ಸುರಪುರ: ಮಂಗಳವಾರ ಕೊರೊನಾ ಸೊಂಕಿನಿಂದ ನಿಧನರಾದ ಹಿರಿಯ ಕಾರ್ಮಿಕ ಹೋರಾಟಗಾರ ಹಾಗು ಮಾರ್ಕ್ಸವಾದಿ ಮಾರುತಿ ಮಾನ್ಪಡೆಯವರ ನಿಧನಕ್ಕೆ ಸುರಪುರದ ಗರುಡಾದ್ರಿ ಕಲಾ ಮಂದಿರದಲ್ಲಿ ಪ್ರಗತಿಪರರಿಂದ ಸಂತಾಪ ಸಭೆ ನಡೆಸಲಾಯಿತು.
ಸಭೆಯ ಆರಂಭದಲ್ಲಿ ಮಾರುತಿ ಮಾನ್ಪಡೆಯವರ ಭಾವಚಿತ್ರಕ್ಕೆ ಕ್ಯಾಂಡಲ್ ಬೆಳಗಿ ಮಾಲಾರ್ಪಣೆ ಮಾಡಿ ನಂತರ ಎರಡು ನಿಮಿಷಗಳ ಮೌನಾಚರಣೆಯೊಂದಿಗೆ ಶ್ರದ್ಧಾಂಜಲಿ ಅರ್ಪಿಸಿದರು.ನಂತರ ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಮುಖಂಡರು ಮಾತನಾಡಿ,ಮಾರುತಿ ಮಾನ್ಪಡೆ ಒಬ್ಬ ಧೀಮಂತ ಹೋರಾಟಗಾರರಾಗಿದ್ದರು ಅವರು ಇಡೀ ನಾಡಿನುದ್ದಕ್ಕೂ ಸಂಚರಿಸಿ ರೈತ ಕಾರ್ಮಿಕ ಹಾಗು ಶೋಷಿತರಿಗಾಗಿ ಹೋರಾಟ ನಡೆಸಿದ್ದಾರೆ.
ಅವರೊಬ್ಬ ತುಂಬಾ ಸರಳಜೀವಿ ವ್ಯಕ್ತಿಯಾಗಿದ್ದರು.ಎಲ್ಲೆ ಹೋರಾಟವಿರಲಿ ಅಲ್ಲಿ ಯಾವುದೇ ಹಮ್ಮು ಬಿಮ್ಮುಗಳಿಲ್ಲದೆ ಭಾಗವಹಿಸಿ ಹೋರಾಟ ಯಶಸ್ವಿಯಾಗುವವರೆಗೆ ಬಿಡದಂತ ಗಟ್ಟಿತನ ಅವರಲ್ಲಿತ್ತು.ಇಂದು ಪಂಚಾಯತಿಗಳಲ್ಲಿ ಕೆಲಸ ಮಾಡುವವರು ಸರಕಾರಿ ನೌಕರರಾಗಿರುವಲ್ಲಿ ಮಾರುತಿ ಮಾನ್ಪಡೆಯವರ ಕೊಡುಗೆ ಇದೆ ಎಂದರು.ಅಂತಹ ವ್ಯಕ್ತಿ ಇಂದು ಕೊರೊನಾಕ್ಕೆ ಬಲಿಯಾಗಿರುವುದು ಕಾರ್ಮಿಕ ವರ್ಗಕ್ಕೆ ತುಂಬಲಾರದ ನಷ್ಟವುಂಟಾಗಿದೆ.ಅವರು ನಮ್ಮೊಂದಿಗಿಲ್ಲದಿದ್ದರು ಅವರ ವಿಚಾರಗಳನ್ನು ನಮ್ಮೊಳಗೆ ಅಳವಡಿಸಿಕೊಂಡು ಅವರನ್ನು ಜೀವಂತವಾಗಿರಿಸುವ ಕೆಲಸ ಮಾಡೋಣ ಎಂದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಮಲ್ಲಿಕಾರ್ಜುನ ಸತ್ಯಂಪೇಟೆ ದೇವಿಂದ್ರಪ್ಪ ಪತ್ತಾರ ಯಲ್ಲಪ್ಪ ಚಿನ್ನಾಕಾರ ಮಲ್ಲಯ್ಯ ಕಮತಗಿ ಅಹ್ಮದ ಪಠಾಣ್ ಸಿದ್ದಯ್ಯ ಸ್ಥಾವರಮಠ ಮೂರ್ತಿ ಬೊಮ್ಮನಹಳ್ಳಿ ವೆಂಕೋಬ ದೊರೆ ಬೊಮ್ಮನಹಳ್ಳಿ ರಾಜಾ ಅಪ್ಪಾರಾವ್ ನಾಯಕ ಸುರೇಖಾ ಕುಲಕರ್ಣಿ ಬಸ್ಸಮ್ಮ ಆಲ್ಹಾಳ ಭೀಮರಾಯ ಸಿಂದಗೇರಿ ಬುಚ್ಚಪ್ಪ ನಾಯಕ ಉಸ್ತಾದ ವಜಾಹತ್ ಹುಸೇನ್ ರಾಮಯ್ಯ ಆಲ್ಹಾಳ ನಸೀಮಾ ಮುದನೂರ ಹಣಮಂತ್ರಾಯ ಮಡಿವಾಳ ಅನ್ನಪೂರ್ಣ ಹಿರೇಮಠ ಮಲ್ಲಿಕಾರ್ಜುನ ಕಮತಗಿ ಸೇರಿದಂತೆ ಅನೇಕರಿದ್ದರು.