ಶಹಾಪುರ: ದೇಶಾಭಿಮಾನಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟು ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಮಹಿಳೆ ಕಿತ್ತೂರಾಣಿ ಚನ್ನಮ್ಮಳಗೆ ಅವಮಾನ ಮಾಡಿದ ಶಹಾಪುರ ತಾಲ್ಲೂಕು ತಹಶೀಲ್ದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಮಾಜದ ಜಿಲ್ಲಾಧ್ಯಕ್ಷರಾದ ಗುರು ಹೊಸೂರು ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ .
ಅಕ್ಟೋಬರ್ 23 ರಂದು ವೀರರಾಣಿ ಕಿತ್ತೂರ ಚನ್ನಮ್ಮಳ ಜಯಂತ್ಯುತ್ಸವ ಅಂಗವಾಗಿ ಶಹಾಪುರ ತಾಲ್ಲೂಕು ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ಕಾಟಾಚಾರಕ್ಕಾಗಿ ಪೂಜೆ ಸಲ್ಲಿಸಿ ಕೈತೊಳೆದುಕೊಂಡಿದ್ದಾರೆ ಸೌಜನ್ಯಕ್ಕಾದರೂ ಸಮಾಜದ ಯಾವೊಬ್ಬ ಮುಖಂಡರಿಗೆ ಮಾಹಿತಿ ಕೂಡ ನೀಡಿಲ್ಲ.ಪ್ರಜ್ಞಾವಂತರಾದ ದಂಡಾಧಿಕಾರಿಗಳೇ ಈ ರೀತಿ ನಡೆದುಕೊಂಡರೆ ಇನ್ನೂ ಸಾಮಾನ್ಯ ಜನರ ಪಾಡೇನು ಎಂಬುದು ಅವಲೋಕಿಸಬೇಕಾಗಿದೆ ಎಂದು ಮಲ್ಲಿಕಾರ್ಜುನ ಆವಂಟಿ ಹೇಳಿದರು.
ಇನ್ನೂ ವಿಶೇಷತೆಯೇನಂದರೆ ಕಸಗುಡಿಸುವ ಕ್ಕಿಂತ ಮೊದಲೇ ಪೂಜೆ ಸಲ್ಲಿಸಿರುವುದು ಕಿತ್ತೂರು ರಾಣಿ ಚನ್ನಮ್ಮಳಿಗೆ ಅವಮಾನ ಮಾಡಿದಂತಾಗಿದೆ ಎಂದು ಸಮಾಜದ ಹಿರಿಯ ಮುಖಂಡರಾದ ದೇವಿಂದ್ರಪ್ಪ ತೋಟಗೇರ ಆರೋಪಿಸಿದ್ದಾರೆ.ಅಲ್ಲದೆ ವೈಯಕ್ತಿಕವಾಗಿ ನಮಗೆ ಹಾಗೂ ಸಮಾಜಕ್ಕೆ ತೀವ್ರ ನೋವನ್ನುಂಟು ಮಾಡಿದೆ ಎಂದು ಹೇಳಿದರು.ಬೇಜವಾಬ್ದಾರಿ ತೋರಿದ ತಹಸೀಲ್ದಾರ್ ಹಾಗೂ ಸಿಬ್ಬಂದಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಈ ಮೂಲಕ ಎಚ್ಚರಿಕೆ ನೀಡಿದ್ದಾರೆ.