ಡಾ. ಶಿವಶಂಕರ ಬಿರಾದಾರ ಕೋಟನೂರ, ಡಾ. ಅಣವೀರಯ್ಯ ಪ್ಯಾಟಿಮನಿಗೆ ಸನ್ಮಾನ

0
133

ಕಲಬುರಗಿ: ಕಲ್ಯಾಣ ನಾಡು ಜ್ಞಾನದ ಫಲವತ್ತಾದ ಭೂಮಿಯಾಗಿದ್ದು ಸರಿಯಾದ ಸಮಯಕ್ಕೆ ನೀರು ಗೊಬ್ಬರ ಕೊಟ್ಟರೆ ರಾಷ್ಟ್ರಕ್ಕೆ ನೆರಳು ಕೊಡುವ ಮರವಾಗಿ ಬೆಳೆಯುತ್ತದೆ ಎಂದು ಶ್ರೀನಿವಾಸ ಸರಡಗಿಯ ಷ.ಬ್ರ. ಡಾ. ರೇವಣಸಿದ್ದ ಶಿವಾಚಾರ್ಯರು ಹೇಳಿದರು.

ಇಂದು ತಾಜಸುಲ್ತಾನಪುರದ ಚಿನ್ನದ ಕಂತಿ ಚಿಕ್ಕ ವೀರೇಶ್ವರ ಸಂಸ್ಥಾನ ಹಿರೇಮಠ ಹಾಗೂ ಸ್ನೇಹ ಸಂಗಮ ವಿವಿದೊದ್ದೇಶ ಸೇವಾ ಸಂಘದ ಸಂಯುಕ್ತ ಆಶ್ರಯದಲ್ಲಿ ಶ್ರೀಮಠದಲ್ಲಿ ಅಮೆರಿಕ ದೇಶದ ಮದರ ತೆರೆಸಾ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ ಪಡೆದ ಡಾ. ಶಿವಶಂಕರ ಬಿರಾದಾರ ಕೋಟನೂರ ಹಾಗೂ ಡಾ. ಅಣವೀರಯ್ಯ ಪ್ಯಾಟಿಮನಿ ಕೊಡ್ಲಿ ಅವರಿಗೆ ಗೌರವ ಸತ್ಕಾರ ಮಾಡಿ ಆಶೀರ್ವಚನ ನೀಡುತ್ತಾ ಈ ಭಾಗವು ಶರಣರು, ಸಂತರು, ಮಹಾಂತರು ಹುಟ್ಟಿದ ನಾಡು. ಈ ಭಾಗದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಸರಿಯಾದ ವೇದಿಕೆ ಕೊಡುವುದರೊಂದಗೆ ಸಮಾಜದಲ್ಲಿ ಗುರುತಿಸುವ ಕಾರ್ಯ ನಮ್ಮೆಲ್ಲರ ಕರ್ತವ್ಯವಾಗಿದೆ, ನಮ್ಮವರನ್ನು ನಾವು ಗುರುತಿಸಿ ಪ್ರೋತ್ಸಾಹ ನೀಡಿದಾಗ ಜಗತ್ತೆ ಈ ಭಾಗದವರನ್ನು ಗುರುತಿಸಿ ಗೌರವಿಸುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ಗೌರವ ಸ್ವೀಕರಿಸಿ ಮಾತನಾಡಿದ ಶ್ರೀ ಡಾ. ಶಿವಶಂಕರ ಬಿರಾದಾರ ಮನುಷ್ಯನ ಒತ್ತಡದ ಬದುಕಿನಲ್ಲಿ ಸಮಾಜದ ಎಲ್ಲಾ ಜನರೊಂದಿಗೆ ಪ್ರೀತಿಯಿಂದ ನಗುತ್ತಾ ಮಾತನಾಡವುದು ದಿವ್ಯ ಔಷದಿಯಾಗಿದ್ದು, ಗ್ರಾಮೀಣ ಭಾಗದಲ್ಲಿ ಇದು ಕಣ್ಮರೆಯಾಗಿಲ್ಲ ಎನ್ನುವುದು ನೆಮ್ಮದಿ ವಿಷಯವಾಗಿದೆ.

ನಗರ ಪ್ರದೇಶಗಳಲ್ಲಿ ಪರಸ್ಪರ ಭೇಟಿಯಾಗುವುದೇ ಅಪರೂಪವಾದ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿ ನಮ್ಮನ್ನು ಗುರುತಿಸಿ ಗೌರವಿಸುತ್ತಿರುವ ಶ್ರೀಮಠಕ್ಕೂ ಹಾಗೂ ಸಂಘದ ಪದಾಧಿಕಾರಿಗಳಿಗೂ ಚಿರಋಣಿಯಾಗಿರುತ್ತೇವೆ. ನಮ್ಮಂತ ಕಲಾವಿದರನ್ನು ಗುರುತಿಸಿ ಸಮಾಜಕ್ಕೆ ಪರಿಚಯ ಮಾಡುವ ಕಾರ್ಯ ನಿರಂತರ ಸಾಗಲಿ ಎಂದು ಹೇಳಿದರು.

ವೇದಿಕೆಯ ಮೇಲೆ ಉದಯಕುಮಾರ ಹತಗುಂದಿ, ನಾಗೇಂದ್ರಯ್ಯ ಮಠ, ಶರಣಬಸಪ್ಪ ತಿಳಗೂಳ, ಸಂಘದ ಸಹ ಕಾರ್ಯದರ್ಶಿ ಮಲಕಾರಿ ಪೂಜಾರಿ ಇದ್ದರು.

ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಾದ ಸಂಗಮೇಶ ಶಾಸ್ತ್ರೀ ಮಾಶಾಳ, ವಿಶ್ವನಾಥ ಹೇರೂರ, ಜನಪದ ಕಲಾವಿದ ರಾಜು ಹೆಬ್ಬಾಳ, ಮಲ್ಲಿನಾಥ ಕುಮಸಿ, ಮಹೇಶ ತೇಲಕುಣಿ, ಮಲ್ಲಿಕಾರ್ಜುನ ಕಲಬುರಗಿ ಜಂಬಗಿ ಇವರಿಂದ ಅದ್ಭುತ ಸಂಗೀತ ಕಾರ್ಯಕ್ರಮ ನೆರವೇರಿತು.

ಸಂಘದ ಅಧ್ಯಕ್ಷ ನ್ಯಾಯವಾದಿ ಹಣಮಂತರಾಯ ಅಟ್ಟೂರ, ರವಿಕುಮಾರ ಶಹಾಪುರಕರ, ಶಿವಶರಣಪ್ಪಾ ಹಿರೇಮನಿ, ಶಿವಲಿಂಗಪ್ಪಾ ಮಾಳಾ, ರೇವಣಸಿದ್ದಪ್ಪಾ ಜಿ. ಮಾಳಾ, ವೀರಯ್ಯ ಬಾಳಿ, ರೇವಣಸಿದ್ದಯ್ಯ ಬೇಲೂರ, ನಾಗೇಂದ್ರ ದೇಗಲಮಡ್ಡಿ, ಮಲ್ಲಿಕಾರ್ಜುನ ಜಂಬಗಿ, ಸಾವಿತ್ರಿ ಆರ್. ಕಲಕೋರಿ, ವೀರಮ್ಮ ಬಾಳಿ, ಅನ್ನಪೂರ್ಣ ಸಂಗೋಳಗಿ, ರಾಚಣ್ಣಾ ಸಂಗೋಳಗಿ, ಬಂಡಯ್ಯ ಸ್ವಾಮಿ, ಜಗನ್ನಾಥ ಹಾಂವಾ ಸೇರಿದಂತೆ ಹಲವಾರು ಜನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here