ಮಂಡ್ಯ: ಸರಳ ದಸರಾ ಆಚರಿಸೋಣ: ಸಚಿವ ಡಾ.ನಾರಾಯಣ್‍ಗೌಡ

0
24

ಮಂಡ್ಯ: ಕರೋನ ಮಹಾಮರಿ ಇರುವುದರಿಂದ ಶ್ರೀರಂಗಪಟ್ಟಣ ದಸರಾವನ್ನು ಸಂಪ್ರದಾಯಿಕ ಮತ್ತು ಸಂಸ್ಕೃತಿವಾಗಿ ಸರಳ ದಸರಾ ಆಚರಿಸೋಣ ಹಾಗೂ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡ ಈ ಸರಳ ದಸರಾವನ್ನು ಯಶಸ್ವಿಯಾಗಿ ಆಚರಿಸೋಣ ಜಿಲ್ಲಾ ಉಸ್ತವಾರಿ ಸಚಿವ ಡಾ.ನಾರಾಯಣಗೌಡ.

ಇಂದು ಶ್ರೀರಂಗಪಟ್ಟಣ ತಾಲ್ಲೂಕಿನ ತಾಲ್ಲೂಕು ಕಛೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅದ್ಯಕ್ಷತೆಯಲ್ಲಿ ನಡೆದ ಶ್ರೀರಂಗಟ್ಟಣ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ನಗರದ ಪ್ರಮುಖ ಬೀದಿಗಳಗೆ ದೀಪ ಅಲಂಕಾರ ಮಾಡಲಾಗುತ್ತಿದೆ ಮತ್ತು 24 ರಂದು ಮಧ್ಯಾಹ್ನ 3 ಗಂಟೆಗೆ ಬನ್ನಿ ಮಂಟಪಕ್ಕೆ ಪೂಜೆ ಸಲ್ಲಿಸಿ ಬಾಳೆ ಗಿಡ ಕಡೆದ ನಂತರ ಶ್ರೀ ಚಾಮುಂಡೇಶ್ವರಿ ಹಾಗೂ ಗಣಪತಿ ಪೂಜೆ ಮಾಡಿ ರಥೋತ್ಸವನ್ನು ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡುವ ಮೂಲಕ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಮುಕ್ತಾಯವಾಗುತ್ತದೆ ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಎಂ.ವಿ.ವೆಂಕಟೇಶ್‍ರವರು ಮಾತನಾಡಿ ಮೂರು ದಿನಕೊಮ್ಮೆ ಬನ್ನಿ ಮಂಟಪ ಹಾಗೂ ಕಲ್ಯಾಣಿ ಸುತ್ತಮುತ್ತ ಸ್ವಚ್ಚತಾ ಕಾರ್ಯವನ್ನು ಪುರಸಭೆಯಿಂದ ಮಾಡಬೇಕು ಮತ್ತು ಬಾಬುರಾಯನಕೊಪ್ಪಲಿ ನಿಂದ ಕೆ.ಆರ್.ಎಸ್ ವರೆಗೂ ಇರುವ ರಸ್ತೆಯ ಡಿವೈಡರ್ ಅನ್ನು ಶುಚಿತ್ವಗೋಳಿಸಿ ಬಣ್ಣ ಬಳಿಸಬೇಕು ಎಂದರು, ನಂತರ ಪಟ್ಟಣದ ಬನ್ನಿಮಂಟಪಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಜುಲ್ಫಿಕರ್ ಉಲ್ಲಾ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿಗಳಾದ ಪರಶುರಾಮ್, ಉಪ ವಿಭಾಗ ಅಧಿಕಾರಿಗಳು ಮತ್ತು ದಸರಾ ಉಪಸಮಿತಿಯ ಅಧ್ಯಕ್ಷರಾದ ಶಿವಾನಂದ ಮೂರ್ತಿ, ಶ್ರೀರಂಗಪಟ್ಟಣದ ತಹಶಿಲ್ದಾರರಾದ ರೂಪ ಮತ್ತು ದೇವಸ್ಥಾನದ ಮುಖ್ಯ ಅರ್ಚಕರು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here