ಶಹಾಬಾದ: ಹಾಲುಮತ ಮಹಾಸಭಾದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಭಂಕೂರ ಗ್ರಾಮದ ಮಹೇಶ ಧರಿ ಅವರನ್ನು ಗ್ರಾಮದ ಮುಖಂಡರಾದ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶರಣಬಸಪ್ಪ ಧನ್ನಾ , ಮಹೇಶ ಧರಿ ಅವರು ಕಾಂಗ್ರೆಸ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಲ್ಲದೇ ತಮ್ಸಾಮನ್ಮಾನು ತಾವು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವವರು.ಅವರ ಸಾಮಜಿಕ ಕಳಕಳಿಯನ್ನು ಗಮನಿಸಿ ಅವರನ್ನು ಹಾಲುಮತ ಮಹಾಸಭಾದ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಅವರು ಈ ಜವಾಬ್ದಾರಿಯನ್ನು ಹೊತ್ತು ಸಮಾಜದ ದನಿಯಾಗಿ ಮತ್ತು ಸಮಾಜ ಪರವಾದ ಕೆಲಸಗಳನ್ನು ಮಾಡುವ ಮೂಲಕ ಸಮಾಜವನ್ನು ಮುಂಚೂಣಿಯಲ್ಲಿ ತರಲು ಪ್ರಯತ್ನಿಸುವರೆಂಬ ಆಶಾಭಾವನೆ ನಮ್ಮೆಲ್ಲರಲ್ಲಿ ಇದೆ ಎಂದು ಹೇಳಿದರು. ಶರಣಗೌಡ ದಳಪತಿ, ಮುನ್ನಾ ಪಟೇಲ್, ಶರಣಗೌಡ ಪೊಲೀಸ್ ಪಾಟೀಲ, ಮುಜಾಹಿದ್ ಹುಸೇನ್,ಜಾಕೀರ ಹುಸೇನ್, ಜಯಪ್ರಕಾಶ ಕಟ್ಟಮನಿ, ಬೀಮರಾಯ ಹೊಸಮನಿ,ನಿಂಗಣ್ಣ ಪೂಜಾರಿ ಇತರರು ಇದ್ದರು.