ಶಹಾಪುರ: ಈ ನಮ್ಮ ಸಗರ ನಾಡಿನಲ್ಲಿ ಅನೇಕ ಶರಣರು ಸಾಧರು ಸಂತರು ದಾರ್ಶನಿಕರು ಸೂಫಿಗಳು ಇಲ್ಲಿ ಆಗಿ ಹೋಗಿದ್ದಾರೆ,ಮೂಡಬುಳದ ರಂಗಲಿಂಗ ಶರಣರು ಪ್ರಮುಖರು ಎಂದು ಶೇರುಗಳು ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಲ್ಲಣ್ಣ ಹೊಸಮನಿ ಹೇಳಿದರು.
ಶಹಾಪುರ ನಗರದಲ್ಲಿ ಜರುಗಿದ ಜಡೆಪ್ಪ ಮಠದಲ್ಲಿ ಶ್ರೀರಂಗ ಲಿಂಗೇಶ್ವರ 11 ನೇ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ನಂಬಿ ಬಂದ ಭಕ್ತರಿಗೆ ದಾರಿದೀಪವಾಗಿ ಭಕ್ತರ ಆಶೋತ್ತರಗಳಿಗೆ ಪರಿಹಾರವನ್ನು ಕೊಡಿಸುವ ದಿವ್ಯ ಶಕ್ತಿ ಅವರಲ್ಲಿತ್ತು ಎಂದು ಹೇಳಿದರು.ಗುರುಗಳ ಸವಿ ನೆನಪಿನ ಸಂದರ್ಭದಲ್ಲಿ ಕಾವಿ ವಸ್ತ್ರಗಳನ್ನು ಉತ್ತರಿಸಲಾಯಿತು.
ಪತಿ ಸಂದರ್ಭದಲ್ಲಿ ಸಂಗನಬಸವ ಒಡೆಯರ್, ಶಂಕರಗೌಡ,ಸದಾಶಿವಯ್ಯ ಸ್ವಾಮಿ,ನಾಗಣ್ಣ ಜೈನಾಪುರ, ಹಣಮಂತ,ಶಿವಾನಂದಯ್ಯ ಬಂದರವಾಡ,ಮಾನಪ್ಪ ಮುಡಬೂಳ,ಶಿವಣ್ಣ ಹಳಿಸಗರ ಅಮಲಪ್ಪ ಹಳಿಸಗರ, ಸಂಗನಗೌಡ ಪಾಟೀಲ್ ಮಡ್ನಾಳ,ಅಮರೇಶ ಹೂಗಾರ್ ಅಶೋಕ ಶಾಬಾದಿ ಹಾಗೂ ಇತರರು ಉಪಸ್ಥಿತರಿದ್ದರು.