ಕಲಬುರಗಿ; ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ನಗರದ ಅನ್ನಪೂರ್ಣ ಕ್ರಾಸ್ ಹತ್ತಿರವಿರುವ ಕಲಾ ಮಂಡಳದಲ್ಲಿ ನಾಳೆ ಸೆ.30 ರಂದು ಸಂಜೆ 5 ಗಂಟೆಗೆ ಶ್ರೇಷ್ಠ ಶಿಕ್ಷಕರ ಪುರಸ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಚ್. ನಿರಗುಡಿ ತಿಳಿಸಿದ್ದಾರೆ.
ಸಮಾರಂಭವನ್ನು ಕಲಬುರಗಿ ದಕ್ಷಿಣ ಮತಕ್ಷೇತ್ರದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ನೀಲಕಂಠರಾವ್ ಮೂಲಗೆ ಅವರು ಉದ್ಘಾಟಿಸಲಿದ್ದಾರೆ. ಶರಣಬಸವ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವರಾದ ಡಾ. ಲಿಂಗರಾಜ್ ಶಾಸ್ತ್ರಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಲ್ಲಯ್ಯ ಗುತ್ತೆದಾರ್, ಚಕೋರ್ ಮೆಹ್ತಾ ಹಾಗೂ ಪ್ರೊ. ಬಿ.ಎಸ್ ಮಾಲಿಪಾಟೀಲ್ ವಹಿಸಿಕೊಳ್ಳಲಿದ್ದಾರೆ.
ಸಮಾರಂಭದಲ್ಲಿ ಜಿಲ್ಲೆಯ ಹತ್ತು ಶ್ರೇಷ್ಠ ಶಿಕ್ಷಕರಾದ ಚಿತಾಪೂರ ತಾಲೂಕಿನ ಲತಾ ಡಿ.ಎನ್, ಸೇಡಂ ತಾಲೂಕಿನ ಈರಪ್ಪ ಕನಸೂರ, ಜೇವರ್ಗಿ ತಾಲೂಕಿನ ರಾಜಕುಮಾರ ಸುಂಬಡ, ಆಳಂದ ತಾಲೂಕಿನ ಧರ್ಮರಾಯ ಕೊರಳ್ಳಿ, ಚಿಂಚೋಳಿ ತಾಲೂಕಿನ ದೇವಾನಂದ ಸಾವಳಗಿ, ಅಫಜಲಪೂರದಿಂದ ಮಹಿಬೂಬ್ ಸಾಬ್ ಜಮಾದಾರ್, ಕಮಲಾಪೂರ ತಾಲೂಕಿನ ರವಿಕುಮಾರ ಹೂಗಾರ್, ಕಲಬುರ್ಗಿಯ ಡಾ. ರಾಜಕುಮಾರ್ ಪಾಟೀಲ್, ಚಂದ್ರಕಾಂತ್ ಭಾಗನ್ ಹಾಗೂ ಆರ್.ಸುಲೇಖಾ ಮಾಲಿಪಾಟೀಲ್ ಅವರನ್ನು ಪ್ರಶಸ್ತಿ ಪುರಸ್ಕರಿಸಲಾಗುವುದು. ಇದೇ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಪ್ರಶಸ್ತಿ ಪಡೆದ ಸುರೇಖಾ ಡೆಂಗಿ ಹಾಗೂ ಮುಕುಂದಪ್ಪಾ ನಂದಗಾವ್ ಅವರನ್ನು ವಿಶೇಷವಾಗಿ ಗೌರವ ಸನ್ಮಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.