ಮಾವಿನಮಟ್ಟಿ ಕೆರೆಯಲ್ಲಿ ಮೀನುಗಾರಿಕೆಗೆ ಪರವಾನಿಗೆ ನೀಡಲು ಆಗ್ರಹಿಸಿ ಧರಣಿ

0
79

ಸುರಪುರ: ತಾಲೂಕಿನ ಮಾವಿನಮಟ್ಟಿಯ ಕೆರೆಯ ನೀರಿನಿಂದ ಪ್ರತಿ ವರ್ಷ ಅನೇಕ ಜನ ದಲಿತರ ಜಮೀನುಗಳು ಹಾಳಾಗುತ್ತಿವೆ.ಈ ರೈತರಿಗೆ ಪರಿಹಾರ ನೀಡಬೇಕು ಮತ್ತು ಕೆರೆಯಲ್ಲಿ ಮೀನುಗಾರಿಕೆ ನಡೆಸಲು ಪರವಾನಿಗೆ ನೀಡಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಗೋಪಾಲ ಹೆಚ್.ತಳವಾರ ಆಗ್ರಹಿಸಿದರು.

ನಗರದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಧರಣಿಯ ನೇತೃತ್ವವಹಿಸಿ ಮಾತನಾಡಿ,ಮಾವಿನಮಟ್ಟಿ ಕೆರೆಯ ಒಡ್ಡನ್ನು ಸ್ಥಳಿಯ ಕಿಡಿಗೇಡಿಗಳು ಒಡೆದಿದ್ದರಿಂದಾಗಿ ಕೆರೆಯ ದಂಡೆಯಲ್ಲಿನ ದಲಿತರ ಜಮೀನುಗಳಿಗೆ ನೀರು ನುಗ್ಗಿ ಎಲ್ಲಾ ಬೆಳೆಗಳು ಹಾಳಾಗಿವೆ.ಇದರಿಂದ ದಲಿತ ರೈತರು ದೊಡ್ಡ ಮಟ್ಟದಲ್ಲಿ ನಷ್ಟಕ್ಕೀಡಾಗಿದ್ದಾರೆ.ಇದು ಪ್ರತಿ ವರ್ಷ ಹೀಗೆ ಆಗುತ್ತಿದೆ.ಆದರೆ ಸರಕಾರ ಕೆರೆಯ ದಂಡೆಯ ದಲಿತರಿಗೆ ಮೀನು ಸಾಕಾಣಿಕೆಗೆ ಪರವಾನಿಗೆ ನೀಡದೆ ಬೇರೆಯವರಿಗೆ ನೀಡುವ ಮೂಲಕ ಅನ್ಯಾಯವೆಸಗುತ್ತಿದ್ದಾರೆ.

Contact Your\'s Advertisement; 9902492681

ಆದ್ದರಿದಂದ ಇಂದು ಧರಣಿಯ ಮೂಲಕ ಸರಕಾರಕ್ಕೆ ಆಗ್ರಹಿಸುತ್ತಿದ್ದು ಕೂಡಲೆ ಬೆಳೆ ನಷ್ಟಕ್ಕೀಡಾದ ರೈತರಿಗೆ ಪರಿಹಾರ ನೀಡಬೇಕು ಮತ್ತು ಜಮೀನು ಕಳೆದುಕೊಂಡ ರೈತರಿಗೆ ಮೀನುಗಾರಿಕೆ ನಡೆಸಲು ಪರವಾನಿಗೆ ನೀಡಬೇಕು ಇಲ್ಲವಾದಲ್ಲಿ ಮುಂದೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.ಅಲ್ಲದೆ ವಾಗಣಗೇರಾ ಆಲ್ದಾಳ ಎಸ್.ಡಿ.ಗೋನಾಲ ಮತ್ತಿತರೆ ಗ್ರಾಮಗಳಲ್ಲಿ ಹಳ್ಳದ ನೀರಿನಿಂದ ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ನೀಡಬೇಕು,ಚಿಕ್ಕನಹಳ್ಳಿ ಹಳ್ಳದ ಸೇತುವೆ ನಿರ್ಮಿಸಬೇಕು,ತಾಲೂಕಿನಾದ್ಯಂತ ಅತಿವೃಷ್ಟಿ ಮತ್ತು ಅನಾವೃಷ್ಟಿಗೀಡಾದ ರೈತರಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಿದರು.

ನಂತರ ತಹಸೀಲ್ದಾರರಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ್ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.ಧರಣಿಯಲ್ಲಿ ಮುಖಂಡರಾದ ಅಪ್ಪಣ್ಣ ಗಾಯಕವಾಡ ಶರಣಪ್ಪ ವಾಗಣಗೇರಾ ರಾಮಚಂದ್ರ ವಾಗಣಗೇರಾ ಮಹೇಶ ಕರಡಕಲ್ ಶಿವಶರಣ ನಾಗರೆಡ್ಡಿ ಗುರುಪಾದಪ್ಪ ಬನ್ನಾಳ ಕೃಷ್ಣಾ ವಕೀಲ ಸಿದ್ದಪ್ಪ ಸುರಪೂರಕರ್ ಹುಸನಪ್ಪ ಜೀವಣಗಿ ಮಲ್ಲಿಕಾರ್ಜುನ ವಾಗಣಗೇರಾ ಪಕೀರಪ್ಪಗೌಡ ಟಣಕೆದಾರ ಬಸವರಾಜ ಚಿಂಚೋಳಿ ಬಸವರಾಜ ಕೆಂಭಾವಿ ಮರೆಪ್ಪ ಮುಲ್ಲಾ ಶಿವಪ್ಪ ಕೆಂಭಾವಿ ಈರಪ್ಪ ಏವೂರ ಚಂದ್ರಪ್ಪ ಯಾಳಗಿ ಮಡಿವಾಳಪ್ಪ ಯಾಳಗಿ ಬಸವರಾಜ ಯಡಿಯಾಪುರ ಮಂಜುನಾಥ ಮುಲ್ಲಾ ಚೆನ್ನಪ್ಪ ಕೆಂಭಾವಿ ಮಹಾದೇವಪ್ಪ ಬೋನಾಳ ಸಿದ್ದು ಜಮಖಂಡಿ ಶರಣು ಗುಡಿಮನಿ ಅಂಬ್ರೇಶ ದೊರಿ ಬಸವರಾಜ ಬಸರಿಗಿಡ ಸಂತೋಷ ಮಾಳಳ್ಳಿಕರ್ ತಿಮ್ಮಪ್ಪ ವಸಗೇರಿ ಬಾಬು ಕಟ್ಟಿಮನಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here