ಕಲಬುರಗಿ: ನಿನ್ನೆ ಜಿಲ್ಲೆಯ ಹಿರಿಯ ಹೋರಾಟಗಾರರ ಕೋವಿಡ್ ಸೋಂಕಿನಿಂದ ನಿಧನರಾದ ಮಾರುತಿ ಮಾನ್ಪಡೆ ಅವರ ಅಂತ್ಯ ಸಂಸ್ಕಾರ ಕಮಲಾಪುರ ತಾಲೂಕಿನ ಅಂಬಲಗಾ ಗ್ರಾಮದಲ್ಲಿ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ, ಕೆಂಪು ವಂದನೆಗಳ ಜೈಕಾರದ ನಡುವೆ ನೆರವೇರಿಸಲಾಯಿತು.
ಇಂದು ಪೂರ್ವಹ್ನ ಮಾರುತಿ ಮಾನ್ಪಡೆ ಪಾರ್ಥಿವ ಶರೀರ ಸೊಲ್ಲಾಪುರದಿಂದ ಅಂಬುಲೆನ್ಸ್‌ನಲ್ಲಿ ತರಲಾಯಿತು. ಈ ವೇಳೆಯಲ್ಲಿ ಲಾಡಮುಗಳಿ, ಮುನ್ನಳ್ಳಿ, ಬೆಳಮಗಿ, ಅಂಬಲಗಾ ಕ್ರಾಸ್‌ನಲ್ಲಿ ನಿಂತಿದ್ದ ಸಾವಿರಾರು ಮಂದಿ ಮತ್ತು ಸಿಪಿಎಂ ಕಾರ್ಯಕರ್ತರು ಪಾರ್ಥಿವ ಶರೀರಕ್ಕೆ ಹೂಗಳು ಹಾಕಿ ಕೆಂಪು ವಂದನೆಗಳ ಜೈಕಾರ ಹಾಕುವ ಮೂಲಕ ವಂದನೆ ಸಲ್ಲಿಸಿದರು.
ಮಾನ್ಪಡೆ ಅವರ ಅಂತ್ಯ ಸಂಸ್ಕಾರದ ವೇಳೆ ಕೋವಿಡ್-19 ಮುಂಜಾಗ್ರತೆಗಾಗಿ ಕುಟುಂಬಸ್ಥರು ಸೇರಿ 20 ಮಂದಿ ಪಿಪಿಟಿ ಕಿಟ್ ಧರಿಸಿದ್ದವರಿಗೆ ಮಾತ್ರ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಯಿತು.
ಸಿಪಿಎಂ ಪಕ್ಷದ ಕಾರ್ಯದರ್ಶಿ ಶರಣಬಸಪ್ಪ ಮಮಶೇಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಭೀಮಶಂಕರ ಮಾಡಿಯಾಳ, ಯು.ಬಸವರಾಜು. ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮಿ, ಗ್ರಾಮ ಪಂಚಾಯತ್ ನೌಕರರ ಸಂಘದ ರಾಜ್ಯ ಖಜಾಂಚಿ ಬಸವರಾಜ ಸರಡಗಿ, ಹಾಗೂ ಪ್ರಗತಿಪರ ಸಂಘಟನೆಗಳ ನಾಯಕರು ಅತ್ಯಂಸ್ಕಾರದಲ್ಲಿ ಭಾಗವಹಿಸಿದರು.
ಈ ವೇಳೆಯಲ್ಲಿ ಕಮಲಾಪುರ ತಾಲೂಕಿನ ತಹಶೀಲ್ದಾರ್, ಆರೋಗ್ಯ ಸಿಬ್ಬಂದಿ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರ ನೇರವೆರಿತು.