ಕಲಬುರಗಿ: ಜೇವರ್ಗಿ ಶಾಖಾ ಕಾಲುವೆ (ಜೆಬಿಸಿ) ಹಾಗೂ ಮಾಡಬೂಳ ಶಾಖಾ ಕಾಲುವೆ (ಎಂಬಿಸಿ)ಯಿAದ ನೀರು ಹರಿಸಲು ಇದೇ ಅ ೨೯ ರಿಂದ ವಾರಾಬಂದಿ ಪದ್ಧತಿ ಅನುಸರಿಸುವುದು ಬೇಡ, ನವ್ಹೆಂಬರ್ ೧೧ ರ ವರೆಗೂ ಎಂದಿನAತೆ ಕಾಲುವೆಯಿಂದ ನಿರಂತರ ನೀರು ಬಿಡುಗಡೆ ಮಾಡಬೇಕು ಎಂದು ವಿಧಾನಸಬೆ ವಿರೋಧ ಪಕ್ಷ ಮುಖ್ಯ ಸಚೇತಕರು ಹಾಗೂ ಜೇವರ್ಗಿ ಶಾಸಕರೂ ಆಗಿರುವ ಡಾ. ಅಜಯ್ ಸಿಂಗ್ ಕೆಬಿಜೆಎನ್‌ಎಲ್ ನೀರಾವರಿ ಸಲಹಾ ಸಮೀತಿ ಅಧ್ಯಕ್ಷರು, ಬಾಗಲಕೋಟೆ ಉಸ್ತುವಾರಿ ಸಚಿವರು ಆಗಿರುವ ಉಮೇಶ ಕತ್ತಿ, ಭೀಮರಾಯನಗುಡಿಯಲ್ಲಿರುವ ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರರೊAದಿಗೆ ಮಾತುಕತೆ ನಡೆಸಿ ಆಗ್ರಹಿಸಿದ್ದಾರೆ.
ಜೆಬಿಸಿ ಹಾಗೂ ಎಂಬಿಸಿ ಕಾಲುವೆಯಿಂದ ಹರಿದು ಬರುವ ನೀರೇ ಜೇವರ್ಗಿ ರೈತರಿಗೆ ಜೀವನಾಡಿಯಾಗಿದೆ. ಜೇವರ್ಗಿ ರೇತರು ಬೆಳೆಯುವ ಬೆಳೆ, ವಿಸ್ತೀರ್ಣ ಹಾಗೂ ನೀರಿನ ಲಭ್ಯತೆಯನ್ನು ಅಳೆದು ಸುರಿದು ನೋಡಿದಾಗ ವಾರಾಬಂದಿಯಿAದ ನೀರಿನ ಕೊರತೆ ಕಾಡುವ ಸಾಧ್ಯತೆಗಳೇ ಹೆಚ್ಚಾಗಿವೆ. ಆದ್ದರಿಂದ ವಾರಾಬಂಧಿ ಈಗಲೇ ಮಾಡದೆ ನ. ೧೧ ರ ವರೆಗೂ ಅವ್ಯಾಹತವಾಗಿ ನೀರು ಹರಿಸಬೇಕು.
ಈ ಮೂಲಕ ಯಾವುದೇ ಕಾರಣಕ್ಕೂ ರೈತರಿಗೆ ನೀರಿನ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು, ರೈತರು ಕಷ್ಟಪಟ್ಟು ಬೆಳೆಯುವ ಬೆಳೆ ಕೋಯ್ಲಾಗುವ ಪೂರ್ವದಲ್ಲೇ ನೀರಿನ ಕೊರತೆಯಿದಾಗಿ ಹಾನಿಗೊಳಗಾಗೋದನ್ನು ತಪ್ಪಿಸಲು ಕೆಬಿಜೆನ್‌ಎಲ್ ಅಧಿಕಾರಿಗಳು ವಾರಾಬಂದಿ ಪದ್ಧತಿ ಕೈಬಿಟ್ಟು ನ. ೧೧ ರ ವರೆಗೂ ನಿರಂತರ ನೀರು ಕಾಲುವೆಗಳಲ್ಲಿ ಹರಿಯುವಂತೆ ಮಾಡಬೇಕು ಎಂದು ಡಾ. ಅಜಯ್ ಸಿಂಗ್ ತಮ್ಮ ಮಾತುಕತೆಯ ಮೂಲಕ ಆಗ್ರಹಿಸಿದ್ದಾರೆ.