ಸುರಪುರ: ರಾಜ್ಯದಲ್ಲಿರುವ ಪರಿಶಿಷ್ಟ ಪಂಗಡಕ್ಕೆ ೭.೫ಕ್ಕೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಲೋಕ ಜನಶಕ್ತಿ ಪಕ್ಷದ ಜಿಲ್ಲಾಧ್ಯಕ್ಷ ರಾಜಾ ಅಪ್ಪಾರಾವ್ ನಾಯಕ ಸರಕಾರಕ್ಕೆ ಒತ್ತಾಯಿಸಿದರು.
ಈ ಕುರಿತು ಸುರಪುರ ತಹಸೀಲ್ದಾರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿ,ರಾಜ್ಯದಲ್ಲಿನ ಪರಿಶಿಷ್ಟ ಪಂಗಡದಲ್ಲಿ ಸುಮಾರು ೧ ಕೋಟಿಯಷ್ಟು ಜನಸಂಖ್ಯೆ ಇದೆ,ಆದರೆ ಈ ಸಮುದಾಯಕ್ಕೆ ಕೇವಲ ಪ್ರತಿಶತ ೩ ರಷ್ಟು ಮಾತ್ರ ಮೀಸಲಾತಿ ನೀಡುವ ಮೂಲಕ ಅಭೀವೃಧ್ಧಿಯನ್ನು ಕಸಿಯಲಾಗಿದೆ. ಆದ್ದರಿಂದ ಈ ಮೀಸಲಾತಿ ಪ್ರಮಾಣವನ್ನು ೭.೫ಕ್ಕೆ ಹೆಚ್ಚಿಸಬೇಕು ಅಂದಾಗ ಪರಿಶಿಷ್ಟ ಪಂಗಡ ಅಭಿವೃಧ್ಧಿ ಹೊಂದಲು ಸಾಧ್ಯವಿದೆ.ಆದ್ದರಿಂದ ಮುಖ್ಯಮಂತ್ರಿಗಳು ಕೂಡಲೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಆಗ್ರಹಿಸಿದರು.
ನಂತರ ಗ್ರೇಡ-೨ ತಹಸೀಲ್ದಾರ ಸೂಫಿಯಾ ಸುಲ್ತಾನ ಅವರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ದುರ್ಗಪ್ಪ ಬಡಿಗೇರ ತಾಲೂಕು ಅಧ್ಯಕ್ಷ ಅಯ್ಯಾಳಪ್ಪ ವನಕೇರಿ ವಕೀಲ ಬಲಭೀಮ ನಾಯಕ ದೇವಾಪುರ ಕನಕಾಚಲ ಜಾಗಿರದಾರ್ ಇತರರಿದ್ದರು.