ಕಾಮನಟಗಿ ಗ್ರಾಮಕ್ಕೆ ಆರೋಗ್ಯ ಕ್ಷೇಮ ಕೇಂದ್ರ ಮಂಜೂರಿಗೆ ಕರವೇ ಆಗ್ರಹ

0
55

ಯಾದಗಿರಿ: ಜಿಲ್ಲೆಯ ಹುಣಸಗಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟಿ ಎನ್ ನಾರಾಯಣಗೌಡರ ಬಣದ ತಾಲೂಕು ಘಟಕ ಮತ್ತು ಗ್ರಾಮ ಘಟಕ ಕಾಮನಟಗಿ ವತಿಯಿಂದ ತಾಲ್ಲೂಕಿನಲ್ಲಿ ಬರುವಂಥ ಕಾಮನಟಗಿ ಗ್ರಾಮಕ್ಕೆ ಆರೋಗ್ಯ ಕ್ಷೇಮ ಕೇಂದ್ರ ಮಂಜೂರು ಮಾಡಬೇಕೆಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವರಿಗೆ ಹುಣಸಗಿ ತಹಸೀಲ್ದಾರ ವಿನಯ್ ಕುಮಾರ್ ಪಾಟೀಲ್ ಅವರ ಮುಖಾಂತರ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ತಾಲೂಕ ಅಧ್ಯಕ್ಷ ಶಿವಲಿಂಗ ಸಾಹು ಪಟ್ಟಣಶೆಟ್ಟಿ ಕಾಮನಟಗಿ ಗ್ರಾಮದಲ್ಲಿ ಸರಿಸುಮಾರು ನಾಲ್ಕೂವರೆ ಸಾವಿರ ದಿಂದ 5 ಸಾವಿರ ಜನಸಂಖ್ಯೆಯಿದ್ದು ಆರೋಗ್ಯದ ಸಮಸ್ಯೆ ಉಂಟಾದರೆ ಜನರು ಬೇರೆ ಬೇರೆ ಊರಿಗೆ ಹೋಗಿ ಚಿಕಿತ್ಸೆ ಪಡೆದುಕೊಂಡು ಬರುವಂಥದ್ದು ಅನಿವಾರ್ಯವಾಗಿದೆ ಎಂದರು.

Contact Your\'s Advertisement; 9902492681

ಗ್ರಾಮದಲ್ಲಿ ಸಣ್ಣ ಸಣ್ಣ ಮಕ್ಕಳು ಮತ್ತು ಗರ್ಭಿಣಿಯರಿಗೆ ಹತ್ತಿರವಾಗಿ ಆಸ್ಪತ್ರೆ ಇಲ್ಲದೆ ಇರುವುದರಿಂದ ಹಲವಾರು ರೋಗ ರುಜಿನಗಳಿಗೆ ತುತ್ತಾಗಿ ಪ್ರಾಥಮಿಕ ಚಿಕಿತ್ಸೆ ಲಭ್ಯ ಇಲ್ಲದೆ ಕಾಮನಟಗಿ ಗ್ರಾಮದಲ್ಲಿ ಸಾವನ್ನಪ್ಪಿರುವ ಘಟನೆಗಳು ನಡೆದಿರುತ್ತವೆ.

ಚಿಕಿತ್ಸೆಗೆ ಬೇರೆ ಬೇರೆ ಊರಿಗೆ ಹೋಗುವುದು ಸರ್ವೇ ಸಾಮಾನ್ಯ ಮತ್ತು ಅಲ್ಲಿ ಹೋಗುವುದರಿಂದ ಬಡತನದಲ್ಲಿ ಇರುವಂಥ ಸಾಮಾನ್ಯ ಜನರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುವುದು ತುಂಬಾ ಕಷ್ಟಕರವಾದಂತಹ ಸಂಗತಿ ಆದುದರಿಂದ ಗ್ರಾಮದಲ್ಲಿ ಸರಕಾರಿ ಖುಲ್ಲಾ ಜಾಗವಿದ್ದು ಮತ್ತು ಸರಕಾರಿ ಕಟ್ಟಡವಿದ್ದು ಅಲ್ಲಿಯೇ ಪ್ರಾಥಮಿಕ ಹಂತದಲ್ಲಿ ಗ್ರಾಮದ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಾಮದ ಜನರಿಗೆ ಆರೋಗ್ಯ ಕ್ಷೇಮ ಕೇಂದ್ರ ಅತ್ಯವಶ್ಯಕವಾಗಿದೆ ಗ್ರಾಮಕ್ಕೆ ಮಂಜೂರು ಮಾಡಿಸಿ ಕೊಡಬೇಕೆಂದರು.

ಈ ಸಂದರ್ಭದಲ್ಲಿ ಕರವೇ ತಾಲೂಕು ಘಟಕ ಕಾರ್ಯಕರ್ತರು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here