ಉತ್ತರ ಪ್ರದೇಶದ ಅತ್ಯಾಚಾರ ಘಟನೆ ಖಂಡಿಸಿ ಕೂಲಿಕಾರರ ಪ್ರತಿಭಟನೆ

0
22

ಸುರಪುರ: ದೇಶದಲ್ಲಿ ನಿತ್ಯವು ಮಹಿಳೆಯರ ಮೇಲೆ ಅತ್ಯಾಚಾರದಂತಹ ಹೇಯ ಕೃತ್ಯಗಳು ನಡೆಯುತ್ತಿದ್ದು ಇದನ್ನು ತಡೆಯುವಲ್ಲಿ ಕೇಂದ್ರ ಮತ್ತು ಉತ್ತರ ಪ್ರದೇಶ ಸರಕಾರ ಸಂಪೂರ್ಣ ವಿಫಲವಾಗಿವೆ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ದವಲಸಾಬ್ ನದಾಫ್ ಖಂಡಿಸಿದರು.

ನಗರದ ತಹಸೀಲ್ ಕಚೇರಿ ಮುಂದೆ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ಸುರಕ್ಷತೆ ಇಲ್ಲದಂತಾಗಿದೆ,ನಿರಂತರವಾಗಿ ಮಹಿಳೆಯರ ಮೇಲೆ ಅತ್ಯಾಚಾರ ಘಟನೆಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ,ಆದ್ದರಿಂದ ಉತ್ತರ ಪ್ರದೇಶ ಸರಕಾರ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.ಅಲ್ಲದೆ ಮೊನ್ನೆ ನಡೆದ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

Contact Your\'s Advertisement; 9902492681

ನಂತರ ಪ್ರಧಾನಮಂತ್ರಿಗಳಿಗೆ ಬರೆದ ಮನವಿಯನ್ನು ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಅನಸೂರ್ ತಾಲೂಕು ಅಧ್ಯಕ್ಷ ನಬಿರಸೂಲ್ ಕಾರ್ಯದರ್ಶಿ ರಾಜು ದೊಡ್ಮನಿ ಉಪಧ್ಯಕ್ಷ ಶರಣಬಸವ ಜಂಬಲದಿನ್ನಿ ಖಾಜಾಸಾಬ್ ದಳಪತಿ ಅಯ್ಯಪ್ಪ ಬಾಚಿಮಟ್ಟಿ ಲಕ್ಷ್ಮೀ ಭಜಂತ್ರಿ ಮಲ್ಲು ಹುಲಿಮನಿ ಗಂಗಮ್ಮ ದೊಡ್ಮನಿ ಸಿದ್ದಮ್ಮ ಭಜಂತ್ರಿ ರಂಜಾನಸಾಬ್ ಕನ್ನೆಳ್ಳಿ ಶಿವಶಂಕರ ಆಲ್ದಾಳ ರಂಗಪ್ಪ ನಾಯಕ ಆಲ್ದಾಳ ಅಂಬ್ರೇಶ ಜಾಲಿಬೆಂಚಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here