ವಿಶ್ವ ಪ್ರವಾಸೋದ್ಯಮ ದಿನಾಚರಣೆ: ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಚಾಲನೆ

0
45

ಕಲಬುರಗಿ: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ರವಿವಾರ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ‌ ನಗರದ ಐವಾನ್-ಎ-ಶಾಹಿ ಅತಿಥಿಗೃಹದಿಂದ ಕಲಬುರಗಿ ಕೋಟೆ ವರೆಗೆ ಬೆಳಿಗ್ಗೆ ಆಯೋಜಿಸಿದ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ್ ಎಸ್. ತಳಕೇರಿ ಅವರು ಚಾಲನೆ ನೀಡಿದರು.

ಐವಾನ್-ಎ-ಶಾಹಿ ಯಿಂದ ಕಲಬುರಗಿ ಕೋಟೆ ವರೆಗೆ ನಡೆದ ಸೈಕ್ಲೋಥಾನ್ ನಲ್ಲಿ 15 ವರ್ಷ ಮೇಲ್ಪಟ್ಟ ಮಕ್ಕಳು, ಮಹಿಳೆಯರು, ವಯಸ್ಕರು, ಯುವಕ-ಯುವತಿಯರು ಸೇರಿದಂತೆ ಸುನಾರು 100 ಜನ ಸೈಕ್ಲಿಸ್ಟ್ ಗಳು ಭಾಗವಹಿಸಿದ್ದರು.

Contact Your\'s Advertisement; 9902492681

ತದನಂತರ ಕೋಟೆಯ ಅವರಣದಲ್ಲಿ ಸ್ವಚ್ಚತಾ ಪಕ್ವಾಡ ಅಭಿಯಾನ ಯೋಜನೆಯಡಿ ಕೋಟೆಯ ಮಸೀದಿ ಅವರಣ ಸ್ವಚ್ಚತಾ ಕಾರ್ಯಕ್ರಮ ಸಹ ನಡೆಯಿತು. ಸುಮಾರು 150 ಜನ ಶ್ರಮದಾನದಲ್ಲಿ‌ ಪಾಲ್ಗೊಂಡರು.

ಈ ಸಂದರ್ಭದಲ್ಲಿ ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ರಫೀಕ್ ಲಾಡಜಿ, ಇಂಟ್ಯಾಕ್ ಸಂಸ್ಥೆಯ ಡಾ.ಶಂಭುಲಿಂಗ ವಾಣಿ, ಕಲಬುರಗಿ ಸೈಕ್ಲಿಂಗ್ ಕ್ಲಬ್ ಸದಸ್ಯರಾದ ವೈಭವ ರೆಡ್ಡಿ, ಡಾ.ಶರಣು ಹತ್ತಿ, ಶಂಭುಲಿಂಗ, ಜೆಸ್ಟ್ ಕ್ಲಬ್ ಮಾಲೀಕ ನಿಜು ಉಪ್ಪಿನ್, ಕಲಬುರಗಿ ಕೋಟೆಯ ಮುತಾವಲಿ ರಿಜ್ವಾನ್ ಉರ್ ರೆಹಮಾನ್ ಸಿದ್ಧಿಕ್ಕಿ, ಪ್ರವಾಸಿ ಸಮಾಲೋಚಕ ಸಂದೀಪ ಸಿಂಗ್ ಸೇರಿದಂತೆ ಇನ್ನಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here