ದೇಶಾದ್ಯಂತ ದಲಿತ ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಮನವಿ

0
60

ಜೇವರ್ಗಿ : ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರಕಾರಿ ನೌಕರರ ಸಂಘ ಜೇವರ್ಗಿ ಉತ್ತರಪ್ರದೇಶದ ಕ್ರಾಸಿನಲ್ಲಿ ವಾಲ್ಮೀಕಿ ಸಮುದಾಯದ 19 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಆಕೆಯ ನಾಲಿಗೆ ಕತ್ತರಿಸಿ ಬೆನ್ನು ಮೂಳೆ ಮುರಿದು ವಿಕೃತ ಪ್ರದರ್ಶನ ಮಾಡಿರುವುದು ಅಮಾನವೀಯ ಹಾಗೂ ಖಂಡನಾರ್ಹವಾಗಿ.

ಆಸ್ಪತ್ರೆಯಲ್ಲಿ ಮತಪಟ್ಟಿ ಯುವತಿಯ ಮೃತದೇಹವನ್ನು ಬಾಲಕರಿಗೆ ಹಸ್ತಾಂತರ ಮಾಡದೇ ಪೊಲೀಸರೇ ಸುಟ್ಟು ಹಾಕಿರುವುದು ಕಾನೂನು ಬಾಹಿರ ಮತ್ತು ಶೋಷಿತ ಜನಾಂಗಕ್ಕೆ ಮಾಡಿದ ಘೋರ ಅನ್ಯಾಯವಾಗಿದೆ. ಇಂತಹ ಕೃತ್ಯಗಳು ಮೇಲಿಂದ ಮೇಲೆ ನಿರಂತರವಾಗಿ ನಡೆಯುತ್ತಿದ್ದರೂ ಸರಕಾರಗಳು ಯಾವುದೇ ಕ್ರಮ ಕೈಗೊಳ್ಳದೆ ಅಪರಾಧಿಗಳ ಪರವಾಗಿ ನಿಂತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗಿದೆ. ಇಂತಹ ಅಮಾನವೀಯ ಕೃತಿಗಳನ್ನು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ನೌಕರರ ಸಂಘ ಬೆಂಗಳೂರು ತಾಲೂಕ ಘಟಕ ಜೇವರ್ಗಿ ಖಂಡಿಸಿದೆ.

Contact Your\'s Advertisement; 9902492681

ಈ ಕುರಿತಂತೆ ರಾಷ್ಟ್ರಪತಿಗಳು ಆರೋಪಿ ಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ಮನವಿ ಮಾಡಿದರು . ಮನೆ ಪತ್ರವನ್ನು ಜೇವರ್ಗಿ ತಹಶೀಲ್ದಾರರ ಮೂಲಕ ಕಳುಹಿಸಿಕೊಟ್ಟರು ,ಸಂಘದ ಗೌರವಾಧ್ಯಕ್ಷರಾದ ಶಂಕ್ರಪ್ಪ ಬಡಿಗೇರ್ ಅಧ್ಯಕ್ಷರಾದ ಸಾಹೇಬಗೌಡ ಮಾಲಿ ಪಾಟೀಲ್ ಪ್ರಧಾನ ಕಾರ್ಯದರ್ಶಿ ಸಾಬಣ್ಣ ವಾಲ್ಮೀಕಿ ಹಾಗೂ ಸಂಘಟನಾ ಕಾರ್ಯದರ್ಶಿ ಓಬಳೇಶ್ಸೇ ಸೇರಿದಂತೆ ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ ,ವಿಶ್ವನಾಥ್ ,ಗುಂಡಪ್ಪ. ಟಣಕೇದಾರ್ ,ಸಿದ್ದು ಬಿರಾಳ, ಸೇರಿದಂತೆ ನೌಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

  • ರಾಜು ಮುದ್ದಡಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here