದು ಕಾಳನ್ನು ಪ್ರತಿ ಕ್ವಿಂಟಲ್ ದರ 6000 ರೂ. ಗಳಂತೆ ಖರೀದಿಸಲಾಗುತ್ತದೆ. ಹೆಸರು ಕಾಳನ್ನು ಪ್ರತಿ ಎಕರೆಗೆ 4 ಕ್ವಿಂಟಲ್‍ರಂತೆ ಪ್ರತಿ ರೈತನಿಂದ ಗರಿಷ್ಠ 4 ಕ್ವಿಂಟಾಲ್ ಮತ್ತು ಉದ್ದು ಕಾಳನ್ನು ಪ್ರತಿ ಎಕರೆಗೆ 3 ಕ್ವಿಂಟಲ್‍ರಂತೆ ಪ್ರತಿ ರೈತನಿಂದ ಗರಿಷ್ಠ 6 ಕ್ವಿಂಟಾಲ್ ಮಾತ್ರ ಖರೀದಿಸಲಾಗುತ್ತಿದೆ.

Contact Your\'s Advertisement; 9902492681

ಹೆಸರು ಮತ್ತು ಉದ್ದು ಕಾಳು ಬೆಳೆದಿರುವ ರೈತ ಬಾಂಧವರು ಅಗತ್ಯ ಮಾಹಿತಿಗಳೊಂದಿಗೆ ಸಮೀಪದ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಆನ್‍ಲೈನ್ ಮೂಲಕ ಕೃಷಿ ಉತ್ಪನ್ನ ಮಾರಾಟ ಮಾಡಲು ದಿ.15-10-2020 ರೊಳಗೆ ಹೆಸರು ನೋಂದಣಿ ಮಾಡಿಕೊಂಡು ದಿ.15-11-2020 ರೊಳಗೆ ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ರೈತ ಸಮುದಾಯದಲ್ಲಿ ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತದ ಅಡಿಯಲ್ಲಿ ಸ್ಥಾಪಿಸಲಾದ ಹೆಸರು ಮತ್ತು ಉದ್ದು ಕಾಳು ಖರೀದಿ ಕೇಂದ್ರಗಳ ವಿವರ ತಾಲೂಕುವಾರು ಇಂತಿವೆ.
ಕಲಬುರಗಿ: ಅವರಾದ್(ಬಿ), ಸೊಂತ, ಸಾವಳಗಿ, ಮಹಾಗಾಂವ, ಹರಸೂರ ಹಾಗೂ ಡೊಂಗರಗಾಂವ ಪ್ರಾ.ಕೃ.ಪ.ಸ.ಸಂಘ ನಿಯಮಿತ ಹಾಗೂ ಗ್ರಾಮೀಣ ತೋಟಗಾರಿಕಾ ರೈತ ಉತ್ಪಾದಕರ ಕಂಪನಿ ಕಮಲಾಪೂರ ಮತ್ತು ನೇಗಿಲಯೋಗಿ ರೈತ ಉತ್ಪಾದಕ ಸಂಘ ಮೇಳಕುಂದಾ(ಬಿ).

ಆಳಂದ: ಖಜೂರಿ, ಮಾದನಹಿಪ್ಪರಗಾ, ನಿಂಬರ್ಗಾ, ಸರಸಂಬಾ, ಕಮಲಾನಗರ, ಮುನ್ನೊಳ್ಳಿ, ಯಳಸಂಗಿ, ಹಿರೋಳ್ಳಿ, ತಡಕಲ್, ಬೊಮ್ಮನಳ್ಳಿ, ಕಡಗಂಚಿ, ನರೋಣಾ ಹಾಗೂ ನಿಂಬಾಳ ಪ್ರಾ.ಕೃ.ಪ.ಸ.ಸಂಘ ನಿಯಮಿತ.

ಅಫಜಲಪೂರ: ಕರಜಗಿ, ಅತನೂರ್ ಹಾಗೂ ಬೈರಾಮಡಗಿ ಪ್ರಾ.ಕೃ.ಪ.ಸ.ಸಂಘ ನಿಯಮಿತ. ಜೇವರ್ಗಿ: ಜೇರಟಗಿ, ಕುಮನಸಿರಸಗಿ ಹಾಗೂ ನರಿಬೋಳ ಪ್ರಾ.ಕೃ.ಪ.ಸ.ಸಂಘ ನಿಯಮಿತ.

ಸೇಡಂ: ಮುಧೋಳ, ಹಾಬಾಳ್(ಟಿ), ಅಡಕಿ, ಸಿಂಧನಮಡು, ಕಾನಾಗಡ್ಡಾ, ಕೋಳಕುಂದಾ, ಮೋತಕಪಲ್ಲಿ, ಯಡಗಾ, ಕೋಳಕುಂದಾ ಗ್ರಾಮೀಣ ಪ್ರಾ.ಕೃ.ಪ.ಸ.ಸಂಘ ನಿಯಮಿತ ಹಾಗೂ ಬಲಭೀಮಸೇನಾ ರೈತ ಉತ್ಪಾದಕರ ಸಂಸ್ಥೆ ಬೀದರಚೇಡ್ ಮತ್ತು ಕಾಗಿಣಾ ರೈತ ಉತ್ಪಾದಕರ ಸಂಸ್ಥೆ ಸುರವಾರ.

ಚಿತ್ತಾಪೂರ: ನಾಲವಾರ, ಕಾಳಗಿ, ರಾವೂರ, ಹಲಕಟ್ಟಾ, ಕೊಡದೂರ್, ದಂಡೋತಿ, ಅರಣಕಲ್, ಹೆಬ್ಬಾಳ, ಭೀಮನಹಳ್ಳಿ, ಟೆಂಗಳಿ, ಆಲ್ಲೂರ(ಬಿ), ಮಂಗಲಗಿ, ಡೋಣಗಾಂವ್, ಪೇಟಶಿರೂರ, ಹೇರೂರ ಹಾಗೂ ಕುಂದಗೋಳ ಪ್ರಾ.ಕೃ.ಪ.ಸ.ಸಂಘ ನಿಯಮಿತ.

ಚಿಂಚೋಳಿ: ಚಿಮ್ಮನ್‍ಚೋಡ್, ಕೋಡ್ಲಿ, ಐನಾಪೂರ, ಸಾಲೇಬೀರನಳ್ಳಿ, ಐನೋಳ್ಳಿ, ಗರಗಪಳ್ಳಿ, ಕನಕಪುರ, ರುದ್ರನೂರ ಹಾಗೂ ಸುಲೇಪೇಟ್ ಪ್ರಾ.ಕೃ.ಪ.ಸ.ಸಂಘ ನಿಯಮಿತ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here