ಪ್ರೌಢಶಾಲಾ ಶಿಕ್ಷಕರು ಅಭಿಪ್ರಾಯ ತಿಳಿಸಲು ಮನವಿ-ರಮೇಶ ರಾಠೋಡ

0
378

ಶಹಾಬಾದ: ಪ್ರೌಢ ಶಾಲಾ ಶಿಕ್ಷಕರು ಉಪನ್ಯಾಸ ಹುದ್ದೆಗೆ ಬಡ್ತಿ ಆಗಬೇಕಾದರೆ ಸರಕಾರ ಮಾರಕವಾದ ಸೇವಾ ನಿಯಮಗಳನ್ನು ೨೦೧೪ ರಲ್ಲಿ ಜಾರಿಗೆ ತರಲಾಗಿದ್ದು, ಆ ನಿಯಮಗಳನ್ನು ಕೈ ಬಿಡಲು ಸರಕಾರದ ಮತ್ತು ಇಲಾಖೆಯ ಗಮನ ಸೆಳೆಯುವ ಕಾರ್ಯ ಮಾಡಲಾಗುತ್ತಿದ್ದು, ಪ್ರೌಢಶಾಲಾ ಶಿಕ್ಷಕರು ತಮ್ಮ ಅಭಿಪ್ರಾಯ ತಿಳಿಸಬೇಕೆಂದು  ಕರ್ನಾಟ ರಾಜ್ಯ ಸರ್ಕಾರಿ ನೌಕರರ ಸಂಘ ಕಾಳಗಿ ತಾಲೂಕಿನ ರಾಜ್ಯ ಪರಿಷತ್ ಸದಸ್ಯ ರಮೇಶ ರಾಠೋಡ ಮನವಿ ಮಾಡಿದ್ದಾರೆ.

ಪ್ರೌಢಶಾಲಾ ಶಿಕ್ಷಕರು, ಉಪನ್ಯಾಸಕ ಬಡ್ತಿ‌ ಆಕಾಂಕ್ಷಿಗಳು ,ಪ್ರೌಢ ಶಾಲಾ ಶಿಕ್ಷರ ಉಪನ್ಯಾಸ ಹುದ್ದೆಗೆ ಬಡ್ತಿ ಆಗಬೇಕಾದರೆ ಸ್ನಾತಕೋತ್ತರ ಪದಯಲ್ಲಿ ೫೦% ಅಂಕ ಹೊಂದಿರಬೇಕು. CET ಪರೀಕ್ಷೆ ಬರೆಯುವುದು ಕಡ್ಡಾಯ. ಹೀಗೆ ಮಾರಕವಾದ ಸೇವಾ ನಿಯಮಗಳನ್ನು ೨೦೧೪ ರಲ್ಲಿ ಜಾರಿಗೆ ತರಲಾಗಿದೆ. ಇದು ನಮ್ಮ ಇಲಾಖೆಯಲ್ಲಿ ಯಾವುದೇ ಬಡ್ತಿಗೆ ಇಲ್ಲದ ನಿಯಮ ಕೇವಲ ಪ್ರೌಢಶಾಲಾ ಶಿಕ್ಷಕರ ಬಡ್ತಿಗೆ ಏಕೆ? ಎಂಬ ಪ್ಇರಶ್ದನೆ ನಮ್ರಮಲ್ಲಿದೆ.ಇದರಿಂದ ಶಿಕ್ಷಕರಿಗೆ ಅನ್ಯಾಯವಾಗುತ್ತಿದೆ. ಈ ಸಂಬಂಧ  ನಾವು ರಾಜ್ಯಾದಾದ್ಯಂತ ನಮಗಾಗಿ ನಾವು ಎಂಬ ವೇದಿಕೆಯ ಮೂಲಕ ಸರಕಾರದ ಮತ್ತು ಇಲಾಖೆಯ ಗಮನ ಸೆಳೆಯುವ ಕಾರ್ಯ ಹಮ್ಮಿಕೊಂಡಿದ್ದು , ಆಸಕ್ತ ಪ್ರೌಢಶಾಲಾ ಶಿಕ್ಷಕರು ,ಈ ನಂಬರಿಗೆ ಕರೆ ಮಾಡಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು.

Contact Your\'s Advertisement; 9902492681

ರಮೇಶ ರಾಠೋಡ , ರಾಜ್ಯ ಪರಿಷತ್ ಸದಸ್ಯರು ಕರ್ನಾಟ ರಾಜ್ಯ ಸರ್ಕಾರಿ ನೌಕರರ ಸಂಘ ಕಾಳಗಿ : ಮೋ.ಸಂ.9342333675

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here