ಶಹಾಬಾದ:ನಗರದಲ್ಲಿ ಶನಿವಾರ ನಡೆದ ತಾಪಂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಶಹಾಬಾದ ತಾಲೂಕಿನ ತಾಪಂ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಹೊನಗುಂಟಾ ತಾಪಂ ಸದಸ್ಯೆ ಸಂಗೀತಾ ದೇವೆಂದ್ರ ಕಾರೊಳ್ಳಿ ಅವರಿಗೆ ಶನಿವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಮುಖಂಡ ವಿಜಯಕುಮಾರ ರಾಮಕೃಷ್ಣ, ಡಾ.ರಶೀದ್ ಮರ್ಚಂಟ್ ಹಾಗೀ ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ ಮರತೂರ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ನಂತರ ಮಾತನಾಡಿದ ಕಾಂಗ್ರೆಸ್ ಮುಖಂಡ ವಿಜಯಕುಮಾರ ರಾಮಕೃಷ್ಣ, ಶಹಾಬಾದ ತಾಲೂಕಿನ ಮೊಟ್ತಾಟ ಮೊದಲ ತಾಪಂ ಚುನವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಂಗೀತಾ ದೇವೆಂದ್ರ ಕಾರೊಳ್ಳಿ ಅವರು ಅವಿರೋಧವಾಗಿ ಆಯ್ಕೆಯಾಗಿ ಶಹಾಬಾದ ತಾಲೂಕಿನ ಪ್ರಪ್ರಥಮ ಅಧ್ಯಕ್ಷರಾಗಿರುವುದು ನಮ್ಮೆಲ್ಲರಿಗೂ ಮತ್ತು ಪಕ್ಷಕ್ಕೂ ಹೆಮ್ಮೆಯ ವಿಷಯ.ಬಹುಮತವಿರುವ ಕಾರಣ ತಾಪಂ ಅಧಿಕಾರ ನಮ್ಮ ಪಕ್ಷಕ್ಕೆ ಒಲಿದಿದೆ.ಅದೇ ರೀತಿ ನಗರಸಭೆಯಲ್ಲೂ ನಮ್ಮ ಪಕ್ಷಕ್ಕೆ ಸಂಪೂರ್ಣ ಬಹುಮತವಿರುವುದರಿಂದ ಅಲ್ಲಿಯೂ ನಾವು ಅಧಿಕಾರಿ ಚುಕ್ಕಾಣಿ ಹಿಡಿಯುವುದು ಖಚಿತ.ಮುಂಬರುವ ದಿನಗಳಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿಕೊಂಡು ಪಕ್ಷದ ಸಂಘಟನೆ ಮಾಡುವುದು ಅತಿ ಅವಶ್ಯಕವಾಗಿದೆ ಎಂದರಲ್ಲದೇ, ಭೀಮಾ ಹಾಗೂ ಕಾಗಿಣಾ ನದಿಯ ಪ್ರವಾಹದಿಂದ ಹಲವಾರು ಗ್ರಾಮಗಳು ಜಲಾವೃತಗೊಂಡಿವೆ.ಜನರು ಬೀದಿಗೆ ಬಂದಿದ್ದಾರೆ.ಆಸ್ತಿ-ಪಾಸ್ತಿ ಹಾಳಾಗಿವೆ.ಕುಡಿಯಲು ನೀರಿಲ್ಲ.ತನ್ನಲು ಆಹಾರವಿಲ್ಲದೇ ಪರದಾಡುತ್ತಿದ್ದಾರೆ.ಇದರ ಮಧ್ಯೆ ಜನರ ಸಂಕಷ್ಟ ಅರಿಯಬೇಕಾದ ಸರ್ಕಾರ ಶಿರಾ ಚುನಾವಣೆಯಲ್ಲಿ ತೊಡಗಿದ್ದಾರೆ. ರೈತರು ಬೆಳೆದ ಬೆಳೆ ಸಂಪೂರ್ಣ ಹಾಳಾಗಿದೆ.ಜನರ ಬದಕು ತತ್ತರಿಸಿ ಹೋಗಿದೆ.ಆದರೂ ಇಲ್ಲಿಯವರೆಗೆ ಯಾವೊಬ್ಬ ಶಾಸಕ, ಸಂಸದ,ಸಚಿವರು, ಉಸ್ತುವಾರಿ ಸಚಿವರು, ಕೃಷಿ ಸಚಿವರು ಜನರ ಗೋಳು ಕೇಳುತ್ತಿಲ್ಲ. ಕೂಡಲೇ ರಾಜ್ಯ ಸರ್ಕಾರ ವಿಶೇಷ ಕ್ಯಾಕೇಜ್ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಶೀದ್ ಮರ್ಚಂಟ್, ಜಿಪಂ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ, ಭೀಮಣ್ಣ ಸಾಲಿ, ಚಿತ್ತಾಪೂರ ಎಪಿಎಮ್ಸಿ ಅಧ್ಯಕ್ಷ ಸಿದ್ದುಗೌಡ ಅಫಜಲಪೂರಕರ್, ಶರಣಗೌಡ ಪಾಟೀಲ ಗೋಳಾ, ಭೀಮುಗೌಡ ಖೇಣಿ, ರುದ್ರಗೌಡ, ಮಾಣಿಕಗೌಡ, ಮೃತ್ಯಂಜಯ ಹಿರೇಮಠ, ನಾಗೇಂದ್ರ ನಾಟೇಕಾರ, ಗಿರೀಶ ಕಂಬಾನೂರ,ಕುಮಾರ ಚವ್ಹಾಣ, ಸೂರ್ಯಕಾಂತ ಕೋಬಾಳ,ಡಾ. ಅಹ್ಮದ್ ಪಟೇಲ್,ರಾಜೇಶ ಯನಗುಂಟಿಕರ್, ಹಾಷಮ ಖಾನ ಇತರರು ಇದ್ದರು.