ಕಲಬುರಗಿ: ಗಾಂಧಿಯವರ ಕನಸಿನಂತೆ ಗ್ರಾಮೀಣ ಭಾರತದ ಅಭಿವೃದ್ಧಿಯಿಂದ ಮಾತ್ರ ಬಲಿಷ್ಠ ಭಾರತದ ನಿರ್ಮಾಣ ಸಾಧ್ಯ. ರಾಷ್ಟ್ರಪಿತಾ ಮಹಾತ್ಮಾ ಗಾಂಧಿಯವರು ಬಲಿಷ್ಠ ಭಾರತದ ನಿರ್ಮಾಣವಾಗಬೇಕಾದರೆ ಗ್ರಾಮೀಣ ಭಾರತದ ಸಮಗ್ರ ಅಭಿವೃದ್ಧಿಯಿಂದ ಮಾತ್ರ ಸಾಧ್ಯವೆಂದು ಪ್ರತಿಪಾದಿಸಿರುವ ಬಗ್ಗೆ ಹೈದ್ರಾಬಾದ ಕರ್ನಾಟಕ ಜನಪರ ಸಂಫರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಹೇಳಿದರು.
ಹೈ.ಕ.ಜ.ಸಂಫರ್ಷ ಸಮಿತಿಯ ವತಿಯಿಂದ ಸಮಿತಿಯ ಕಛೇರಿಯಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಪಿತಾ ಮಹಾತ್ಮಾ ಗಾಂಧಿಯವರ 151ನೇ ಜಯಂತಿಯ ಸಂದರ್ಭದಲ್ಲಿ ಮಾತ್ನಾಡಿದ ಅವರು ಮಹಾತ್ಮಗಾಂಧಿಯವರು ಭಾರತದ ಅರ್ಥವ್ಯವಸ್ಥಯ ಕುರಿತು ಬರೆದಿರುವ ಪುಸ್ತಕಗಳಲ್ಲಿ ಉಲ್ಲೇಖಿಸಿರುವಂತೆ ನಮ್ಮ ದೇಶದ ಕೃಷಿ ಮತ್ತು ಕೃಷಿ ಆಧಾರಿತ ಕೈಗಾರಿಕೆಗಳು, ಕುಠೀರ ಉದ್ಯೋಗಗಳ ಬಲವರ್ಧನೆಯಿಂದ ಗ್ರಾಮೀಣ ಭಾರತದ ಅಭಿವೃದ್ಧಿಯಾಗುತ್ತದೆ,ಗ್ರಾಮೀಣ ಭಾರತದ ಅಭಿವೃದ್ಧಿ ಯಿಂದ ಮಾತ್ರ ಬಲಿಷ್ಠ ಅರ್ಥ ವ್ಯವಸ್ಥೆಯ ಭಾರತ ನಿರ್ಮಾಣ ಸಾಧ್ಯವೆಂಬುವದು ಮಹಾತ್ಮಾ ಗಾಂಧಿ ಯವರ ಬಲವಾದ ಕನಸಾಗಿತು ಎಂದು ವಿವರಿಸಿದರು.
ಸಮಿತಿಯ ಯುವ ಘಟಕದ ಸದಸ್ಯರಾದ ವೈಭವರವರು ಮಾತನಾಡಿ ಪ್ರಸ್ತುತ ಯುವ ಪೀಳಿಗೆ ಮಹಾತ್ಮಗಾಂಧಿಯವರ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳುವದು ಅತಿ ಅವಶ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ಮನು, ಪ್ರಶಾಂತ, ಬೀಮಣ್ಣಾ, ಶರಣಯ್ಯಾ ಸ್ವಾಮಿ, ನಿಂಗಣ್ಣಾ, ರಾಜೇಶ ಕೋರಿ, ವಿನೋದ ಮುಂತಾದವರು ಹಾಜರಿದ್ದರು.