ಕಲಬುರಗಿ: ಶಾಶ್ವತವಾಗಿ ಜನಪರ ಹೋರಾಟ ನಿಲ್ಲಿಸಿದ ಹಿರಿಯ ಹೋರಾಟಗಾರ,ಮಾಜಿ ಜಿಲ್ಲಾ ಪರಿಷತ್ ಸದಸ್ಯರಾದ ಮಾರುತಿ ಮಾನ್ಪಡೆ ಅವರ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಹಾಗೂ ನನಗೆ ಹೋರಾಟದ ದಿನಗಳಿಂದಲೂ ಆತ್ಮೀಯರಾಗಿದ್ದ ಅವರ ಅಗಲಿಕೆಯ ನನಗೆ ಅಪಾರ ನೋವುಂಟು ಮಾಡಿದೆ ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಅಂಬಾರಾಯ ಅಷ್ಠಗಿ ಸಂತಾಪ ಸೂಚಿಸಿದ್ದಾರೆ.
ರೈತರ ಹಾಗೂ ಕಾರ್ಮಿಕರ ಪರ ಹೋರಾಟಗಾರನ ಆತ್ಮಕ್ಕೆ ಚಿರಶಾಂತಿ ದೊರೆಯಲಿ.ಅವರ ಕುಟುಂಬ ಹಾಗೂ ಅಭಿಮಾನಿ ಬಳಗಕ್ಕೆ ದು:ಖ ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಅಂಬಾರಾಯ ಅಷ್ಠಗಿ ಪ್ರಾರ್ಥಿಸಿದ್ದಾರೆ.