ಸುರಪುರ: ಇಂದು ಎಲ್ಲೆಡೆ ಕೊರೊನಾ ಸೊಂಕು ಹೆಚ್ಚಾಗುತ್ತಿದೆ ಇದಕ್ಕೆ ಜನರ ನಿರ್ಲಕ್ಷ್ಯ ಕಾರಣವಾಗಿದೆ,ಆದ್ದರಿಂದ ಕೊರೊನಾ ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಅಗತ್ಯವಾಗಿದೆ ಎಂದು ಹಿರಿಯ ಶ್ರೇಣಿ ನ್ಯಾಯಾಧೀಶೆ ತಯ್ಯಬಾ ಸುಲ್ತಾನ ಹೇಳಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ತಾಲೂಕು ವಕೀಲರ ಸಂಘ ಮತ್ತು ತಾಲೂಕು ಆಡಳಿತ, ಆರೋಗ್ಯ ಇಲಾಖೆಯ ವತಿಯಿಂದ ಕೋವಿಡ್ ೧೯ ಕುರಿತು ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆನೀಡಿ ಮಾತನಾಡಿದ ಅವರು, ಕೋವಿಡ್ ೧೯ ವೈರಸ್ ಕುರಿತು ಜನರು ಭಯಪಡುವುದು ಬೇಡ ಇದರಬಗ್ಗೆ ಜಾಗೃತಿವಹಿಸುವುದು ಅವಶ್ಯವಾಗಿದೆ ಮಾಸ್ಕ ಮತ್ತು ಪರಸ್ಪರ ಅಂತರಕಾಯ್ದುಕೊಳ್ಳುವುದು ಅವಶ್ಯವಾಗಿದೆ. ಬಹಳಷ್ಟು ಜನರು ಮಾಸ್ಕ ಧರಸದೆ ಇರುವುದು ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳದೆ ನಿರ್ಲಕ್ಷವಹಿಸುತ್ತಿದ್ದಾರೆ ಇದರಿಂದ ವೈರಸ್ ಹರಡುತ್ತಿದೆ ಕಾರಣ ವೈರಸ್‌ನ ಕುರಿತು ಜನರಿಗೆ ಜಾಗೃತಿ ಮೂಡಿಸುವುದು ತುಂಬಾ ಅವಶ್ಯಕ ಎಂದರು.
ನಂತರ ಆಟೋದ ಮೂಲಕ ತಾಲೂಕಿನಲ್ಲಿ ನಡೆಸುವ ಜಾಗೃತಿ ಅಭಿಯಾನದ ಭಿತ್ತಿಪತ್ರಗಳು ಮತ್ತು ಕರಪತ್ರಗಳನ್ನು ನಗರದ ಪ್ರಮುಖ ರಸ್ತೆಗಳಲ್ಲಿ ಜನರಿಗೆ ಹಂಚುವ ಮೂಲಕ ಜಾಗೃತಿ ಮೂಡಿಸಲಾಯಿತು.
ನ್ಯಾಯಾಧೀಶರಾದ ಅಮರನಾಥ ಬಿ.ಎನ್, ಚಿದಾನಂದ ಬಡಿಗೇರ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ತಾಲೂಕು ಆರೋಗ್ಯಾಧಿಕಾರಿ ಡಾ.ಆರ್.ವಿ.ನಾಯಕ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಹ್ಮದ್ ಹುಸೇನ, ಮಲ್ಲಣ್ಣ ಬೋವಿ, ಆದಪ್ಪ ಹೊಸಮನಿ, ನಾಗಪ್ಪ ಚವಲ್ಕರ್, ಮಧುಸೂಧನ, ಸಂತೋಷ, ಚನ್ನಪ್ಪ ಹೂಗಾರ, ವಿನಾಯಕ ನಾಯಕ ಸೇರಿದಂತೆ ಇನ್ನಿತರರಿದ್ದರು.