ಸುರಪುರ: ವಿಧ್ಯಾರ್ಥಿಗಳು ಹಾಗೂ ಯುವಜನರು ವಿಧ್ಯಾಬ್ಯಾಸದ ಜೊತೆಗೆ ಕ್ರೀಡೆಗಳಲ್ಲಿಯು ಹೆಚ್ಚು ಆಸಕ್ತಿ ವಹಿಸಬೇಕು ಎಂದು ವಿಕಲಚೇತನ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸಂಗನಗೌಡ ಧನರೆಡ್ಡಿ ಹೇಳಿದರು.
ನೆಹರು ಯುವ ಕೇಂದ್ರ ಕಲಬುರಗಿ, ಸಗರನಾಡು ಯುವಕ ಸಂಘ ಕನ್ನೆಳ್ಳಿ ಸಹಯೋಗದೊಂದಿಗೆ ರಂಗಂಪೇಟೆಯ ಖಾದಿ ಕೇಂದ್ರ ಆವರಣದಲ್ಲಿ ಆಯೋಜನೆ ಮಾಡಲಾಗಿದ್ದ ಫಿಟ್ ಇಂಡಿಯಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿಧ್ಯಾರ್ಜನೆಯಿಂದ ಮಾನಸಿಕವಾಗಿ ನಾವು ಸದೃಢರಾದರೆ ಕ್ರೀಡೆಗಳಿಂದ ದೈಹಿಕವಾಗಿ ಸಬಲರಾಗುತ್ತಾರೆ, ಆಕಾರಣದಿಂದ ಉತ್ತಮ ಆರೋಗ್ಯ ಹಾಗೂ ದೈಹಿಕ ಬಲವರ್ಧನೆಗಾಗಿ ಕ್ರೀಡೆಗಳಲ್ಲಿ ಹೆಚ್ಚು ಆಸಕ್ತಿಯಿಂದ ಯುವ ಜನರು ಭಾಗವಹಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಗರನಾಡು ಯುವಕ ಸಂಘದ ಅಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿ, ಕರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಕಾರ್ಯಕ್ರಮಗಳು ಸರಕಾರದ ಆದೇಶ ಅನ್ವಯ ಆನ್‌ಲೈನ್ ಕಾರ್ಯಕ್ರಮಗಳು ನಡೆಯುತ್ತಿದ್ದು ಆ ದೀಶೆಯಲ್ಲಿ ಸಗರನಾಡು ಯುವಕ ಸಂಘ ಇವತ್ತು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದೆ. ಯುವ ಜನರು ಹೆಚ್ಚಾಗಿ ಕ್ರೀಡೆಗಳ ಮೇಲೆ ಒಲವು ತೋರಬೆಕು ಎಂದು ಹೇಳಿದರು.
ಸರ್ವಜ್ಞ ಸೇವಾ ಸಂಸ್ಥೆಯ ಅಧ್ಯಕ್ಷ ಅಂಬ್ರೇಶ ಕುಂಬಾರ, ಪ್ರತಿಸ್ಪಂದನ ಸಾಂಸ್ಕೃತಿಕ ಯುವಕ ಸಂಘದ ಅಧ್ಯಕ್ಷ ಮೌನೇಶ ಐನಾಪುರ ಅತಿಥಿಗಳಾಗಿ ಪಾಲ್ಗೊಂಡಿದ್ದರು, ಕಾರ್ಯಕ್ರಮವನ್ನು ಪ್ರವೀಣ ಜಕಾತಿ ನಿರೂಪಿಸಿ ವಂದಿಸಿದರು.