ಕಲಬುರಗಿ: ಭಾರತೀಯ ಜನತಾ ಪಾರ್ಟೀಯ ಆಳಂದ ಮಂಡಳ ಯುವಮೋರ್ಚಾದ ನೂತನ ಪದಾಧಿಕಾರಿಗಳನ್ನು ಆಳಂದ ಮಂಡಳ ಅಧ್ಯಕ್ಷರಾದ ಆನಂದಕುಮಾರ ಕೆ.ಮಾಲಿಪಾಟೀಲ್ ರವರ ಅನುಮತಿ ಮೇರೆಗೆ ನೇಮಕ ಮಾಡಿ ಜಿಲ್ಲಾ ಗ್ರಾಮಾಂತರ ಯುವಮೋರ್ಚಾ ಅಧ್ಯಕ್ಷರಾದ ಪ್ರವೀಣ ಸಿ ತೆಗನೂರ ರವರು ಆದೇಶಿಸಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಆಳಂದ ಮಂಡಳ ಯುವಮೋರ್ಚಾ ಪದಾಧಿಕಾರಿಗಳ ಪಟ್ಟಿ ಹೊಡಿಸಲಾಗಿದೆ ಅಧ್ಯಕ್ಷರಾಗಿ ಗುರುಲಿಂಗಪ್ಪಾ ಪಾಟೀಲ್, ಉಪಾಧ್ಯಕ್ಷರುಗಳಾಗಿ ಲಿಂಗರಾಜ ಉಡಗಿ, ಪ್ರಕಾಶ ತೋಳೆ, ಮಹಾಂತೇಶ ಪೂಜಾರಿ, ಮಹಾಂತೇಶ ಬಿರೇದಾರ, ಪ್ರ.ಕಾರ್ಯದರ್ಶಿಯಾಗಿ ಕುಮಾರ ಬಂಡೆ, ಸದಾನಂದ ಗಂಗಾರಾಮ ಪವಾರ, ಕಾರ್ಯದರ್ಶಿಗಳಾಗಿ ಧರೇಪ್ಪ ಜಕಾಪೂರ, ಶುಭಂ ಮಹಾದೇವ ಪಾಟೀಲ್, ಮಹಾಂತೇಶ ಕಲಶೆಟ್ಟಿ, ಬಸವರಾಜ ಪಾಟೀಲ್, ಖಜಾಂಚಿ ಸುನೀಲ ಬಿರೇದಾರ ಇವರುಗಳನ್ನು ನೇಮಕ ಮಾಡಿ ಆದೇಶವನ್ನು ಹೊರಡಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಗ್ರಾಮಾಂತರ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ಸಿ.ತೆಗನೂರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.