ವಿಪರೀತ ಮಳೆ ತಾಲೂಕು ಕಚೇರಿ ಸಂಕಿರಣ ಜಲಾವೃತ

0
90

ಕಲಬುರಗಿ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಜೆವರ್ಗಿ ತಾಲೂಕು ಆಡಳಿತದ ಕಚೇರಿಯು ಸಂಪೂರ್ಣವಾಗಿ ಜಲಾವೃತ್ತವಾಗಿ ಕಚೇರಿಗೆ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಪ್ರವೇಶಿಸಲು ಹರಸಾಹಸ ಪಡುತ್ತಿದ್ದಾರೆ.

ಜೇವರ್ಗಿ ಪಟ್ಟಣದ ಹೆದ್ದಾರಿಯ ಮುಖ್ಯ ಭಾಗದಲ್ಲಿರುವ ಸರಕಾರಿ ಕಚೇರಿಗಳ ಸಂಖ್ಯೆಯಲ್ಲಿ ಪ್ರತಿಸಲವೂ ಮಳೆ ಬಂದಾಗ ನೀರು ಸಂಗ್ರಹವಾಗುತ್ತಿದೆ. ಈ ಕುರಿತಂತೆ ಶಾಶ್ವತ ಪರಿಹಾರ ಕೈಗೊಳ್ಳುವಲ್ಲಿ ಸರಕಾರಿ ಅಧಿಕಾರಿಗಳು ಮೀನಾಮೇಷ ಎಣಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Contact Your\'s Advertisement; 9902492681

ಈ ಕುರಿತಂತೆ ಇಲ್ಲಿನ ಕಚೇರಿಯ ರಸ್ತೆ ಹದಗೆಟ್ಟಿದ್ದು ಮೊಣಕಾಲು ವರೆಗೂ ನೀರು ನಿಲ್ಲುತ್ತಿದ್ದರು ಸಹ ಇಲ್ಲಿಗೆ ಹಲವಾರು ಬಾರಿ ಆಗಮಿಸಿ ಈ ಸಮಸ್ಯೆ ಕುರಿತು ಅರಿವಿದ್ದರೂ ಸಹ ,ಜನಪ್ರಿಯ ಶಾಸಕರಾದ ಡಾ. ಅಜಯ್ ಸಿಂಗ್ ತಲೆಕೆಡಿಸಿಕೊಂಡಿಲ್ಲ ! ಅವರ ನಿಸ್ಕಾಳಜಿಯನ್ನು ತೋರಿಸುತ್ತದೆ ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.

ಜೇವರ್ಗಿ ಪಟ್ಟಣದಲ್ಲಿ ಎಲ್ಲ ವಾರಗಳಲ್ಲೂ ಸಹ ಅಲ್ಲಲ್ಲಿ ನೀರು ನಿಂತಿದ್ದು ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟು ಮಾಡಿದೆ . ಸರಿಯಾದ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಇಲ್ಲದೆ ಈ ವರ್ಷ ಎಲ್ಲ ಮಳೆಗಳು ಸಮಯಕ್ಕೆ ಸರಿಯಾಗಿ ಸುರಿವ ಜೊತೆಯಲ್ಲಿ ವಾಯುಭಾರ ಕುಸಿತದಿಂದಾಗಿ ಮಳೆ ಬರುತ್ತಿದೆ. ಸಾರ್ವಜನಿಕರು ಸಂಪರ್ಕ ಹಾಗೂ ಕಚೇರಿಯ ಕೆಲಸಗಳಿಗಾಗಿ ಅಗತ್ಯ ವಸ್ತುಗಳನ್ನು ತರಲು ಪರಿತಪಿಸುವಂತಾಗಿದೆ.

  • ರಾಜು ಮುದ್ದಡಗಿ ಜೇವರ್ಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here