17 ಪ್ರಮುಖ ನಗರಗಳಲ್ಲಿ ‘ಅಮೇಜಾನ್ ಇ ಕಾಮರ್ಸ್’ ಸಮೀಕ್ಷೆ

0
32

ಬೆಂಗಳೂರು: ಮುಂಬರುವ ಹಬ್ಬದ ಋತುವಿನಿಂದ ಅಮೆಜಾನ್‌ನಲ್ಲಿ ಮಾರಾಟವಾಗುವ ಎಸ್‌ಎಮ್‌ಬಿ ಮಾರಾಟಗಾರರ ನಿರೀಕ್ಷೆಗಳನ್ನು ಮತ್ತು ಅದಕ್ಕೆ ಅವರು ಹೇಗೆ ತಯಾರಿ ನಡೆಸುತ್ತಿದ್ದಾರೆ ಎಂಬುದನ್ನು ಅಳೆಯಲು ಕಂಪನಿಯು ನಿಯೋಜಿಸಿರುವ ವಿಶೇಷ ಸಮೀಕ್ಷೆಯ ಆವಿಷ್ಕಾರಗಳನ್ನು ಅಮೆಜಾನ್ ಹಂಚಿಕೊಂಡಿದೆ. 2020 ರ ಸೆಪ್ಟೆಂಬರ್ 12 ರಿಂದ 22 ರವರೆಗೆ 2000ಕ್ಕೂ ಹೆಚ್ಚಿನ ಅಮೆಜಾನ್ ಮಾರಾಟಗಾರರಲ್ಲಿ ನೀಲ್ಸನ್ ಈ ಅಧ್ಯಯನವನ್ನು ನಡೆಸಿದ್ದಾರೆ.

ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾದ ಈ ಅಧ್ಯಯನವು ದೆಹಲಿ ಎನ್‌ಸಿಆರ್, ಮುಂಬೈ, ಕೋಲ್ಕತಾ, ಚೆನ್ನೈ, ಹೈದರಾಬಾದ್, ಬೆಂಗಳೂರು, ಪುಣೆ, ಅಹಮದಾಬಾದ್, ಲಕ್ನೋ, ಲುಧಿಯಾನ, ಇಂದೋರ್, ನಾಗ್ಪುರ, ಕೊಯಮತ್ತೂರು, ಕೊಚ್ಚಿ, ಪಾಟ್ನಾ, ಜೈಪುರ ಮತ್ತು ರಾಜ್‌ಕೋಟ್ ಸೇರಿದಂತೆ 17 ನಗರಗಳ ಮಾರಾಟಗಾರರನ್ನು ಒಳಗೊಂಡಿದೆ. ಸಂಪರ್ಕಿಸಲ್ಪಟ್ಟ 98% (2036) ಮಾರಾಟಗಾರರು ಹಬ್ಬದ ಅವಧಿಯಲ್ಲಿ ಇ-ಕಾಮರ್ಸ್ ಅನ್ನು ಹತೋಟಿಯಲ್ಲಿಟ್ಟುಕೊಳ್ಳಲು ನೋಡುತ್ತಿದ್ದಾರೆ.

Contact Your\'s Advertisement; 9902492681

ಸಮೀಕ್ಷೆ ಮಾಡಲಾದ ಅಮೆಜಾನ್ ಮಾರಾಟಗಾರರ ಈ ಹಬ್ಬದ ಋತುವಿನ ಪ್ರಮುಖ ನಿರೀಕ್ಷೆಗಳು ಹೀಗಿವೆ:

  • 89% ಹೊಸ ಗ್ರಾಹಕರ ತಲುಪುವಿಕೆಯನ್ನು ಉಲ್ಲೇಖಿಸಿದ್ದಾರೆ
  • 85% ಮಾರಾಟದ ಹೆಚ್ಚಳವನ್ನು ಉಲ್ಲೇಖಿಸಿದ್ದಾರೆ
  • 74% ವ್ಯವಹಾರ ಲಾಕ್‌ಡೌನ್ ನಂತರದ ಚೇತರಿಕೆಯನ್ನು ಉಲ್ಲೇಖಿಸಿದ್ದಾರೆ
  • 78% ಉತ್ಪನ್ನಗಳ ಗೋಚರತೆಯ ಹೆಚ್ಚಳವನ್ನು ಉಲ್ಲೇಖಿ ದ್ದಾರೆ
  • 29% ದಷ್ಟು ಸಮೀಕ್ಷೆಯ ಮಾರಾಟಗಾರರು ಯಶಸ್ವಿ ಹಬ್ಬದ ಋತುವನ್ನು ಹೊಂದಲು ಹೆಚ್ಚುವರಿ ಹೂಡಿಕೆಗಳನ್ನು ಮಾಡಲು ಯೋಜಿಸುತ್ತಿದ್ದಾರೆ.

ಅದರಲ್ಲಿ:

  1.  62% ಮಾರಾಟಗಾರರು ಬೇಡಿಕೆಯ ಏರಿಕೆಯನ್ನು ಪೂರೈಸಲು ಕಾಲೋಚಿತ ನೇಮಕಾತಿಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದಾರೆ; 76% ಮಾರಾಟಗಾರರು ಕಾಲೋಚಿತ ನೇಮಕಾತಿಯಲ್ಲಿ ಹೂಡಿಕೆ ಮಾಡುತ್ತಾರೆಂದು ಹೇಳುವುದರೊಂದಿಗೆ ಮಹಾನಗರಗಳಲ್ಲದ ನಗರಗಳಲ್ಲಿ ಶೇಕಡಾವಾರು ಹೆಚ್ಚಾಗಿದೆ.
  2.  ಕಾಲೋಚಿತ ನೇಮಕಾತಿ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಜಿಸುವ 69% ಮಾರಾಟಗಾರರು ಈ ಹಬ್ಬದ ಸಮಯದಲ್ಲಿಕನಿಷ್ಠ 5 ಜನರನ್ನು ನೇಮಿಸಿಕೊಳ್ಳುವ ಯೋಜನೆಯನ್ನು ಹೊಂದಿದ್ದಾರೆ.
  3. 23% ಮಾರಾಟಗಾರರು ೨೫ ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಳ್ಳಲು ಯೋಜಿಸಿದ್ದಾರೆ
  4. 63% ಮಾರಾಟಗಾರರು ಸಿಬ್ಬಂದಿ ತರಬೇತಿಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದಾರೆ
  5.  59% ಮಾರಾಟಗಾರರು ದಾಸ್ತಾನು ಮತ್ತು ಉಗ್ರಾಣವನ್ನು ಹೆಚ್ಚಿಸುವಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದಾರೆ.
  6. ಮಾರ್ಕೆಟಿಂಗ್ ಸಂಬಂಧಿತ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು 77% ಯೋಜಿಸಿದ್ದಾರೆ
  7. ಸಮೀಕ್ಷಿಸಲಾದ ಮಾರಾಟಗಾರರ ಪೈಕಿ 48% ಜನರು ಮೊಟ್ಟ ಮೊದಲ ಬಾರಿಗೆ ಹಬ್ಬದ ಋತುಮಾನದಲ್ಲಿ ಅಮೆಜ಼ಾನ್‌ನಲ್ಲಿ ಮಾರಾಟ ಮಾಡಲಿದ್ದಾರೆ

ಸಮೀಕ್ಷೆಯ 48% ಮಾರಾಟಗಾರರು ಹಬ್ಬದ ಸಮಯದಲ್ಲಿ ಅಮೆಜಾನ್‌ನಲ್ಲಿ ಮೊದಲ ಬಾರಿಗೆ ಮಾರಾಟ ಮಾಡಲಿದ್ದಾರೆ. ಭಾರತದಾದ್ಯಂತದ ಎಸ್‌ಎಮ್‌ಬಿಗಳಲ್ಲಿ ತಂತ್ರಜ್ಞಾನ ಮತ್ತು ಇ-ಕಾಮರ್ಸ್‌ನಲ್ಲಿ ಹೆಚ್ಚುತ್ತಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತಿದ್ದಾರೆ. ಕಳೆದ 10 ತಿಂಗಳಿನಲ್ಲಿ ಅಮೆಜಾನ್.ಇನ್ ನಲ್ಲಿನ ಒಟ್ಟು ಮಾರಾಟಗಾರರ ಸಂಖ್ಯೆ 5.5 ಲಕ್ಷದಿಂದ 6.5 ಲಕ್ಷಕ್ಕೆ ಏರಿದೆ

ಈ ವರ್ಷ ಮತ್ತೆ ಹಬ್ಬದ ಅವಧಿಯಲ್ಲಿ ಮಾರಾಟ ಮಾಡುವ ಮಾರಾಟಗಾರರಿಂದ; ೭೫% ಈ ವರ್ಷ ಮಾರಾಟದಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತಿದ್ದಾರೆ. ಅವರಲ್ಲಿ 57%, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಹಬ್ಬದ ಸಮಯದಲ್ಲಿ ತಮ್ಮ ವ್ಯವಹಾರದಲ್ಲಿ ಎರಡು ಅಂಕೆಗಳ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದಾರೆ. ಕಳೆದ ವರ್ಷದ ಹಬ್ಬದ ಸಮಯಕ್ಕೆ ಹೋಲಿಸಿದರೆ ಸುಮಾರು 30% ಜನರು ವ್ಯವಹಾರದಲ್ಲಿ 25% ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ನಿರೀಕ್ಷಿಸುತ್ತಿದ್ದಾರೆ.

ಅಮೆಜಾನ್ ಇಂಡಿಯಾದ ಉಪಾಧ್ಯಕ್ಷರಾದ ಮನೀಶ್ ತಿವಾರಿಯವರು ಈ ಸಂಶೋಧನೆಗಳ ಬಗ್ಗೆ ಪ್ರತಿಕ್ರಿಯಿಸಿದ್ದು, “ಹಬ್ಬದ ಸಮಯದ ಘಟನೆಗಳಿಗೆ ನಮ್ಮ ಪ್ರಮುಖ ಮಾಪನವೆಂದರೆ ನಮ್ಮ ಮಾರಾಟಗಾರರು ಹೇಗೆ ಗಳಿಸುತ್ತಾರೆ ಮತ್ತು ಈ ಹಬ್ಬದ ಋತುವಿನಲ್ಲಿ, ನಮ್ಮ ಮಾರಾಟಗಾರರು ಈ ವ್ಯವಹಾರವನ್ನು ಚೇತರಿಸಿಕೊಳ್ಳಲು ಮತ್ತು ಚುರುಕುಗೊಳಿಸಲು ಸಹಾಯ ಮಾಡುವುದು ಹಿಂದೆಂದಿಗಿಂತಲೂ ಮುಖ್ಯವಾಗಿದೆ. ಮಾರಾಟಗಾರರು ಮತ್ತು ಸಣ್ಣ ಉದ್ಯಮಗಳ ಅಗತ್ಯತೆಗಳು ಮತ್ತು ಅವಶ್ಯಕತೆಗಳಿಗೆ ಈ ನಮ್ಮ ಪ್ರಯತ್ನಗಳು ಹೊಂದಿಕೆಯಾಗುತ್ತವೆ ಎಂದು ನೀಲ್ಸನ್ ವರದಿಯು ಸೂಚಿಸುತ್ತದೆ. ನಾವು ಹೊಸ ಸಾಮಾನ್ಯವನ್ನು ತಲುಪುವಾಗ, ಗ್ರಾಹಕರ ಮನೆಗಳ ಸುರಕ್ಷತೆಯೊಂದಿಗೆ, ವ್ಯವಹಾರಗಳು ಭಾರತದಾದ್ಯಂತ ವ್ಯಾಪಕವಾದ ಗ್ರಾಹಕರನ್ನು ತಲುಪಲು ಹೊಸ ಅವಕಾಶಗಳನ್ನು ಸೃಷ್ಟಿಸಲು ಮತ್ತು ಅವರ ಉತ್ಪನ್ನಗಳಿಗೆ ಹೆಚ್ಚಿನ ಮೌಲ್ಯವನ್ನು ಉತ್ಪಾದಿಸಲು ಇಕಾಮರ್ಸ್ ಅನ್ನು ಸರಿಯಾಗಿ ಉಪಯೋಗಿಸುತ್ತೇವೆ.” ಎಂದರು.

ಇಂಡಿಯಾ ಎಸ್‌ಎಂಇ ಫೋರಂ ನ ಅಧ್ಯಕ್ಷರಾದ ವಿನೋದ್ ಕುಮಾರ್ ಹೇಳಿದರು, “ನೀಲ್ಸನ್ ಸಮೀಕ್ಷೆಯು ಕಳೆದ ೪ ತಿಂಗಳುಗಳಿಂದ ನಾವು ಒತ್ತು ನೀಡುತ್ತಿರುವ ಎಂಎಸ್‌ಎಂಇಗಳಿಗೆ ಡಿಜಿಟಲ್ ಸಬಲೀಕರಣದ ಮಹತ್ವವನ್ನು ಸೂಚಿಸುತ್ತದೆ. ಅವುಗಳಲ್ಲಿ ಹಲವರಿಗೆ ಮುಂಬರುವ ಹಬ್ಬದ ಸಮಯವು ಸಾಕಷ್ಟು ಉತ್ತೇಜನಕಾರಿಯಾಗಿದೆ, ಏಕೆಂದರೆ ಅವರು ಮೊದಲ ಬಾರಿಗೆ ಸುರಕ್ಷಿತ ಖರೀದಿ ಮತ್ತು ವ್ಯಾಪಕ ಮಾರುಕಟ್ಟೆಗೆ ಪ್ರವೇಶವನ್ನು ಖಾತ್ರಿಪಡಿಸುವ ಕಡೆಗೆ ಇಕಾಮರ್ಸ್‌ನಂತಹ ಮಾರ್ಗಗಳನ್ನು ಅನ್ವೇಷಿಸುತ್ತಾರೆ. ಹೆಚ್ಚು ಹೆಚ್ಚು ಗ್ರಾಹಕರು ಆನ್‌ಲೈನ್‌ನಲ್ಲಿ ಸುರಕ್ಷಿತವಾಗಿ ಶಾಪಿಂಗ್ ಮಾಡಲು ಆದ್ಯತೆ ನೀಡುತ್ತಾರೆ ಎಂದು ನಾವು ನಂಬುತ್ತೇವೆ; ಆನ್‌ಲೈನ್‌ನಲ್ಲಿ ಗ್ರಾಹಕರನ್ನು ಆಕರ್ಷಿಸುವ ಎಂಎಸ್‌ಎಂಇಗಳ ಸಾಮರ್ಥ್ಯವು ಉದ್ಯೋಗವನ್ನು ಕೋವಿಡ್‌ನ ಪೂರ್ವ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಭಾರತೀಯ ಆರ್ಥಿಕತೆಯ ಚೇತರಿಕೆ ಮತ್ತು ಯಶಸ್ಸಿಗೆ ಪ್ರಮುಖವಾಗಿರುತ್ತದೆ. ”

ಹೆಚ್ಚಿನ ಮಾಹಿತಿಗಾಗಿ, www.amazon.in/aboutus ಗೆ ಭೇಟಿ ನೀಡಿ, ಅಮೆಜ಼ಾನ್‌ನಲ್ಲಿನ ಸುದ್ದಿಗಾಗಿ www.twitter.com/AmazonNews_IN ಗೆ ಭೇಟಿ ಕೊಡಿ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here