ಕಲಬುರಗಿ: ಜಿಲ್ಲೆಯದಾದ್ಯಂತ ಮತ್ತು ನಗರದಾದ್ಯಂತ ಮಂಗಳವಾರ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಹಾಗೂ ಕಲಬುರಗಿ ನಗರದಿಂದ ಬರುವ ನಾಲೆ,ಚರಂಡಿ ನೀರು, ಹಳ್ಳಕೊಳ್ಳ ಸೇರಿದಂತೆ ವಿವಿಧ ಗ್ರಾಮಗಳ ನೀರು ಸಂಗ್ರಹ ಗೊಂಡು, ಪ್ರವಾಹದಂತೆ ಉಕ್ಕಿ ಹರಿದುಕೊಂಡು ಬಂದು ಭಾರಿ ನೀರು ಪಾಣೇಗಾಂವ್ ಗ್ರಾಮದ ಆರಂಭದಲ್ಲಿ ಬರುವ ಮುಖ್ಯ ಸೇತುವೆಗೆ ಬಂದು ಸಂಪೂರ್ಣವಾಗಿ ಮಳೆನೀರಿನಿಂದ ಸೇತುವೆ ಮುಳುಗಿ ಹೋಗಿದೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕಲ್ಬುರ್ಗಿ ಮತ್ತು ಪಾಣೇಗಾಂವ ಗ್ರಾಮದ ನಡುವಿನ ಪ್ರಮುಖ ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.
ಇದರ ಪರಿಣಾಮ ಈ ಹಳ್ಳದ ಸುತ್ತಮುತ್ತಲಿನ ಹೊಲಗದ್ದೆಗಳು ನೀರು ತುಂಬಿವೆ.ಕೆಲ ಬೆಳೆಗಳು ಹರಿದುಕೊಂಡು ಹೋಗಿದ್ದು, ಮತ್ತು ಹೊಲದಲ್ಲಿ ನೀರು ಜಲಾವೃತಗೊಂಡು ಹಾನಿಯಾಗಿವೆ. ಇದರಿಂದಾಗಿ ರಸ್ತೆ, ಸಾರಿಗೆ ಸಂಪರ್ಕ ಸಂಪೂರ್ಣವಾಗಿ ಮಾರ್ಗದಿಂದ ಸ್ಥಗಿತ ಗೊಂಡಿದೆ. ರಾತ್ರಿ ಗ್ರಾಮಕ್ಕೆ ಬಂದ ಮುಕ್ಕಾಂ ಬಸ್ ಮುಂಜಾನೆ ನಗರಕ್ಕೆ ಬರಬೇಕಾಗಿತ್ತು. ಸಂಚಾರ ಕಡಿತಗೊಂಡಿದ್ದ ರಿಂದ ಗ್ರಾಮದಲ್ಲೇ ಬಸ್ ಉಳಿದು ಕೊಳ್ಳುವ ಪರಿಸ್ಥಿತಿ ನಿರ್ಮಾಣವಾಯಿತು.
ಮತ್ತೆ ಇದರಿಂದಾಗಿ ಗ್ರಾಮಸ್ಥರು, ವಿದ್ಯಾರ್ಥಿಗಳು, ಮಹಿಳೆಯರು ತುಂಬಾ ಸಂಕಷ್ಟ ಅನುಭವಿಸುವಂತಾಗಿದೆ. ಪ್ರತಿಸಾರಿ ಭಾರಿ ಮಳೆ ಬಂದರೆ ಸಾಕು. ಗ್ರಾಮದ ಸೇತುವೆ ಮುಳುಗಡೆಯಾಗುವುದಂತೂ ಗ್ಯಾರಂಟಿಯಾಗಿದೆ. ಇದೊಂದು ಗ್ರಾಮಸ್ಥರಿಗೆ ನಿರಂತರ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.
3-4 ವರ್ಷಗಳ ಹಿಂದೆನೇ ಹೊಸ ಬ್ರಿಡ್ಜ್ ಕಂ ಬ್ಯಾರೇಜ್ ಮಾಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಸೇತುವೆ ನಿರ್ಮಿಸುವ ಸಂದರ್ಭದಲ್ಲಿ ಗುತ್ತಿಗೆದಾರನ ಗಮನಕ್ಕೆ ತಂದರು ಗ್ರಾಮಸ್ಥರ ಮಾತಿಗೆ ಸ್ಪಂದಿಸಿಲ್ಲ. ಹೀಗಾಗಿ ಮತ್ತೆ ಅದೇ ಗಂಭೀರ ಸಮಸ್ಯೆ ಮರುಕಳಿಸಿದ್ದರಿಂದ ಗ್ರಾಮಸ್ಥರು ತೊಂದರೆ ಎದುರಿಸುವಂತಾಗಿದೆ.
ಮುಂದಿನ ಭವಿಷ್ಯದ ದೃಷ್ಟಿಯಿಂದ ಮುಂದಾಲೋಚನೆ ಇಟ್ಟುಕೊಂಡು ಮುಂಜಾಗ್ರತವಾಗಿ ದೊಡ್ಡ ಪ್ರಮಾಣದಲ್ಲಿ ಸೇತುವೆ ನಿರ್ಮಿಸಿದರೆ ಇಂದು ಯಾವುದೇ ಈ ಸಮಸ್ಯೆಯಾಗುತ್ತಿರಲಿಲ್ಲ ಎಂದು ಸಾಮಾಜಿಕ ಹೋರಾಟಗಾರ, ಗ್ರಾಮದ ನಿವಾಸಿ ಭೀಮಾಶಂಕರ್ ಪಾಣೇಗಾಂವ್ ಮತ್ತು ಪಂಚಾಯಿತಿ ಸದಸ್ಯ ನಾಗೇಶ್ ಮುಚಖೇಡ ಆಕ್ರೋಶ ವ್ಯಕ್ತಪಡಿಸಿದರು.
ಮತ್ತೆ ಹೊಸದಾಗಿ ದೊಡ್ಡಮಟ್ಟದ ಸೇತುವೆ ನಿರ್ಮಿಸಿ ಶಾಶ್ವತ ಪರಿಹಾರ ಒದಗಿಸಲು ಗ್ರಾಮಸ್ಥರು ಎಲ್ಲರೂ ಒಗ್ಗಟ್ಟಾಗಿ ಈ ಭಾಗದ ಜನಪ್ರತಿನಿಧಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಒತ್ತಾಯಿಸಬೇಕಿದೆ ಎಂದರು.
- ಭೀಮಾಶಂಕರ್ ಪಾಣೇಗಾಂವ್