ಸುರಪುರ: ಸುಮಾರು ೩ ದಶಕಗಳಿಂದ ನಗರದಲ್ಲಿ ಹೋಟೆಲ್ ಉದ್ಯಮ ನಡೆಸಿದ್ದ ತುಕಾರಾಮ ಜಿಫ್ರೆ (ದಾದಾ) ಕೊರೊನಾ ಸೊಂಕಿನಿಂದ ಮೃತ ಪಟ್ಟಿದ್ದಾರೆ.ಮೂವತ್ತು ವರ್ಷಗಳ ಹಿಂದೆ ಸುರಪುರ ಪಟ್ಟಣದ ಬಸ್ ನಿಲ್ದಾಣದ ಬಳಿಯಲ್ಲಿ ಹೋಟೆಲ್ ಆರಂಭಿಸಿ ದಿನದ ೨೪ ಗಂಟೆಗಳ ಕಾಲ ನಿರಂತರ ತೆರೆದಿರುವ ಹೋಟೆಲ್ ಇಡೀ ತಾಲೂಕಿನ ಏಕೈಕ ಹೋಟೆಲ್ ಎಂದರೆ ಅದು ಸುರಪುರ ಬಸ್ ನಿಲ್ದಾಣದ ಬಳಿಯಲ್ಲಿನ ದಾದಾ ಹೋಟೆಲ್ ಎಂದು ಹೆಸರುವಾಸಿಯಾಗಿತ್ತು.
ಮೊದಲಿಗೆ ಚಿಕ್ಕ ಹೋಟೆಲ್ ಆರಂಭಿಸಿ ನಂತರದಲ್ಲಿ ಮೂರು ಹೋಟೆಲ್‌ಗಳನ್ನು ಆರಂಭಿಸುವ ಮೂಲಕ ನಗರದಲ್ಲಿ ತಮ್ಮದೆ ಆದ ಛಾಪು ಮೂಡಿಸಿದ್ದ ತುಕಾರಾಮ ದಾದಾ ಅವರು ಕಳೆದ ಕೆಲ ದಿನಗಳ ಹಿಂದೆ ಕೊರೊನಾ ಸೊಂಕಿಗೆ ಒಳಗಾಗಿದ್ದರು,ಚಿಕಿತ್ಸೆಗಾಗಿ ಕಳೆದ ಒಂದು ವಾರದಿಂದ ಸೋಲಾಪುರ ಆಸ್ಪತ್ರೆಗೆ ದಾಖಲಾಗಿದ್ದ ಅವರು ಸೋಮವಾರ ಸಂಜೆ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.ಮೃತರ ಅಂತ್ಯಕ್ರೀಯೆಯು ಕೋವಿಡ್ ನಿಯಮದಂತೆ ಮಂಗಳವಾರ ಸಂಜೆ ನಗರದ ಶೆಳ್ಳಗಿ ಕ್ರಾಸ್ ಬಳಿಯಲ್ಲಿ ನೆರವೇರಿಸಲಾಯಿತು.
ತುಕಾರಾಮ ದಾದಾ ಅವರಿಗೆ ಮೂರು ಜನ ಗಂಡು ಮಕ್ಕಳಿದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಇವರ ನಿಧನಕ್ಕೆ ತಾಲೂಕಿನ ಅನೇಕ ಗಣ್ಯರು,ವೀರಶೈವ ಲಿಂಗಾಯತ ಸಮುದಾಯ ಮತ್ತು ಗೌಳಿ ಸಮಾಜ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.