ಕಲಬುರಗಿ: ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಕಲಿ ರಕ್ಷಣಾ ಕಾರ್ಯಚಾರಣೆ ನಡೆಸಿ ಸಿಕ್ಕಾಕಿಗೊಂಡ
ಜೇವರ್ಗಿ ತಾಲ್ಲೂಕಿನ ನೆಲೋಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಲ್ಲಣ್ಣ ಯಲಗೊಂಡ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಎಸ್ಪಿ ಸಿಮಿ ಮರಿಯಮ್ ಜಾರ್ಜ್ ಆದೇಶ ಹೊರಡಿಸಿದ್ದಾರೆ.
ಕಲಬುರಗಿ ಜಿಲ್ಲಾದ್ಯಂತ ಪ್ರವಾಹದಿಂದ ತತ್ತರಿಸುವ ವೇಳೆಯಲ್ಲಿ ಪಿ.ಎಸ್.ಐ ಸಾಹೇಬರು ಜನರ ಮತ್ತು ಪ್ರಾಣಿಗಳ ರಕ್ಷಿಸಿದಂತೆ ನಕಲಿ ವಿಡಿಯೋಗಳನ್ನು ಸೃಷ್ಠಿಸಿ ಪೋಸೋ ಕೊಟ್ಟಿದ ವಿಡಿಯೋಗಳು ವೈರಲ್ ಆಗಿದ್ದು, ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆ ಮಾಡಿದ ಈ ರೀತಿ ನಕಲಿ ಕಾರ್ಯಾಚರಣೆ ನಡೆಸಿರುವ ನಾಟಕಿಯ ಮಾಡಿದ್ದು ಸರಿಯಲ್ಲ ಎಂದು ಎಸ್.ಪಿ ತಮ್ಮ ಅಮಾನುತುಗೊಳಿಸಿದ ಆದೇಶದಲ್ಲಿ ತಿಳಿಸಿದ್ದಾರೆ.
ಇದೇ ಪೊಲೀಸ್ ಅಧಿಕಾರಿ ಹುಟ್ಟುಹಬ್ಬಕ್ಕೆ ಕ್ಷೀರಾಭೀಷೇಕ ಮಾಡಿಸಿಕೊಂಡು ರೀತಿಗೆ ಯಲಗೊಂಡ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು.