ಮಾದಿಗ ಸಮಾಜಕ್ಕೆ ನಗರಸಭೆಯ ಅಧ್ಯಕ್ಷ ಸ್ಥಾನ ನೀಡಲು ಆಗ್ರಹ

0
152

 

ಶಹಾಬಾದ: ಸ್ಥಳೀಯ ನಗರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆ ಮೀಸಲು ಇದ್ದು, ಅತ್ಯಂತ ಹಿಂದುಳಿದ ಸಮಾಜವಾದ ಮಾದಿಗ ಸಮಾಜಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕೆಂದು ನಗರ ಮಾದಿಗ ಸಮಾಜದ ಮುಖಂಡ ಡಿ.ಡಿ.ಓಣಿ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಹಾಗೂ ಮುಖಂಡರಿಗೆ ಒತ್ತಾಯಿಸಿದ್ದಾರೆ.

Contact Your\'s Advertisement; 9902492681

ಅವರು ಶುಕ್ರವಾರ ಮಾದಿಗ ಸಮಾಜದ ವತಿಯಿಂದ ಜಗದಂಬಾ ಮಂದಿರದ ಸಭಾಂಗಣದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಶಹಾಬಾದ ಪುರಸಭೆಯಿಂದ ನಗರ ಸಭೆಯಾಗಿ ಪರಿವರ್ತನೆಯಾದರೂ ಇಲ್ಲಿಯವರೆಗೆ ದಲಿತ ಸಮುದಾಯದ ಮಾದಿಗ ಸಮಾಜದವರಿಗೆ ಅಧ್ಯಕ್ಷ ಸ್ಥಾನ ದಕ್ಕಿಲ್ಲ. ದಲಿತ ಸಮುದಾಯದ ಎಲ್ಲಾ ವರ್ಗದವರು ಒಂದು, ಎರಡು ಬಾರಿ ಅಧ್ಯಕ್ಷರಾಗಿದ್ದಾರೆ. ಆದರೆ, ದಲಿತ ಸಮೂದಾಯದಲ್ಲಿ ಸಾಮಾಜಿಕವಾಗಿ, ರಾಜಕೀಯವಾಗಿ ಅತ್ಯಂತ ಹಿಂದುಳಿದ ಮಾದಿಗ ಸಮಾಜಕ್ಕೆ ಯಾವುದೆ ಪಕ್ಷ ಈವರೆಗೆ ಆಧ್ಯತೆ ನೀಡಿಲ್ಲ.

ಈ ಹಿಂದೆ ಮಾಜಿ ಸಚಿವ ಸಿ.ಗುರುನಾಥ ಅವರು ಸಚಿವರಾಗಿದ್ದಾಗೆ ಮಾದಿಗ ಸಮಾಜದ ಮೈಲಾರಿ ದಿವಿಟಗಿ ಅವರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸಬೇಕೆಂದೆ ಧರಣಿ ಸಹ ನಡೆಸಲಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೆ ಅವಕಾಶ ಸಿಗದೆ, ಸಮಾಜದವರಿಗೆ ಅಧ್ಯಕ್ಷ ಸ್ಥಾನ ಸಿಗದೇ ವಂಚಿತರಾಗಿದ್ದರು. ಸದ್ಯ ಅವಕಾಶ ಕೂಡಿ ಬಂದಿದ್ದು, ಈ ಬಾರಿ ನಗರ ಸಭೆಗೆ ಪರಿಶಿಷ್ಠ ಜಾತಿ ಮಹಿಳೆ ಮೀಸಲು ಬಂದಿದೆ. ನಗರಸಭೆಯಲ್ಲಿ ಪೀರಮ್ಮಾ ಪಗಲಾಪೂರ ಅವರು ಸದಸ್ಯರಾಗಿದ್ದರಿಂದ ಅವರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸಬೇಕೆಂದು ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಹಾಗೂ ನಗರಸಭೆಯ ಸದಸ್ಯರಿಗೆ ಮನವಿ ಮಾಡಿದರು. ನಗರ ಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಬಹುಮತ ಇರುವದರಿಂದ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ.ಆದರೆ ಮಾದಿಗ ಸಮಾಜಕ್ಕೆ ಇಲ್ಲಿಯವರೆಗೆ ಸಿಗದ ಸಾಮಾಜಿಕ ನ್ಯಾಯವನ್ನು ಈ ಬಾರಿ ನೀಡಬೇಕೆಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶರಣು ಪಗಲಾಪುರ, ಮೋಹನಹರ ಮೇತ್ರಿ, ರವಿ ಬೆಳಮಗಿ, ಶ್ರೀಧರ ಕೊಲ್ಲೂರ, ಸಂತೋಷ ಹುಲಿ, ರಾಹುಲ ಕೋರೆ, ಕಮಲಕಾಂತ ಕಾಂಬಳೆ, ಶ್ರೀಕಾಂತ ದಾಕ್ಷೆ, ಭೀಮರಾಯ ಕನಕನಳ್ಳಿ, ಅಜಯ ಬನೇರ, ಕಾಶೀನಾಥ ಜೀನಕೇರಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here