ಶಹಾಪುರ: ಇತ್ತೀಚಿಗೆ ಸುರಿದ ಭಾರೀ ಮಳೆಯಿಂದಾಗಿ ತೊಗರಿ, ಹತ್ತಿ, ಹೆಸರು ಸೇರಿದಂತೆ ರೈತರು ಬಿತ್ತಿದ ಅನೇಕ ಬೆಳೆಗಳು ಸಂಪೂರ್ಣ ನಾಶವಾಗಿದ್ದು, ತಾಲ್ಲೂಕಿನ ಯಕ್ಷಂತಿ ಗ್ರಾಮದ ಹೊಲಗಳಲ್ಲಿ ಬೆಳೆದಿದ್ದ ಹತ್ತಿ ಮಳೆಯಿಂದಾಗಿ ಸಂಪೂರ್ಣವಾಗಿ ನೆಲಕಚ್ಚಿ ಹಾಳಾಗಿ ಹೋಗಿದೆ.
ಕಳೆದ ವರ್ಷ ಪ್ರವಾಹ ಬಂದು ಎಲ್ಲ ಬೆಳೆ ನಷ್ಟವಾಗಿತ್ತು. ಈ ವರ್ಷ ಸಾಲಮಾಡಿ ಮುಂಗಾರು ಹತ್ತಿ ತೊಗರಿ ಬಿತ್ತಿದ್ದರು. ಬೆಳೆ ಚೆನ್ನಾಗಿ ಬೆಳೆದಿದ್ದವು ಹತ್ತಿ ಹೊಡದಿತ್ತು. ಹೆಚ್ಚು ಮಳೆಯಾದ ಕಾರಣ ಹತ್ತಿಯೊಳಗ ನೀರು ನಿಂತು ಸಸಿ ಹೊಡೆದು ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.
ಯಕ್ಷಿಂತಿ ಗ್ರಾಮದ ಎಲ್ಲ ರೈತರ ಪರಿಸ್ಥಿತಿ ಇದೇ ತೆರನಾಗಿದ್ದು, ಸರ್ವೆ ನಂಬರ್ 252 ರಲ್ಲಿ ರಮಣಯ್ಯ ತಂದೆ ಯಂಕಪ್ಪ ಹೊಲದಲ್ಲಿ ಈ ಮತ್ತೆ ಮೊಳಕೆಯೊಡೆದ ಹತ್ತಿ ಬೆಳೆಯ ದೃಶ್ಯ ರೈತನ ಶೋಚನೀಯ ಸ್ಥಿತಿಯನ್ನು ವಿವರಿಸುವಂತಿದೆ.