ಕವಿತಾಳ : ಭಾರತ ವಿದ್ಯಾರ್ಥಿ ಫೆಡರೇಶನ್ ( SFI ) ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ (DYFI) ಕವಿತಾಳ ಕವಿತಾಳ ಘಟಕವು ಪಟ್ಟಣದ ನಾಡ ತಹಶಿಲ್ದಾರರ ಕಚೇರಿ ಮುಂದೆ ಪ್ರತಿಭಟನೆ ಮಾಡಿ ರಾಜ್ಯದಲ್ಲಿ ಕೊರೋನಾ ಮಾಹಾಮಾರಿ ಸಾಂಕ್ರಾಮಿಕ ವೈರಸ್ ಬಂದು ಲಾಕ್ ಡೌನ್ ಆಗಿ ಶಾಲಾ – ಕಾಲೇಜು ಮತ್ತು ಹಾಸ್ಟೆಲ್ ಗಳು ಬಂದ್ ಆದ ನಂತರ ರಾಜ್ಯದ ವಿದ್ಯಾರ್ಥಿ ಸಮುದಾಯ ದೊಡ್ಡ ಪ್ರಮಾಣದಲ್ಲಿ ಸಂಕಷ್ಟಕ್ಕೆ ಸಿಲುಕಿ ಗಂಭೀರವಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಈಗ ಪೋಷಕ ಮತ್ತು ಪಾಲಕರು ಉದ್ಯೋಗ ವನ್ನು ಕಳೆದುಕೊಂಡು ಆದಾಯವಿಲ್ಲದೆ ಮಕ್ಕಳ ಶುಲ್ಕ ಕಟ್ಟಲು ಪರದಾಡುತ್ತಿದ್ದಾರೆ. ವಿದ್ಯಾರ್ಥಿಗಳ ಈ ಕೆಳಗೆ ಗುರುತು ಮಾಡಿದ ಶೈಕ್ಷಣಿಕ ಸಮಸ್ಯೆಗಳನ್ನು ಪರಿಹರಿಸಬೇಕೆಂದ ಒತ್ತಾಯಿಸಿದರು.
ಶಿಕ್ಷಣ ಹಕ್ಕು ಕಾಯ್ದೆ (RTE) ಕಾಯ್ದೆಯನ್ನು 9 & 10 ನೇ ತರಗತಿ ವರೆಗೆ ವಿಸ್ತರಿಸಲು ಹಾಗೂ ಆರ್.ಟಿ.ಇ ಅಡಿಯಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ದೊಡ್ಡ ಪ್ರಮಾಣದ ಡ್ರಾಪ್ ಔಟ್ ಆಗಿರುವ ಕುರಿತು ತನಿಖೆಗೆ ಆಗ್ರಹಿಸಿ ಸೂಕ್ತ ಗಮನ ಹರಿಸಬೇಕು. ಕೊರೋನಾ ದಿಂದ ಶಾಲೆಗಳನ್ನು ಮುಚ್ಚಿರುವ ಈ ಸಂದರ್ಭದಲ್ಲಿ ಅಕ್ಷರ ದಾಸೋಹದ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಆಹಾರ ಧಾನ್ಯಗಳನ್ನು ನೇರವಾಗಿ ವಿದ್ಯಾರ್ಥಿಗಳ ಮನೆಬಾಗಿಲಿಗೆ ತಲುಪಿಸಲು ಒತ್ತಾಯಿಸಿ, ಜೊತೆಗೆ 2015 ರಲ್ಲಿ ನೇಮಕಾತಿಯಾಗಿರುವ ಪಿಯು ಉಪನ್ಯಾಸಕ ಅಭ್ಯರ್ಥಿಗಳಿಗೆ ಈ ಕೂಡಲೇ ಆದೇಶ ಪತ್ರ ನೀಡಲು ಆಗ್ರಹಿಸಿ, ಮತ್ತು ವೃತ್ತಿಪರ ಹಾಸ್ಟೆಲ್ ಗಳನ್ನು ತೆರೆಯಲು ಮತ್ತು ಕ್ವಾರಂಟೈನ್ ಕೇಂದ್ರಗಳಾಗಿದ್ದ ಎಲ್ಲಾ ವಸತಿ ಶಾಲೆ ಮತ್ತು ಹಾಸ್ಟೆಲ್ ಗಳನ್ನು ಶುಚಿಗೊಳಿಸಿ, ಸ್ಯಾನಿಟೈಸರ್ ಮಾಡಿ ವಿದ್ಯಾರ್ಥಿಗಳ ಉಪಯೋಗ ಕ್ಕೆ ಅನುಕೂಲ ಮಾಡಿಕೊಡಬೇಕು ಹಾಗೂ ಬಾಕಿ ಇರುವ ವಿದ್ಯಾರ್ಥಿ ವೇತನ ಕೂಡಲೇ ಬಿಡುಗಡೆ ಮಾಡಬೇಕೆಂದು ಪ್ರತಿಭಟನೆ ಮಾಡಿ ಮನವಿ ಮುಖ್ಯ ಮಂತ್ರಿಗೆ ಬರೆದ ಮನವಿ ಪತ್ರವನ್ನು ಗ್ರಾಮ ಲೆಕ್ಕಿಗ ಸದಾಕಲಿಯ ಮುಖಾಂತರ ಕಳುಹಿಸಿ ಕೊಟ್ಟರು.
ಈ ಸಂಧರ್ಭದಲ್ಲಿ SFI ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, ನಗರ ಘಟಕದ ಅಧ್ಯಕ್ಷರಾದ ಮೌನೇಶ ಬುಳ್ಳಾಪುರ, ಕಾರ್ಯದರ್ಶಿ ವೆಂಕಟೇಶ, ಉಪಾಧ್ಯಕ್ಷ ನಾಗಮೋಹನ್ ಸಿಂಗ್, ಮುಖಂಡರಾದ ಮೂಕಪ್ಪ, ಮಲ್ಲಿಕಾರ್ಜುನ, ದೇವರಾಜ್, ಪ್ರಭು ಸೇರಿ ಅನೇಕರಿದ್ದರು.