ಕಲಬುರಗಿ: ಉತ್ತರಪ್ರದೇಶದ ಹತ್ರಾತ್ ನಗರದಲ್ಲಿ ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಕೃತ್ಯ ಅಮಾನುಷ್ಯವಾಗಿದ್ದು, ಕೃತ್ಯ ವೇಸಗಿದ ಆರೋಪಿಗಳಿಗೆ ಕೂಡಲೇ ಗಲ್ಲಿಗೇರಿಸಬೇಕು ಎಂದು ಸಮಾಜ ಸೇವಕ ಗಜಾನಂದ ದೇಶಪಾಂಡೆ ಒತ್ತಾಯಿಸಿದ್ದಾರೆ.
ಹೈದರಾಬಾದ್ನಲ್ಲಿ ಯುವತಿಯನ್ನು ರೇಪ್ ಮಾಡಿದ ಆರೋಪಿಗಳನ್ನು ಎನ್ಕೌಂಟರ್ ಮಾಡಿದ ಹಾಗೆ ಹತ್ರಾಸ್ ಪ್ರಕರಣದ ಅತ್ಯಾಚಾರ ಆರೋಪಿಗಳಿಗೂ ಕೂಡ ಕಠಿಣವಾದ ಶಿಕ್ಷೆ ನೀಡಿ ಎನ್ಕೌಂಟರ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.