ಯಾದಗಿರ: ಮಾಜಿ ಸೈನಿಕ, ಕರ್ನಾಟಕ ರಾಜ್ಯ ಹಟಗಾರ ಸಮಾಜದ ಅಧ್ಯಕ್ಷರಾದ ಎಸ್.ಜಿ.ಬೆಳಗಲಿ ಯವರು ರಾಜ್ಯ ಪ್ರವಾಸದಲ್ಲಿರುವ ಪ್ರಯುಕ್ತ ಸಮಾಜ ಜಿಲ್ಲಾ ಮುಖಂಡರೊಂದಿಗೆ ಭೇಟಿ ನೀಡಿ ಸಮಾಜದ ಅಭಿವೃದ್ಧಿಗಳ ಕುರಿತು ಚರ್ಚೆ ನಡೆಸಿದರು.
ಈ ವೇಳೆಯಲ್ಲಿ ಹಿರಿಯ ನ್ಯಾಯವಾದಿ ಕಿಶೋರ್ ಗಿರ್ವಾಲಕರ, ಆರ್.ಸಿ.ಘಾಳೇ ಜಿಲ್ಲಾ ಘಟಕ ಹುಟ್ಟು ಹಾಕಬೇಕಾಗಿದೆ, ರಾಜ್ಯ ಪ್ರಧಾನ ಕಾರ್ಯದರ್ಶಿ ಯುವ ನ್ಯಾಯವಾದಿ ಜೇನವೆರಿ ವಿನೋದ ಕುಮಾರ ಸಹಕಾರದೊಂದಿಗೆ ವಿಜಯಪುರ್ ಅಧ್ಯಕ್ಷ ಸೇವೆ ಸಲ್ಲಿಸುತ್ತಿರುವ ಬಗ್ಗೆ ತಿಳಿಸಿದರು.
ಫೋಟೊಗ್ರಾಫೇರ್ ಬಸವರಾಜ ಮಿಟ್ಟಾ (ನಟರಾಜ್ ಫೊಟೊಶೂಟಿ ) ರಾಜ್ಯಾದ್ಯಂತ ಪ್ರವಾಸಾಗೈದು ಸಂಘಟನೆ ಮಾಡುವ ಕಾರ್ಯ ಅತಿ ಕಷ್ಟ ಸಾಧ್ಯ ವಾದರು, ದೇಶ ಸೇವೆ ಎಂದು ತಿಳಿದು ಸತತ ಎರಡು ವರ್ಷದಿಂದ ಈ ಸಮಾಜ ಸೇವೆ ಮಾಡುತಿರುವ ಇವರನ್ನು ಶಾಲೂ ಹೊದಿಸಿ, ಗೌರವಿಸುತಿರುವದು ಹೆಮ್ಮೆಯ ವಿಷಯವಾಗಿದೆ ಎಂದರು.
ಈ ವೇಳೆಯಲ್ಲಿ ಹೆಚ್ಚಿನ ರೀತಿಯಲ್ಲಿ ಸಮಾಜದ ತತ್ವ ಮತ್ತು ಸಂಸ್ಕೃತಿಯನ್ನು ಇನ್ನಷ್ಟು ಪ್ರಚಾರ ಗೊಳಿಸಿ, ಓಗ್ಗಟ್ಟ ಪ್ರದರ್ಶನ ಕೈಗೊಳ್ಳ ಬೇಕು ಎಂದು ಸ್ತಳೀಯ ಉಪನ್ಯಾಸಕ ಮತ್ತು ರಾಮಲಿಂಗ ಚೌಡೇಶ್ವರಿ ಪ್ರತಿಷ್ಠಾನದ ಧರ್ಮದರ್ಶಿಗಳಾದ ಲಕ್ಷ್ಮಿಕಾಂತ ಜೇನವೆರಿ ಗೌರವಿಸಿ, ಸನ್ಮಾನಿಸಿ ತಮ್ಮ ಅಭಿಪ್ರಾಯ ತಿಳಿಸಿದರು.
ಗುರುರಾಜ ಯಾಂಕಂಚಿ, ವಿನಯ ಬೆಳಗಲಿ ಹಾಗೂ ಇತರರು ಇದ್ದರು.