ಬಿ. ನಾರಾಯಣರಾವ ಅಗಲಿಕೆಯಿಂದ ತಳವಾರ, ಪರಿವಾರಕ್ಕೆ ನಷ್ಟ: ಹೋರಾಟ ಸಮಿತಿ

0
88

ಕಲಬುರಗಿ: ಬಿ. ನಾರಾಯಣರಾವ ಅವರ ಅಗಲಿಕೆಯಿಂದ ಹಿಂದುಳಿದ ಸಮುದಾಯಗಳಿಗೆ ತುಂಬಲಾರದ ನಷ್ಟ ಎಂದು ತಳವಾರ, ಪರಿವಾರ ಎಸ್ .ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ. ಸರ್ದಾರ ರಾಯಪ್ಪ ಹೇಳಿದರು.

ತಳವಾರ ಪರಿವಾರ ಎಸ್ ಟಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಾಗೂ ಸರತಿ ಉಪವಾಸ ಸತ್ಯಾಗ್ರಹ ವೇದಿಕೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು ಬಿ ನಾರಾಯಣರಾವ್ ಅವರು ಹೋರಾಟದ ಮುಖಾಂತರ ರಾಜಕೀಯಕ್ಕೆ ಬಂದ ವ್ಯಕ್ತಿಯ ಯಾವತ್ತೂ ಅಧಿಕಾರಕ್ಕಾಗಿ ಆಸೆ ಪಟ್ಟವರಲ್ಲ.

Contact Your\'s Advertisement; 9902492681

ಹಿಂದುಳಿದವರ, ದೀನದಲಿತರ ತುಳಿತಕ್ಕೊಳಗಾದವರ ಪರವಾಗಿ ಧ್ವನಿಯೆತ್ತಲು ಸದಾ ಸಿದ್ಧರಾಗಿರುತ್ತಿದ್ದರು. 12ನೇ ಶತಮಾನದ ಬಸವಣ್ಣನವರ ಪಕ್ಕ ಅನುಯಾಯಿಗಳಾಗಿದ್ದರು ಬಸವಣ್ಣನವರ ಚಿಂತನೆಗಳು ಆಚಾರಗಳು ವಿಚಾರಗಳು ತಮ್ಮ ತತ್ವ-ಆದರ್ಶಗಳನ್ನು ಆಗಿ ಮಾಡಿಕೊಂಡು ಸಮಾನತೆಗಾಗಿ ಹೋರಾಟ ಮಾಡುತ್ತಾ ಬಂದ ವ್ಯಕ್ತಿ ಇವರು.

ಬೀದರ್ನಲ್ಲಿ  ಕೋಲಿ ಗೊಂಡ ಕುರುಬ ಸಮುದಾಯದವರಿಗೆ  ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರ ಹೊಡಿವೆ ಎಂದರೆ ಅದು ಬಿ ನಾರಾಯಣರಾವ್ ಅವರ ಹೋರಾಟದ ಫಲ ಅದರಂತೆ ನಮ್ಮ ಹೋರಾಟಕ್ಕೆ ಶಕ್ತಿ ತುಂಬಿ ನಮಗೂ ಕೂಡ ನ್ಯಾಯ ಒದಗಿಸಿಕೊಡಬೇಕೆಂದು ಕರೆ ಮಾಡಿ ಕೇಳಿಕೊಂಡಾಗ ನನಗೆ  ಕರೋನ  ಪಾಸಿಟಿವ್  ಬಂದಿದೆ ನಾನು ಗುಣಮುಖನಾಗಿ  ಬಂದಾಗ ಅಲ್ಲಿಗೆ ಬರುತ್ತೇನೆ.

ನಿಮಗೆ ಆದ ಅನ್ಯಾಯವನ್ನು ನಾನು ಖಂಡಿಸುತ್ತೇನೆ. ವಿಧಾನಸಭೆಯ ಅಧಿವೇಶನದಲ್ಲಿ ಇದರ ಬಗ್ಗೆ ಧ್ವನಿ ಎತ್ತುತ್ತೇನೆ. ತಳವಾರ, ಪರಿವಾರದವರಿಗೆ ಸಿಗಬೇಕಾದ ಸಂವಿಧಾನಿಕ ಬದ್ಧವಾದ ನ್ಯಾಯ, ಅದು ಸಿಗಲೇಬೇಕು. ಮುಖ್ಯಮಂತ್ರಿಗಳು ತಮ್ಮ ಕುರ್ಚಿ ಉಳಿಸಿಕೊಳ್ಳಲು  ನಿಮಗೆ  ಅನ್ಯಾಯ  ಮಾಡುತ್ತಿದ್ದಾರೆ  ಎಂದು ಹೇಳಿದ್ದರು.

ಅವರ ಹೋರಾಟಮಯ ಜೀವನದ ಜತೆಗೆ ಅವರ ಕನಸು,ಕನಸಾಗಿಯೇ ಉಳಿಯಿತು. ಬಸವಕಲ್ಯಾಣದಲ್ಲಿ ಅನುಭವ ಮಂಟಪದ ನಿರ್ಮಾಣ ಮಾಡಬೇಕೆಂಬುವುದು ಅವರ ಅತ್ಯಂತ ದೊಡ್ಡ ಕನಸಾಗಿತ್ತು.

12ನೇ ಶತಮಾನದಲ್ಲಿ ಸಾಮಾಜಿಕ ಸಮಾನತೆಗಾಗಿ ನ್ಯಾಯಕ್ಕಾಗಿ ಕ್ರಾಂತಿಯಮಾಡಿದ ಬಸವಣ್ಣನವರು ಅಡಿಯಿಟ್ಟ  ನೆಲದ ಮೇಲೆ ಮತ್ತೊಮ್ಮೆ ಅದೇ ಕ್ರಾಂತಿ ಆಗಬೇಕೆಂದು ಬಸವಾದಿ ಶರಣರ ಕ್ರಾಂತಿಯ ಬಗ್ಗೆ ವಿಧಾನಸಭೆಯಲ್ಲಿ ಮೇಜು ಕುಟ್ಟಿ ಮಾತನಾಡಿದ ಮೊದಲಿಗ ಇವರು.

ಬಸವತತ್ವದ ಪ್ರತಿಪಾದಕರ ಅಗಲಿಕೆಗೆ ಸರಕಾರ ಸಂತಾಪ ಸೂಚಿಸಿದೆ ಆದರೆ ನಿಜವಾಗಲೂ ಅವರ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ತಳವಾರ, ಪರಿವಾರದ ಸಮುದಾಯದವರಿಗೆ ನ್ಯಾಯ ಒದಗಿಸಬೇಕು ಏಕೆಂದರೆ ನಾರಾಯಣರಾವ್ ಅವರ ಕನಸು ಆಸೆ ಈ ಎರಡು ಸದಾಯಗಳಿಗೆ ನ್ಯಾಯ ಸಿಗಬೇಕೆನ್ನುವುದು ಅವರ ಆಸೆಯಾಗಿತ್ತು.  ಅಂದಾಗ ನೀವು ಸೂಚಿಸಿದ ಸಂತಾಪ ಸಾರ್ಥಕವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಡಾ. ಸರ್ದಾರ್ ರಾಯಪ್ಪ, ರಾಜೇಂದ್ರ ರಾಜವಾಳ, ದೇವೇಂದ್ರ ಚಿಗರಹಳ್ಳಿ, ಚಂದ್ರಶೇಖರ್ ಜಮಾದಾರ್ ವಕೀಲರು, ಶರಣು ಕೋಳಿ, ಸುನಿತಾ ತಳವಾರ್, ಚಂದ್ರಕಾಂತ್ ಗವಾರ್, ರೇವಣಸಿದ್ದಪ್ಪ ಗೌಡ ಕಮನಮನಿ, ಅನಿಲ್ ಕಾಮಣ್ಣವಚ್ಚಾ, ಗುರು ಹವನೂರ್, ಹಾಗೂ ಮುಂತಾದ ಮುಖಂಡರು ಇದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here