ಕಲಬುರಗಿ: ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ ತಮ್ಮ ಕ್ಷೇತ್ರದ ಗ್ರಾಮವಾದ ಲಿಂಗೈನವಾಡಿ ಗ್ರಾಮದಲ್ಲಿ ಮಳೆ ಸುರಿದರಿಂದ ಗ್ರಾಮದಲ್ಲಿ ಅಪಾರ ಬೆಳೆ ಹಾನಿಯಾಗಿವೆ. ಶಾಸಕರಾದ ತಾವೂಗಳು ಇದುವರೆಗೂ ಲಿಂಗೈನವಾಡಿ ಗ್ರಾಮಕ್ಕೆ ಭೇಟಿ ನೀಡಿಲ್ಲ.
ಕೂಡಲೇ ತಾವೂಗಳು ಭೇಟಿ ನೀಡಿ ಮಳೆ ಹಾನಿ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಗ್ರಾಮಸ್ಥರಾದ ವಿಜಯಕುಮಾರ್ ವಾಡೇಕರ್ , ಶರಣಪ್ಪ ಕೊಳ್ಳೂರ , ಸಚೀನ ಕೊಳ್ಳೂರ , ಮಲ್ಲು ಬಾಳಿ , ದತ್ತು ಎಡಿಗೆ , ರಿಜವಾನ್ ಮುಲ್ಲಾ , ಮಹೇಶ ವಾಗಮಡೆ ಸೇರಿದಂತೆ ಅನೇಕರು ಶಾಸಕ ಬಸವರಾಜ ಮತ್ತಿಮೂಡ ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಗ್ರಾಮದ ಶರಣಬಸಪ್ಪ ಕೊಳ್ಳೂರ ಅವರ 50 ಕ್ವಿಂಟಲ್ ಉಳ್ಳಾಗಡಿ ಗಾದಗಿ ಸಂಪೂರ್ಣವಾಗಿ ಮಳೆಯಿಂದ ಕೊಚ್ಚಿ ಹೋಗಿದೆ.
ಈಗಾಗಲೇ ತಾವೂಗಳು ಕುರಿಕೋಟಾ , ಜವಳಗಾ , ಶ್ರೀಚಂದ , ಸಿರಗಾಪೂರ , ಕಣ್ಣೂರ , ಮಾಲಗತ್ತಿ , ಮಹಾಗಾಂವ , ನಾಗೂರ , ಚಿಂಚನಸೂರ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದೀರಿ ಆದರೆ ತಮ್ಮ ಕ್ಷೇತ್ರದಲ್ಲಿ ಬರುವ ಲಿಂಗೈನವಾಡಿ ಗ್ರಾಮಕ್ಕೆ ಯಾಕೆ ಭೇಟಿ ನೀಡುತ್ತಿಲ್ಲ ಎಂದು ಪ್ರಶ್ನಿಸಿದರು ? ದಯಮಾಡಿ ತಾವೂಗಳು ಕೂಡಲೇ ಲಿಂಗೈನವಾಡಿ ಗ್ರಾಮಕ್ಕೆ ಭೇಟಿ ನೀಡಿ ಮಳೆ ಹಾನಿ ಬಗ್ಗೆ ಪರಿಶೀಲನೆ ಮಾಡಬೇಕೆಂದು ಈ ಮೂಲಕ ಅವರು ಮನವಿ ಮಾಡಿದ್ದಾರೆ.