ಸಂತ್ರಸ್ತರಿಗೆ ನೌಕರರ ಸಂಘದಿಂದ ಮೂಲಭೂತ ಸೌಕರ್ಯಗಳ ಕಿಟ್ ವಿತರಣೆಗೆ ಚಾಲನೆ

0
57

ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಪದಾಧಿಕಾರಿಗಳ ವೈಯಕ್ತಿಕ ದೇಣಿಗೆಯಿಂದ ಜಿಲ್ಲೆಯ ಪ್ರವಾಹ ಪೀಡಿತ ಸಂತ್ರಸ್ತರಿಗೆ ವಿತರಿಸಲಾಗುತ್ತಿರುವ ಅವಶ್ಯಕ ವಸ್ತುಗಳ ಕಿಟ್ ವಿತರಣೆಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಡಾ.ಪಿ.ರಾಜಾ ಅವರು ಗುರುವಾರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮೂಲಭೂತ ಸೌಕರ್ಯಗಳ ಕಿಟ್ ಹೊಂದಿರುವ ಐದು ಕೂಸರ್ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲೆಯ ಸರ್ಕಾರಿ ನೌಕರರು ಇತ್ತೀಚಿನ ಪ್ರವಾಹದಿಂದ ಸಂಕಷ್ಟದಲ್ಲಿರುವ ಜಿಲ್ಲೆಯ ನೆರ ಸಂತ್ರಸ್ತರಿಗೆ ಸಹಾಯಕ್ಕೆ ಸ್ಪಂದಿಸುವ ಸಾಮಾಜಿಕ ಕಾರ್ಯಕ್ಕೆ ಮುಂದಾಗಿರುವುದು ಸಂತಸ ಮತ್ತು ಸಮುದಾಯಕ್ಕೆ ಉತ್ತಮ ಸಂದೇಶವಾಗಿದೆ ಎಂದು ಸಂಘದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ಸುಮಾರು ೧೦೦೦ ಕಿಟ್‌ಗಳನ್ನು ಅಫಜಲಪುರ ಮತ್ತು ಜೇವರ್ಗಿ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ನೌಕಕರ ಸಂಘದ ಪದಾಧಿಕಾರಿಗಳೇ ಖುದ್ದಾಗಿ ಹೋಗಿ ವಿತರಿಸಲಿದ್ದಾರೆ ಎಂದರು.

Contact Your\'s Advertisement; 9902492681

ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ ಮಾತನಾಡಿ ಭೀಕರ ಪ್ರಹಾದಿಂದ ಜಿಲ್ಲೆಯ ಭೀಮಾ ಮತ್ತು ಕಾಗಿಣಾ ನದಿ ದಂಡೆಯ ಗ್ರಾಮಸ್ಥರು ಮನೆ-ಮಠ ಕಳೆದಕೊಂಡು ತ್ತರಿಸಿ ಹೋಗಿದ್ದಾರೆ. ಅವರ ನೆರವಿಗೆ ಧಾವಿಸಬೇಕೆಂಬ ಅಭಿಲಾಷೆಯಿಂದ ಒಂದು ಚಿಕ್ಕ ಅಳಿಲು ಸೇವೆಯಾಗಿ ಕಿಟ್ ವಿತರಣೆ ಮಾಡಲಾಗುತ್ತಿದೆ. ಸಂಘದ ಪದಾಧಿಕಾರಿಗಳು ವೈಯಕ್ತಿಕ ಹಣವನ್ನು ಸಂಗ್ರಹಿಸಿ ನಿರಾಶ್ರಿತರಿಗೆ ಅಗತ್ಯ ಮೂಲಸೌಕರ್ಯಗಳ ಕಿಟ್ ನೀಡಲಾಗುತ್ತಿದೆ. ಬ್ಲ್ಯಾಂಕೆಟ್, ಮಾಸ್ಕ್, ಬಿಸ್ಕತ್, ಬಾತ್ ಸೋಪ್, ಬಟ್ಟೆ ಸೋಪ್, ಕೊಬ್ಬರಿ ಎಣ್ಣೆ, ಟೂತ್ ಪೇಸ್ಟ್, ಬ್ರಶ್, ಮಾಸ್ಕಿಟೊ ಕಾಯಿಲ್, ಜಂಡು ಬಾಮ್ ಸೇರಿದಂತೆ ಇನ್ನಿತರ ೨೦ ವಸ್ತುಗಳನ್ನು ಕಿಟ್ ಹೊಂದಿದೆ.
ಇಂದು ೫ ಕ್ರೂಸರ್ ವಾಹನಗಳು ಅಫಜಲಪೂರ್, ಜೇವರ್ಗಿಯಲ್ಲಿ ಕಿಟ್ ವಿತರಣೆಗೆ ತೆರಳಲಿವೆ. ಶುಕ್ರವಾರ ಚಿತ್ತಾಪುರ ತಾಲೂಕಿನ ಪ್ರವಾಹ ಪೀಡಿತ ಪ್ರದೇಶದಲ್ಲಿ ಕಿಟ್ ವಿತರಣೆ ಮಾಡಲಾಗುವುದು ಎಂದು ರಾಜು ಲೇಂಗಟಿ ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅಬ್ದುಲ್ ಅಜೀಮ್, ಉಪಾಧ್ಯಕ್ಷರಾದ ಎಂ.ಬಿ.ಪಾಟೀಲ, ಚಂದ್ರಕಾಂತ ಏರಿ, ಅಣ್ಣಾರಾವ ಹಾಬಾಳಕರ್, ಪ್ರಧಾನ ಕಾರ್ಯದರ್ಶಿ ವೆಂಕಟರಾವ ಇಟಗಿ, ಖಜಾಂಚಿ ಸತೀ? ಕೆ. ಸಜ್ಜನ್, ರಾಜ್ಯ ಪರಿ?ತ್ ಸದಸ್ಯರಾದ ಹಣಮಂತರಾಯ ಬಿ. ಗೋಳಸಾರ, ಗಣೇಶ ಕಮ್ಮಾರ, ಕೇಂದ್ರ ಸಂಘದ ಸಂಘಟನಾ ಕಾರ್ಯದರ್ಶಿ ಸಿದ್ಧಲಿಂಗಯ್ಯ ಮಠಪತಿ, ಚಿತ್ತಾಪೂರ ತಾಲೂಕಾಧ್ಯಕ್ಷ ಬಸವರಾಜ ಬಳ್ಳೂಂಡಗಿ, ಕಿಟ್ ವಿತರಣೆಯ ಉಸ್ತುವಾರಿ ಉದಯಕುಮಾರ ಮೋದಿ, ಜಂಟಿ ಕಾರ್ಯದರ್ಶಿ ಜಮೀಲ್, ಪ್ರಚಾರ ಸಮಿತಿ ಕಾರ್ಯದರ್ಶಿ ರವಿ ಮಿರಸ್ಕರ್, ಸಂಘದ ಸದಸ್ಯರಾದ ನಿಜಲಿಂಗಪ್ಪ ಕೋರಳ್ಳಿ, ರಾಜಕುಮಾರ ಸಾಲಿಮಠ, ಗುರುಲಿಂಗಪ್ಪ ಪಾಟೀಲ, ಶಿವಕುಮಾರ, ಅಶೋಕ ಶಾಬಾದಿ, ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹಣಮಂತ ಮರಡಿ ಸೇರಿದಂತೆ ಇನ್ನಿತರ ಪದಾಧಿಕಾರಿಗಳು ಇದ್ದರು.

ಕಿಟ್ ವಿತರಣೆ: ಗುರುವಾರ ಅಫಜಲಪೂರ ತಾಲೂಕಿನ ಸೊನ್ನ, ಶಿರವಾಳ, ಇಂಚಗೇರಾ ಸಂತ್ರಸ್ತರಿರುವ ಅಫಜಲಪೂರ ಪಟ್ಟಣ ಕಾಳಜಿ ಕೇಂದ್ರ, ಕೆರೆಬೋಸಗಾ, ದುದ್ಧಣಗಿ, ಮಂಗಳೂರು, ಅಳ್ಳಗಿ(ಬಿ) ಗ್ರಾಮದಲ್ಲಿ ತಾಲೂಕಾಧ್ಯಕ್ಷ ರಾಜಕುಮಾರ ಗುಣಾರಿ ಅವರ ಸಮಕ್ಷಮದಲ್ಲಿ ಮತ್ತು ಜೇವರ್ಗಿ ತಾಲೂಕಿನ ಅಂಕಲಗಿ, ಇಟಗಾ, ಭೋಸಗಾ(ಬಿ), ಭೋಸಗಾ(ಕೆ) ಹಾಗೂ ಸಿದ್ಧನಾಳ ಗ್ರಾಮದಲ್ಲಿ ತಾಲೂಕಾಧ್ಯಕ್ಷ ಡಿ.ಬಿ.ಪಾಟೀಲ ಅವರ ನೇತೃತ್ವದಲ್ಲಿ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ರಾಜು ಲೇಂಗಟಿ ನೇತೃತ್ವದ ಪದಾಧಿಕಾರಿಗಳ ತಂಡ ಸಂತ್ರಸ್ತರಿಗೆ ಮೂಲಭೂತ ಸೌಕರ್ಯಗಳೊಂಡ ಕಿಟ್ ವಿತರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here