ಯಾದಗಿರಿ: ಎಸಿಬಿ ಬಲೆಗೆ ಮತ್ತೊಂದು ವಿಕೆಟ್ ಪತನ

0
78

ಯಾದಗಿರಿ: ಕಳೆದ ದಿನಗಳ ಹಿಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಬಾಬುರವರು ಎಸಿಬಿ ಬಲೆಗೆ ಬಿದ್ದ ದಿನಗಳು ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ವಿಕೆಟ್ ಪತನಗೊಂಡಿದೆ.

ಜಿಲ್ಲಾ ಲೆಕ್ಕಪರಿಶೋಧನ ಇಲಾಖೆಯ ಅಧಿಕಾರಿ ರವಿಕುಮಾರ್ ಅವರು ಎಸಿಬಿ ಬಲೆಗೆ ಬಿದ್ದ ಮತ್ತೋರ್ವ ಅಧಿಕಾರಿಯಾಗಿದ್ದಾರೆ. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಿಂದ 30000 ಹಣವನ್ನು ಬೇಡಿಕೆಯಿಟ್ಟ ಹಿನ್ನೆಲೆ ಎಸಿಬಿ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

Contact Your\'s Advertisement; 9902492681

ಜಿಲ್ಲೆ ಲೆಕ್ಕಪರಿಶೋಧನೆ ಇಲಾಖೆ ಅಧಿಕಾರಿ ರವಿಕುಮಾರ್ ಅವರು ಕೆಲವು ದಿನಗಳ ಹಿಂದೆ ಪಸ್ಪೂಲ್ ಗ್ರಾಮ ಪಂಚಾಯಿತಿಗೆ ಅಡಿಟ್ ಮಾಡಲು ಹೋಗಿದ್ದರು ಎಂದು ಮಾಹಿತಿ ತಿಳಿದು ಬಂದಿದೆ. ಪಸ್ಪೂಲ್ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಮಲ್ಲಣ್ಣ ಅವರು ಇಂದು 30000 ರೂ. ಹಣವನ್ನು ನೀಡಲು ಹೋದಾಗ ಎಸಿಬಿ ಡಿವೈಎಸ್ಪಿ ಬಸಿರ್ ಪಟೇಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಗಳಾದ  ಗುರುಪಾದಪ್ಪ ಬಿರಾದರ್ ಹಾಗೂ ರಾಘವೇಂದ್ರ , ಸಿಬ್ಬಂದಿ ಅಮರ್ನಾಥ್ ಗಾಯಕ್ವಾಡ್  ದಾಳಿಯಲ್ಲಿ ಭಾಗಿಯಾಗಿದ್ದಾರೆ.

ವಿಪರ್ಯಾಸವೆಂದರೆ ಲೆಕ್ಕಪರಿಶೋಧನೆ ಇಲಾಖೆಯು ಜಿಲ್ಲಾಡಳಿತದ ಜಿಲ್ಲಾಧಿಕಾರಿಗಳ ಕಚೇರಿಯ ಮೇಲ್ಭಾಗದಲ್ಲಿದ್ರೂ ಅಧಿಕಾರಿ ರವಿ ಕುಮಾರ್ ಭ್ರಷ್ಟಾಚಾರಕ್ಕೆ ಕೈಹಾಕಿ ಕೈ ಸುಟ್ಟುಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here