ಕಲಬುರಗಿ: ಬೆಳ್ಳಂಬೆಳಿಗ್ಗೆ ನಗರದ ಎಂ.ಜಿ. ರಸ್ತೆಯ ಫುಡ್‌ಝೋನ್ ಹತ್ತಿರದ ಆರ್.ಟಿಓ. ಹೋಗುವ ರಸ್ತೆಯಲ್ಲಿ 24 ವರ್ಷದ ಓರ್ವ ವ್ಯಕ್ತಿಯ ಬರ್ಬರ ಹತ್ಯೆಮಾಡಿರುವ ಘಟನೆ ನಡೆದಿದೆ.
ನಗರದ ನಯಾ ಮೊಹಲ್ಲಾ ನಿವಾಸಿ, ಮೊಹಮ್ಮದ್ ದಸ್ತೇಗಿರ್ ಅಹ್ಮದ್ ಅಮಜದ್ (24) ಕೊಲೆಯಾದ ವ್ಯಕ್ತಿ ಎಂದು ಗುರುತ್ತಿಸಲಾಗಿದೆ.
ಬೆಳಿಗ್ಗೆ 5.30ಕ್ಕೆ ಕಟ್ಟಡವೊಂದರ ಮುಂದೆ ಶವ ಬಿದ್ದಿರುವುದನ್ನು ನೋಡಿದ ವಾಚ್ ಮನ್ ಪೋಲಿಸರಿಗೆ ದೂರವಾಣಿ ಮಾಡಿ ವಿಷಯ ತಿಳಿಯುತ್ತಲೇ, ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬೇರೆಯೆಡೆಯಿಂದ ಶವವನ್ನು ಇಲ್ಲಿ ಬಿಸಾಡಿ ಹೋಗಿರಬಹುದು ಎಂದು ಶಂಕಿಸಲಾಗಿದ್ದು, ಕೊಲೆಯ ಬಗ್ಗೆ ಸುದ್ದಿ ತಿಳಿಯುತ್ತಲೇ ಫೊಡ್‌ಝೋನ್ ಬಳಿ ಜನಜಂಗುಳಿಿ ಸೇರಿದರು.
ಈ ಕುರಿತು ಎಂ.ಬಿ. ನಗರ ಪೋಲಿಸರು ತನಿಖೆ ಕೈಗೊಂಡಿದ್ದು, ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ.