ಬೆಂಗಳೂರು: ಭಾವನಾತ್ಮಕವಾಗಿ ಹುಟ್ಟಿಕೊಂಡ ಕತೆ, ಕಾವ್ಯ ಸೃಜನಾತ್ಮಕವಾಗಿ, ರಚನಾತ್ಮಕವಾಗಿ, ಹಾಗೂ ಅರ್ಥಗರ್ಭಿತವಾಗಿ ಕಟ್ಟುವುದು ಒಂದು ಕಲೆಯಾಗಿದೆ ಎಂದು ಬೆಂಗಳೂರಿನ ಯುವ ಕವಯತ್ರಿ ನವಿಲೆ ಶಾಲಿನಿ ಹೇಳಿದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಲೇಖಕಿ ವಿಜಯಲಕ್ಷ್ಮಿ ಸತ್ಯಮೂರ್ತಿ ಅವರ ಪಂಚಮಿ ಹಾಗೂ ಪ್ರೀತಿಯ ಪಂಚಗವ್ಯ ಕೃತಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಇನ್ನೋರ್ವ ಅತಿಥಿಗಳಾದ ಭೈರಮಂಗಲ ರಾಮೇಗೌಡರು ಮಾತನಾಡಿ ಒಬ್ಬ ಲೇಖಕರ ಬದುಕು ಮತ್ತು ಬರಹ ಒಂದೇ ನೆಲೆಗಟ್ಟಿನಲ್ಲಿ ಇದ್ದಾಗ ಮಾತ್ರ ಅರ್ಥಪೂರ್ಣವಾದ ಗೌರವ ಸಿಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಮಾರಂಭದ ವೇದಿಕೆಯ ಮೇಲೆ ಸ್ವಪ್ನ ಬುಕ್ ಹೌಸ್ ನ ಕನ್ನಡ ಸಂಘದ ಅಧ್ಯಕ್ಷರಾದ ರಂಗೇ ಗೌಡ್ರು ಹಾಗೂ ಲೇಖಕಿ ವಿಜಯಲಕ್ಷ್ಮಿ ಸತ್ಯಮೂರ್ತಿ ಹಾಗೂ ಇತರರು ಉಪಸ್ಥಿತರಿದ್ದರು.