ಪ್ರವಾಹ ಪೀಡಿತ ಗ್ರಾಮಕ್ಕೆ ಕಮಲಾಪೂರ ತಹಶೀಲ್ದಾರ್ ಅಂಜುಮ್ ತಬಸುಮ್ ಭೇಟಿ

0
92

ಕಲಬುರಗಿ: ಬುಧುವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಉಂಟಾಗಿ ಕಮಲಾಪೂರ ತಾಲೂಕಿನ ಕುದಮೂಡ ಗ್ರಾಮದ ಮನೆಗಳಲ್ಲಿ ನೀರು ನುಗ್ಗಿದ ಪರಿಣಾಮ ಮನೆಯಲ್ಲಿದ್ದ ಧವಸ ಧಾನ್ಯಗಳು ನೀರು ಪಾಲಾಗಿವೆ ಹಾಗೂ ಕುದಮೂಡ ಗ್ರಾಮದ ಸೇತುವೆ ಕೊಚ್ಚಿಕೊಂಡು ಹೋದ ಪರಿಣಾಮ ರಸ್ತೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ ಹಳ್ಳದ ದಂಡೆಗಿರುವ ನೂರಾರು ಎಕರೆ ಜಮೀನಿನಲ್ಲಿ ಬೆಳೆದ ಬೆಳೆಗಳು ಕೊಚ್ಚಿಕೊಂಡು ಹೋಗಿರುವುದರಿಂದ ಸಾಕಸ್ಟು ಪ್ರಮಾಣದ ಹಾನಿಯಾಗಿದೆ.

ಸದರಿ ವಿಷಯದ ಬಗ್ಗೆ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ತಳಕೇರಿ ಯವರು ಕಮಲಾಪೂರ ತಹಶಿಲ್ದಾರರಾದ ಅಂಜುಮ ತಬಸುಮ್ ರವರ ಗಮನಕ್ಕೆ ತಂದಿದ್ದರು. ಈ ಬಗ್ಗೆ ತಕ್ಷಣ ಸ್ಪಂದಿಸಿದ ಕಮಲಾಪೂರ ತಹಶೀಲ್ದಾರ್ ಅಂಜುಮ್ ತಬಸುಮ್ ರವರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ಮಾಡಿದರು ಹಾಗೂ ಗ್ರಾಮಸ್ಥರ ಸಮಸ್ಯೆ ಆಲಿಸಿದ ತಹಶಿಲ್ದಾರರು ಅತಿ ಶಿಘ್ರದಲ್ಲಿ ಪರಿಹಾರ ವದಗಿಸುವ ಬಗ್ಗೆ ಭರವಸೆ ನೀಡಿದರು.

Contact Your\'s Advertisement; 9902492681

ಇದೆ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ತಳಕೇರಿ ಅವರು ಸತತ ಪ್ರವಾಹದಿಂದಾಗಿ ಅಪಾಯದ ಅಂಚಿನಲ್ಲಿರುವ ಕಮಲಾಪೂರ ತಾಲೂಕಿನ ಕುದಮೂಡ ಗ್ರಾಮವನ್ನು ಮುಳುಗಡೆ ಪ್ರದೇಶವೆಂದು ಘೋಷಿಸಿ ಬೇರೆ ಕಡೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸಬೇಕೆಂದು ಆಗ್ರಹಿಸಿ ತಹಶೀಲ್ದಾರರಾದ ಅಂಜುಮ್ ತಬಸುಮ್ ರವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರರಾದ ಸೈಯದ ನಿಸರ್ ಅಹ್ಮದ್ ಕಂದಾಯ ನಿರೀಕ್ಷಕರಾದ ವೆಂಕಟೇಶ, ಗ್ರಾಮ ಲೆಕ್ಕಾಧಿಕಾರಿಗಳಾದ ರಾಜಕುಮಾರ ಚವ್ಹಾಣ. ಗ್ರಾiಸ್ಥರಾದ ಸಿದ್ರಾಮಪ್ಪ ಸೂಗೂರ, ಗುರುರಾಜ ಪೂಜಾರಿ, ಶಿವಶರಣಪ್ಪಾ ಜಮಾದಾರ, ಬೀರಪ್ಪ ಪೂಜಾರಿ ಶರಣಪ್ಪ ಚಾರಿ, ಪರಮೇಶ್ವರ್ ಬೇಲೂರ ಶರಣಬಸಪ್ಪಾ ತಳಕೇರಿ ಸಾಗರ್ ತಳಕೇರಿ ಹಾಗೂ ಇತರರು ಹಾಜರಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here