ಅಕ್ರಮ ಮರಳು ಸಾಗಾಣಿಕೆ ವಾಹನ ತಡೆಯಲು ಹೋದ ಅಧಿಕಾರಿಗಳಿಗೆ ಬೆದರಿಕೆ

0
131

ಸುರಪುರ: ತಾಲ್ಲುಕಿನ ಕೃಷ್ಣಾ ನದಿಯಿಂದ ನಿತ್ಯವು ನೂರಾರು ಟ್ರಿಪ್ ಮರಳು ರಾಜ್ಯದ ವಿವಿಧ ಭಾಗಗಳಿಗೆ ಮತ್ತು ಪಕ್ಕದ ರಾಜ್ಯಗಳಿಗು ರವಾನೆಯಾಗುತ್ತಿದೆ.ಸರಕಾರದ ನಿಯಮದಂತೆ ರಾಜಧನ ನೀಡಿ(ರಾಯಲ್ಟಿ) ರಸೀದಿ ಪಡೆದು ಮರಳು ಸಾಗಾಣಿಕೆ ಮಡಬೇಕೆಂಬ ನಿಯಮವಿದ್ದರು ಕೆಲವರು ಅಕ್ರಮವಾಗಿ ರಾಜಧನ ನೀಡದೆ ಮರಳು ಸಾಗಾಟ ಮಡುತ್ತಾರೆ ಎಂಬ ಅರೋಪ ಎಲ್ಲೆಡೆಯು ಇದೆ.ಅದರಂತೆ ರಾಜಧನ ನೀಡದೆ ಮರಳು ಸಾಗಾಣಿಕೆ ಮಾಡುವ ವಾಹನಗಳನ್ನು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ರಾಜಧನ ನೀಡಿದ ರಸೀದಿಗಳನ್ನು ತೋರಿಸುವುದು ಕಡ್ಡಾಯವಾಗಿರುತ್ತದೆ.ಅದರೆ ರಾಜಧನ ನೀಡದ ವಾಹನಗಳನ್ನು ಕಂದಾಯ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದು ಕಾನೂನು ಕ್ರಮಕ್ಕೆ ಸರಕಾರದ ಸುಪರ್ದಿಗೆ ಒಪ್ಪಿಸಲಾಗುತ್ತದೆ.ಇದರಂತೆ ಮರಳು ಸಾಗಾಣಿಕೆ ವಾಹನಗಳ ತಪಾಸೆಣೆಗೆ ಹೋದ ಅಧಿಕಾರಿಗಳ ಮೇಲೆ ದರ್ಪ ತೋರಿಸಿದ ಘಟನೆ ತಾಲ್ಲೂಕಿನ ಅರಕೇರಾ (ಕೆ) ಬಳಿ ನಡೆದಿದೆ.

ರವಿವಾರ ಸಂಜೆ ಅರಕೇರಾ(ಕೆ) ಗ್ರಾಮದ ಬಳಿಯ ಹೆದ್ದಾರಿಯಲ್ಲಿ ಮರಳು ವಾಹನಗಳ ತಪಾಸಣೆಗೆಂದು ತಹಸೀಲ್ದಾರ ಸುರೇಶ ಅಂಕಲಗಿ,ಕಂದಾಯ ನಿರೀಕ್ಷ ಗುರುಬಸಪ್ಪ ಪಾಟೀಲ್,ಕಕ್ಕೇರಾ ಕಂದಾಯ ನಿರೀಕ್ಷಕ ವಿಠ್ಠಲ ಬಂದಾಳ,ಗ್ರಾಮ ಲೆಕ್ಕಿಗ ಅರವಿಂದ ಖಂಡೇಕರ್ ತಂಡ ಮರಳು ವಾಹನಗಳ ತಪಾಸಣೆಗೆಂದು ನಿಂತಿರುವಾಗ ಎರಡು ಮರಳು ತುಂಬಿದ ವಾಹನಗಳು (ಕೆ.ಎ ೫೯ ಟಿ.ಎಮ್.೦೯೨೯ ಹಾಗು ಕೆ.ಎ ೫೯ ಟಿ.ಎಮ್ ೦೯೩೦) ಆಗಮಿಸಿದ್ದರಿಂದ ಅವುಗಳನ್ನು ತಡೆದು ತಪಾಸಣೆ ನಡೆಸಿದ್ದಾರೆ,ವಾಹನಗಳು ಮರಳು ಸಾಗಾಣಿಕೆಗೆ ರಾಜಧನ ನೀಡಿಲ್ಲವೆಂದು ಖಚಿತ ಪಡಿಸಿಕೊಂಡ ಅಧಿಕಾರಿಗಳು ವಾಹನದ ಕೀಲಿಗಳನ್ನು ತೆಗೆದುಕೊಂಡು ಸುರಪುರ ಪೊಲೀಸ್ ಠಾಣೆಗೆ ಕರೆ ಮಾಡಿ ಸಿಬ್ಬಂದಿಗಳು ಆಗಮಿಸಲು ಕೋರಿದ್ದು,ಪೊಲೀಸರು ಬರಲು ಸ್ವಲ್ಪ ತಡವಾಗಿದ್ದರಿಂದ ಮರಳು ಸಾಗಾಣಿಕೆದಾರರ ಕಡೆಯ ಅನೇಕರು ಜಮಾವಣೆಗೊಂಡು ತಾಲ್ಲೂಕು ದಂಡಾಧಿಕಾರಿ ಸುರೇಶ ಅಂಕಲಗಿ ಮತ್ತು ಕಂದಾಯ ನಿರೀಕ್ಷಕ ಗುರುಬಸಪ್ಪ ಪಾಟೀಲ ಮತ್ತಿತರರನ್ನು ಪಕ್ಕಕ್ಕೆ ತಳ್ಳಿ,ಕರ್ತವ್ಯಕ್ಕೆ ಅಡ್ಡಿಪಡಿಸಿ ಮರಳಿನ ವಾಹನಗಳನ್ನು ಬಲವಂತದಿಂದ ತೆಗೆದುಕೊಂಡು ಹೋಗಿದ್ದಾರೆ.ಎಂದು ಕಂದಾಯ ನಿರೀಕ್ಷಕ ಗುರುಬಸಪ್ಪ ಪಾಟೀಲ ಸುರಪುರ ಠಾಣೆಗೆ ದೂರು ಸಲ್ಲಿಸಿದ್ದಾರೆ.

Contact Your\'s Advertisement; 9902492681

ಅಧಿಕಾರಿಗಳ ದೂರು ದಾಖಲಿಸಿಕೊಂಡ ಠಾಣಾಧಿಕಾರಿ ಪಿಐ ಆನಂದರಾವ್ ಎಸ್.ಎನ್ ಅವರು ಪ್ರಕರಣದ ಕುರಿತು ಮಾಹಿತಿ ನೀಡಿ,ಕಂದಾಯ ನಿರೀಕ್ಷಕರು ನೀಡಿದ ದೂರನ್ನು ದಾಖಲಿಸಿಕೊಳ್ಳಲಾಗಿದ್ದು,ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಬಲವಂತದಿಂದ ಮರಳಿನ ವಾಹನ ತೆಗೆದುಕೊಂಡು ಹೋಗಿರುವ ವಾಹನಗಳ ಚಾಲಕರು ಮತ್ತು ಮಾಲೀಕರ ಮೇಲೆ ಕೇಸು ದಾಖಲಸಿಕೊಳ್ಳಲಾಗಿದೆ.ತನಿಖೆ ನಡೆಸಿ ವಾಹನಗಳ ಚಾಲಕರು ಮತ್ತು ಮಾಲೀಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here