ಶಹಾಬಾದ:ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಹಕ ವ್ಯವಹಾರಗಳ ಸಚಿವ ರಾಮವಿಲಾಸ್ ಪಾಸ್ವಾನ್ ಅವರ ನಿಧನಕ್ಕೆ ದಲಿತ ಸಂಘರ್ಷ ಸಮಿತಿ ವತಿಯಿಂದ ರವಿವಾರ ಶದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ ಮಾತನಾಡಿ, ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥರಾಗಿ ಸುಮಾರು ಐದು ದಶಕಗಳಿಂದ ರಾಜಕೀಯದಲ್ಲಿ ಸಕ್ರೀಯರಾಗಿದ್ದ ರಾಮವಿಲಾಸ್ ಪಾಸ್ವಾನ್ ಅವರು ದೇಶದ ಪ್ರಮುಖ ದಲಿತ ಮುಖಂಡರಾಗಿ, ದೀನದಲಿತರ ಶಕ್ತಿಯಾಗಿದ್ದರು.ಜನಪರ ಕಾರ್ಯಕ್ರಮಗಳ ಮೂಲಕ ಬಿಹಾರದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.ಅವರ ಅಗಲಿಕೆಯಿಂದ ಒಬ್ಬ ಸಜ್ಜನ ರಾಜಕಾರಣಿ ಕಳೆದುಕೊಂಡಂತಾಗಿದೆ.ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಅಪಾರ ಅಪಾರ ಗೌರವ ಹೊಂದಿದ್ದ ಅವರು ಅಂಬೇಡ್ಕರ್ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಲು ಅವರು ಕೈಗೊಂಡ ಶ್ರಮ ಹಾಗೂ ಮುತುವರ್ಜಿ ಸ್ಮರಿಸುವಂತದ್ದು ಎಂದು ಹೇಳಿದರು.
ದಸಂಸ ಜಿಲ್ಲಾ ಸಂಚಾಲಕ ಮರೆಪ್ಪ ಮೇತ್ರೆ,ತಾಲೂಕಾ ಸಂಚಾಲಕ ಮಲ್ಲಣ್ಣ ಮಸ್ಕಿ, ನರಸಿಂಹಲೂ ರಾಯಚೂರಕರ್,ದಲಿತ ವಿದ್ಯಾರ್ಥಿ ಒಕ್ಕೂಟದ ಸಂಚಾಲಕ ಪೂಜಪ್ಪ ಮೇತ್ರೆ, ನಗರ ಸಂಚಾಲಕ ಮಲ್ಲಿಕಾರ್ಜುನ ಹಳ್ಳಿ, ಮಲ್ಲಣ್ಣ ಮರತೂರ, ಶರಣಬಸಪ್ಪ ಮೇತ್ರೆ, ಅರ್ಜುನ ಮೇತ್ರೆ ಇತರರು ಇತರರು ಇದ್ದರು.