ನಾವು ಬದಲಾದರೆ ಸಮಾಜ ಬದಲಾಗುತ್ತದೆ: ಧರ್ಮಪ್ರಕಾಶ ಪಾಟೀಲ 

0
151

ಕಲಬುರಗಿ: ವಿಶ್ವದ ರತ್ನಗಳಾದ ಬುದ್ಧ, ಬಸವಣ್ಣನವರ ಸಾಮಾಜಿಕ ಸಮಾನತೆಯ ಕ್ರಾಂತಿಕಾರಿಕ ವಿಚಾರಗಳನ್ನು ಅರಿತುಕೊಂಡು ಅವರ ಹಾದಿಯಲ್ಲಿಯೇ ಸಾಗಿ ಆಧುನಿಕಭಾರತದಲ್ಲಿ ಮಹಾನ್ ಮಾನವತಾವಾದಿಯಾಗಿ ಬೆಳೆದ ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು, ಇಡೀ ಜಗತ್ತೇ ಗೌರವಿಸುವ ನೇತಾರರಾಗಿದ್ದರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಅಂಬಾರಾಯ ಅಷ್ಠಗಿ ಹಾಗೂ ಮಾಜಿ ಮೇಯರ್ ಧರ್ಮಪ್ರಕಾಶ ಪಾಟೀಲ ಹೇಳಿದರು.

ಮಹಾತ್ಮಾ ಬಸವೇಶ್ವರ ಕಾಲೋನಿಯ ಬುದ್ಧ, ಬಸವ, ಅಂಬೇಡ್ಕರ್ ಯುವಕರ ಬಳಗದ ವತಿಯಿಂದ ನಗರದ ಎಂ.ಬಿ.ನಗರದ ಬಸವೇಶ್ವರ ವೃತ್ತದಲ್ಲಿ ‘ಮಹಾನಾಯಕನೀತ ಮಹಾಮಾನವ ಡಾ.ಅಂಬೇಡ್ಕರ್’ ಎನ್ನುವ ವಿಶೇಷ ಕಾರ್ಯಕ್ರಮ ಸಸಿಗೆ ನೀರೂಣಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಿಂದಲೇ ಸಮಾಜದ ಅಭಿವೃದ್ಧಿ ಸಾಧ್ಯ. ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎನ್ನುವ ಮನೋಭಾವವನ್ನು ಡಾ.ಅಂಬೇಡ್ಕರ್ ಹೊಂದಿದ್ದರು ಎಂದು ಮಾರ್ಮಿಕವಾಗಿ ಹೇಳಿದರು.

Contact Your\'s Advertisement; 9902492681

ಶರಣ ಸಾಹಿತಿ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಮಹಾಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ರವರು ಬಾಲ್ಯದಿಂದಲೇ ಅಸ್ಪೃಶ್ಯತೆಯ ಸಂಕಷ್ಟ ಎದುರಿಸಿದರೂ ಹೆದರದೆ ತಮ್ಮ ವಿದ್ಯಾಭ್ಯಾಸ ಪೂರೈಸಿ ಶೋಷಿತರ ಹಕ್ಕುಗಳನ್ನು ಪ್ರತಿಪಾದಿಸಿದ ಮತ್ತು ಅವರ ಸ್ವಾತಂತ್ರ್ಯಕ್ಕಾಗಿ ಹೋರಾಡುವ ನಾಯಕರಾಗಿ ಬೆಳೆಯಲು ಡಾ.ಅಂಬೇಡ್ಕರ್ ರವರು ಭಾರತ ಸ್ವತಂತ್ರವಾದ ನಂತರ ಕಾನೂನು ಸಚಿವರಾಗಿ, ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ ಅವರ ಕೊಡುಗೆ ಅನುಪಮವಾದುದು ಎಂದರು.

ಮಾಜಿ ಉಪಮೇಯರ್ ನಂದಕುಮಾರ ಮಾಲಿಪಾಟೀಲ, ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ್, ಕಾರ್ಯದರ್ಶಿ ಆರ್.ಜಿ.ಶಟಗಾರ, ಜೇಡಿಎಸ್ ಮುಖಂಡ ಬಸವರಾಜ ಬಿರಬಿಟ್ಟೆ, ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಟೆಂಗಳಿ, ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ದಿನೇಶ ದೊಡ್ಮನಿ, ಪ್ರಮುಖರಾದ ಶಿವಾನಂದ ಹೊನಗುಂಟಿ, ಧರ್ಮಣ್ಣ ಕೋನೆಕರ್, ಮಲ್ಲಿನಾಥ ಬಿರಾದಾರ, ಜಗದೀಶ ಧರ್ಮಪ್ರಕಾಶ ಪಾಟೀಲ, ಮಂಜುನಾಥ ಕಳಸ್ಕರ್, ಸಿದ್ಧರಾಮ ಯಳವಂತಗಿ, ನಾಗಣ್ಣ ಕುಸನೂರ, ಕವಿರಾಜ್ ಕೋಳಕೂರ, ಪ್ರಭವ ಪಟ್ಟಣಕರ್, ಎಸ್.ಎಂ.ಪಟ್ಟಣಕರ್, ರವಿಕುಮಾರ ಶಹಾಪುರಕರ್, ಸಂಗಮನಾಥ ಎಸ್.ಪುಂಡಾ, ಇರ್ಫಾನ್ ಪಟೇಲ್, ಮಲ್ಲಿಕಾರ್ಜುನ ಬರುಡೆ,ಮಲ್ಲಿಕಾರ್ಜುನ ಶ್ರೀಮಾನ್, ರಾಚಯ್ಯಸ್ವಾಮಿ, ಶಂಕರಗೌಡ ಪಾಟೀಲ, ವಿರೇಶ ವಾಲಿಶೆಟ್ಟಿ, ಮಹೇಶ ಕೋಲಕುಂದಿ, ಸಾಯಿಕಿರಣ ಮಾಲಿಪಾಟೀಲ, ಈಶ್ವರ ಮೋದಿ, ರವೀಂದ್ರ ಬಿರಾದಾರ, ರಾಜೇಶ ಬಡಿಗೇರ, ಮಹಾಂತೇಶ ಕಲಬುರಗಿ, ಮಲ್ಲು ಪಾಟೀಲ, ಮಲ್ಲಿಕಾರ್ಜುನ ಬಗಲಿ, ಅಶೋಕ ಇಂಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದ ಡಾ.ಅಂಬೇಡ್ಕರ್ ಅವರ ಕಾರ್ಯ ಶ್ಲಾಘನೀಯವಾದದ್ದು. ಬುದ್ಧ , ಬಸವ, ಅಂಬೇಡ್ಕರ್ ಅವರು ವಿಶ್ವ ಕಂಡ ಮೂರು ರತ್ನಗಳು ಇದ್ದಂತೆ. ಸಮಾಜಕ್ಕೆ ಅವರ ಕೊಡುಗೆ ಅಪಾರವಾದದ್ದು. – ಜಗದೀಶ ಧರ್ಮಪ್ರಕಾಶ ಪಾಟೀಲ, ಬಸವತತ್ವ ಆಚರಣಾ ಸಂಸ್ಥೆ ಕಲಬುರಗಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here