ಜನಮನ ತಲುಪಿದಾಗ ಕವಿತೆಗಳಿಗೆ ಮನ್ನಣೆ ಸಿಗುತ್ತದೆ: ಅಲ್ಲಾಗಿರಿರಾಜ್ ಅಭಿಮತ

0
27

ಸುರಪುರ: ’ಪ್ರಸ್ತುತ ವಿದ್ಯಮಾನಗಳಿಗೆ ಕವಿಗಳು ಸ್ಪಂದಿಸುತ್ತಾ, ಜನಮನ ತಲುಪಬೇಕು, ಅಂದಾಗ ಮಾತ್ರ ಕವಿತೆಗೆ ಮನ್ನಣೆ ಸಿಗುತ್ತದೆ ಎಂದು ಖ್ಯಾತ ಘಜಲ್ ಸಾಹಿತಿ ಅಲ್ಲಾಗಿರಿರಾಜ್ ಮಾತನಾಡಿದರು.

ತಾಲೂಕು ಕಸಾಪದಿಂದ ಹಮ್ಮಿಕೊಂಡಿದ್ದ ಆನ್ಲೈನ್ ಕವಿಗೋಷ್ಟಿಯಲ್ಲಿ ಆಶಯ ಭಾಷಣ ಮಾಡಿ ಮಾತನಾಡಿ, ಸುರಪುರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಪ್ರಥಮ ಬಾರಿಗೆ ಆನ್‌ಲೈನ್ ಕವಿಗೋಷ್ಠಿಯನ್ನು ಏರ್ಪಡಿಸಿ ಒಂದು ಹೊಸ ದಾಖಲೆ ನಿರ್ಮಿಸಿದೆ, ಇಡೀ ಕಲಬುರ್ಗಿ ವಿಭಾಗದಲ್ಲಿಯೇ ಇದು ಪ್ರಥಮ ಆನ್‌ಲೈನ್ ಕವಿಗೋಷ್ಠಿಯಾಗಿದೆ ಎಂದರು.

Contact Your\'s Advertisement; 9902492681

ಕವಿಗೋಷ್ಠಿ ಉದ್ಘಾಟಿಸಿದ ತಾಲೂಕಾ ಕಸಾಪ ಮಾಜಿ ಅಧ್ಯಕ್ಷ ಬಸವರಾಜ ಜಮದ್ರಖಾನಿ ಮಾತನಾಡಿ, ಈ ಕವಿಗೋಷ್ಠಿ ಎಲ್ಲರಿಗೂ ಮಾದರಿಯಾಗಲಿ, ಹೀಗೆಯೇ ಶ್ರೀನಿವಾಸ ಜಾಲವಾದಿಯವರು ಕಾರ‍್ಯಕ್ರಮಗಳನ್ನು ಏರ್ಪಡಿಸುತ್ತಾ ದಾಪುಗಾಲು ಹಾಕುತ್ತಾ ಹೋಗಲಿ ಎಂದರು.

ಕವಿಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಯಾದಗಿರಿ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಹಿರಿಯ ಸಾಹಿತಿ ಶಾಂತಪ್ಪ ಬೂದಿಹಾಳ, ಕಲಬುರಗಿ ಹೈಕೋರ್ಟಿನ ನ್ಯಾಯವಾದಿ, ಸಾಹಿತಿ ಜೆ.ಅಗಸ್ಟಿನ್ ಭಾಗವಹಿಸಿದ್ದರು.
ಕವಿಗೋಷ್ಠಿಯಲ್ಲಿ ಕವಿಗಳಾದ ನಬೀಲಾಲ ಮಕಾನದಾರ, ಬೀರಣ್ಣ ಆಲ್ದಾಳ, ಕನಕಪ್ಪ ವಾಗಣಗೇರಿ, ಕೃಷ್ಣಮೂರ್ತಿ ಕೈದಾಳ, ಮಹಾಂತೇಶ ಗೋನಾಲ, ವೀರಣ್ಣ ಕಲಕೇರಿ, ನಿಂಗನಗೌಡ ದೇಸಾಯಿ, ವಿಠ್ಠಲ ಚವ್ಹಾಣ, ಶಿವಶರಣಪ್ಪ ಶಿರೂರ, ಸರ್ವರ್, ವೆಂಕನಗೌಡ ಪಾಟೀಲ ಕೆಂಭಾವಿ, ಸಾಹೇಬಗೌಡ ಬಿರಾದಾರ, ಮಲ್ಲಿಕಾರ್ಜುನ ಉದ್ಧಾರ, ಮುದ್ಧಪ್ಪ ಅಪ್ಪಾಗೋಳ, ಕಮಲಾಕರ.ಎ.ಕೃಷ್ಣ, ಜ್ಯೋತಿ ಬಸವರಾಜ, ಪಾರ್ವತಿ ದೇಸಾಯಿ, ದೊಡ್ಡಮಲ್ಲಿಕಾರ್ಜುನ ಉದ್ಧಾರ, ಕುತಬುದ್ಧಿನ್ ಅಮ್ಮಾಪುರ, ರಾಠೋಡ.ಎಚ್., ಸುರೇಶ ಪತ್ತಾರ, ಹಳ್ಳೇರಾವ ಕುಲಕರ್ಣಿ, ಈರಯ್ಯ ಕೊಳ್ಳಿಮಠ, ಕೃಷ್ಣಮೂರ್ತಿ.ಎ.ಎನ್., ವಿದ್ಯಾಕುಮಾರ ಬಡಿಗೇರ, ವೆಂಕಟೇಶಗೌಡ ಪಾಟೀಲ, ಗೋಪಣ್ಣ ಯಾದವ, ಪ್ರಕಾಶ ಅಲಬನೂರ, ಅನ್ವರ ಜಮಾದಾರ, ರಾಘವೇಂದ್ರ ಭಕ್ರಿ, ಶಕುಂತಲಾ ಜಾಲವಾದಿ, ಸುಮಂಗಲಾ, ರಾಮಪ್ರಸಾದ ತೋಟದ ಮೊದಲಾದವರು ತಮ್ಮ ಕವಿತೆಗಳನ್ನು ಅಂತರ್ಜಾಲ ಮುಖಾಂತರ ವಾಚಿಸಿದರು.
ಕಸಾಪ ಗೌರವ ಕಾರ‍್ಯದರ್ಶಿ ರಾಜಶೇಖರ ದೇಸಾಯಿ ಸ್ವಾಗತಿಸಿದರು, ಶ್ರೀಹರಿ ಆದೋನಿ ಪ್ರಾರ್ಥಿಸಿದರು, ಸಾಹೇಬಗೌಡ ಬಿರಾದಾರ ಪ್ರಾಸ್ತಾವಿಕ ಮಾತನಾಡಿದರು, ಕಸಾಪ ಗೌ.ಕಾರ‍್ಯದರ್ಶಿ ದೇವು ಹೆಬ್ಬಾಳ ನಿರೂಪಿಸಿದರು, ಮುದ್ದಪ್ಪ ಅಪ್ಪಾಗೋಳ ವಂದಿಸಿದರು. ಅನ್ವರ ಜಮಾದಾರ ಹಾಗೂ ಪೂಜಾ ಜಾಲವಾದಿ ಅಂತರ್ಜಾಲದ ತಾಂತ್ರಿಕ ಕಾರ‍್ಯಕ್ಕೆ ನೆರವಾದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here